Actor Chetan Ahimsa: ದೇವರ ಹೆಸರು ಬಳಸಿ ಪ್ರಮಾಣವಚನ, ಸಿದ್ದರಾಮಯ್ಯ ಅವರಿಗೆ ಲೇವಡಿ ಮಾಡಿದ ಚೇತನ್ ಅಹಿಂಸಾ.
ದೇವರ ಹೆಸರಿನಲ್ಲಿ ಪ್ರಮಾಣ ವಚನ ಮಾಡಿದ ಸಿದ್ದರಾಮನಯ್ಯ ಅವರನ್ನು ಲೇವಡಿ ಮಾಡಿದ ಚೇತನ್ ಅಹಿಂಸಾ
Chetan Ahimsa Controversy: ನಿನ್ನೆ ಅಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ರಚನೆ ಆಗಿದೆ. ಸಿದ್ದರಾಮಯ್ಯ (Siddaramaiah) ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ.
ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರ ನಡೆಯಲಿದೆ.ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳ ಘೋಷಣೆಯನ್ನು ಮಾಡಿತ್ತು. ಇದೀಗ ಜನರು ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಗ್ಯಾರೆಂಟಿಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ.
ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ಬಗೆಗೆ ಟೀಕೆ ಮಾಡಿದ ನಟ ಚೇತನ್ ಅಹಿಂಸಾ
ನಟ ಹಾಗು ಸಾಮಾಜಿಕ ಹೋರಾಟಗಾರ ಆಗಿರುವ ಚೇತನ್ ಅಹಿಂಸಾ (Chetan Ahimsa) ಒಂದಲ್ಲ ಒಂದು ವಿಚಾರದಲ್ಲಿ ವಿವಾದಕ್ಕೆ ಒಳಗಾಗುತ್ತಾರೆ. ಇದರಿಂದ ನಟ ಚೇತನ್ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕೆಂಗಣ್ಣಿಗೆ ಗುರಿಟಿಯಾಗುತ್ತಿದ್ದಾರೆ. ಇದೀಗ ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಪ್ರಮಾಣ ವಚನ ಸ್ವೀಕರಿಸಿದ ವಿಚಾರವನ್ನು ಟೀಕಿಸಿದ್ದಾರೆ.
— Chetan Kumar Ahimsa / ಚೇತನ್ ಅಹಿಂಸಾ (@ChetanAhimsa) May 20, 2023
ನಟ ಚೇತನ್ ಅಹಿಂಸಾ ಟೀಕೆ
ವಿಚಾರವಾದಿ ಎಂದು ಕರೆಸಿಕೊಳ್ಳುವ ಸಿದ್ದರಾಮಯ್ಯ ಅವರು ಕರ್ನಾಟಕದ ಸಿಎಂ ಆಗಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದಾರಾ? ಯಾವ / ಯಾರು ದೇವರು ? ದೇವರು ಎಲ್ಲಿದ್ದಾನೆ? ಇದು ನಿರ್ಧಿಷ್ಟವಾದ ಸೈದ್ಧಾಂತಿಕ ಆರಂಭವಲ್ಲ ಎಂದಿದ್ದಾರೆ.
ನಿನ್ನೆ ಶನಿವಾರ ಕಂಠೀರವ ಸ್ಟೇಡಿಯಂ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕದ ನೂತನ ಸಿಎಂ ಆಗಿ ಸಿದ್ದರಾಮಯ್ಯ ಹಾಗು ಡಿಸಿಎಂ ಆಗಿ ಡಿಕೆ ಶಿವಕುಮಾರ್ ಪ್ರಮಾಣವಚನ ಸ್ವೀಕರಿಸಿದರು.ಈ ಕಾರ್ಯಕ್ರಮದಲ್ಲಿ 8 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ ಮಾಡಿದರು.ಇದನ್ನು ಪ್ರಶ್ನಿಸಿ ನಟ ಚೇತನ್ ಫೇಸ್ ಬುಕ್ ನಲ್ಲಿ ಟೀಕೆ ಮಾಡಿದ್ದಾರೆ.