Ahimsa Chetan Kumar: ದೀಪಿಕಾ ಪಡುಕೋಣೆ ವಿಷಯವನ್ನು ಕೇಸರಿ ಬಣ್ಣ ಹಿಂದುಗಳದ್ದೇ ಅಲ್ಲ ಇವರದ್ದು ಎಂದ ಚೇತನ್.

Chetan Speak About Deepika Padukone’s Saffron Bikini: ಬಾಲಿವುಡ್ ನ ದೀಪಿಕಾ ಪಡುಕೋಣೆ (Deepika Padukone) ಹಾಗೂ ಶಾರುಖ್ ಖಾನ್ (Shah Rukh  Khan) ಅಭಿನಯಿಸಿದ ಪಠಾಣ್ (Pathan) ಚಿತ್ರ ಇದೀಗ ಬಾರಿ ವಿವಾದಕ್ಕೆ ಒಳಗಾಗಿದೆ. ದೀಪಿಕಾ ಪಡುಕೋಣೆ ಭೇಷ್ ರಂಗ್ ಹಾಡಿನಲ್ಲಿ ತೊಟ್ಟಿರುವ ಕೇಸರಿ ಬಣ್ಣದ ಬಿಕಿನಿ ಹಲವಾರು ಬಿಜಿಪಿ ಮುಖಂಡರನ್ನು, ಹಾಗೂ ಹಿಂದೂ ಪರ ಹೋರಾಟಗಾರರನ್ನು ಕೆರಳಿಸಿತ್ತು.

ಹಾಗಾಗಿ ಶಾರುಖ್ ಖಾನ್ ನಟನೆಯ ಈ ಚಿತ್ರವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದರು. ಇದೆಲ್ಲದರ ನಡೆವೆಯೂ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಈ ವಿಷಯದ ಕುರಿತು ಟ್ವೀಟ್ ಮಾಡಿದ್ದರು. ಹಾಗೇಯೇ ಶಾರುಖ್ ಖಾನ್ ಕೂಡ ಇದರ ಬಗ್ಗೆ ಪ್ರತಿಕ್ರಿಯಿಸಿದ್ದರು.

Chetan said that Deepika Padukone's saffron issue is not Hindu's.
Image Credit: news8plus

ಕೇಸರಿ ಬಣ್ಣದ ಬಿಕಿನಿಯ ವಿವಾದ
ಭೇಷ್ ರಂಗ್ ಹಾಡಿನಲ್ಲಿ ದೀಪಿಕಾ ಅಪಡುಕೋಣೆ ಕೇಸರಿ ಬಣ್ಣದ ಬಿಕಿನಿ ತೊಟ್ಟಿದ್ದಾರೆ ಹಾಗೂ ಕೇಸರಿ ಬಣ್ಣದ ಬಗ್ಗೆ ನಾಚಿಕೆಗೇಡು ಎಂಬ ಅರ್ಥ ಬರುವಂತೆ ಹಾಡಿನಲ್ಲಿ ಸಾಹಿತ್ಯ ಬರೆಯಲಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಹಿಂದೂ ಪರ ಹೋರಾಟಗಾರರು ಆಕ್ರೋಶ ಹೊರಹಾಕಿದ್ದಾರೆ.

ಇನ್ನು ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಹಾಕಿದ್ದಾರೆ, ಶಾರುಖ್ ಖಾನ್ ಕಡುಹಸಿರು ಬಣ್ಣದ ಬಟ್ಟೆ ತೊಟ್ಟಿದ್ದಾರೆ ಎಂದು ಸಹ ಹಲವಾರು ಆರೋಪಿಸಿದ್ದು, ಇದು ಹಿಂದೂ ಧರ್ಮಕ್ಕೆ ಮಾಡಿರುವ ಅವಮಾನ ಎಂದು ಕಿಡಿಕಾರಿದ್ದಾರೆ.

Join Nadunudi News WhatsApp Group

ಈ ಕುರಿತಾಗಿ ಸೋಶಿಯಲ್ ಮೀಡಿಯಾ ದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಲೇ ಇವೆ. ಇದೀಗ ಚಂದನವನದ ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಕೂಡ ಪ್ರತಿಕ್ರಿಯಿಸಿದ್ದಾರೆ. ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ನಟ ಚೇತನ್ ಅಹಿಂಸಾ ಬಿಕಿನಿ ವಿವಾದದ ಬಗ್ಗೆ ಬರೆದುಕೊಂಡು ಬಣ್ಣದ ರಾಜಕೀಯ ಶುರುವಾಗಿದೆ ಎಂದಿದ್ದಾರೆ.

ಕೇಸರಿ ಬಣ್ಣದ ಬಿಕಿನಿ ವಿವಾದಕ್ಕೆ ಚೇತನ್ ನೀಡಿದ ಹೇಳಿಕೆ
ನಟ ಚೇತನ್ ಹಿಂದೂ ಅಹಿಂಸಾ “ಪಠಾಣ್” ಚಿತ್ರದ ಹಾಡು ಈಗ ಅದರ ಕೇಸರಿ ಬಿಕಿನಿ ಮತ್ತು ಹಸಿರು ಶರ್ಟ್ ಕಾರಣದಿಂದ ರಾಜಕೀಯಗೊಳ್ಳುತ್ತಿದೆ. ಬಟ್ಟೆಯ ಕಾರಣಕ್ಕೆ ವ್ಯಕ್ತಿಸುತ್ತಿರುವ ವಿರೋಧವು ಬಹಳ ಕ್ಷುಲ್ಲಕವಾಗಿದೆ.

ಬುದ್ಧ ಮತ್ತು ಬಸವಣ್ಣನವರ ಬಣ್ಣವಾದ ಕೇಸರಿಯನ್ನು ಹಿಂದುತ್ವವು ತನ್ನದಾಗಿಸಿಕೊಳ್ಳುತ್ತಿದೆ. ಪ್ರಕ್ರತಿ ಮತ್ತು ರೈತರ ಸಂಕೇತವಾದ ಹಸಿರು ಬಣ್ಣವು ಇಸ್ಲಾಮೀಕರಣಗೊಳ್ಳುತ್ತಿದೆ. ಇದೆಲ್ಲವೂ ಮಾಡಬೇಕೆಂದೇ ಮಾಡುತ್ತಿರುವ ವಿವಾದಗಳು ಎಂದು ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Actor Chetan Kumar spoke about Deepika Padukone's saffron outfit
Image Credit: siasat

ಕೇಸರಿ ಬಣ್ಣ ಹಿಂದುಗಳದ್ದಲ್ಲ ಎಂದ ನಟ ಚೇತನ್
ಇನ್ನು ಹಿಂದೂ ಧರ್ಮಕ್ಕೂ ಮುನ್ನ ಆದಿವಾಸಿಗಳಿದ್ದರು, ಹಿಂದೂ ಧರ್ಮ ನಂತರ ಬಂದದ್ದು ಎಂದು ಹಲವಾರು ಬಾರಿ ಕಿಡಿಕಾರಿರುವ ಚೇತನ್ ಅಹಿಂಸಾ ಈ ಪೋಸ್ಟ್ ನಲ್ಲಿಯೂ ಕೂಡ ಕೇಸರಿ ಬಣ್ಣ ಹಿಂದೂ ಧರ್ಮವಲ್ಲ ಎಂದು ಬರೆದುಕೊಂಡಿದ್ದಾರೆ.

ಬುದ್ಧ ಮತ್ತು ಬಸವಣ್ಣನವರ ಬಣ್ಣವಾದ ಕೇಸರಿಯನ್ನು ಹಿಂದುತ್ವ ತನ್ನದಾಗಿಸಿಕೊಳ್ಳುತ್ತಿದೆ ಎಂದು ಉಲ್ಲೇಖಿಸಿ ಹಿಂದೂ ಧರ್ಮದವರು ಕೇಸರಿ ಬಣ್ಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

Join Nadunudi News WhatsApp Group