Chicken Farm: ಇಂದೇ ಆರಂಭಿಸಿ ಹೊಸ ಕೋಳಿ ಫಾರ್ಮ್ ಉದ್ಯಮ, ಕೇಂದ್ರದಿಂದ ಸಿಗಲಿದೆ 25 ಲಕ್ಷ ಉಚಿತ.

ಕೋಳಿ ಫಾರಂ ಉದ್ಯಮವನ್ನು ಆರಂಭಿಸಬೇಕೆಂದುಕೊಂಡವರಿಗೆ ಸರ್ಕಾರದಿಂದ ಸಿಹಿ ಸುದ್ದಿ.

Chicken Farm Business: ಸ್ವಂತ ಉದ್ಯಮವನ್ನು ಆರಂಭಿಸಿ ಜೀವನ ನಡೆಸಬೇಕೆಂಬ ಜನರು ತುಂಬಾ ಇದ್ದಾರೆ. ದೇಶದಲ್ಲಿ ಹೆಚ್ಚಿನ ಜನರು ಸ್ವಂತ ಉದ್ಯಮದಿಂದಲೇ ತಮ್ಮ ಜೀವನವನ್ನು ನಡೆಸುತ್ತಿದ್ದಾರೆ. ಕೆಲವು ಜನರು ಸಣ್ಣ ಪುಟ್ಟ ಉದ್ಯಮದಿಂದ ತಮ್ಮ ಕುಟುಂಬವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಇಂತಹ ಉದ್ಯಮಗಳಲ್ಲಿ ಕೋಳಿ ಫಾರಂ ಉದ್ಯಮ ಸಹ ಒಂದಾಗಿದೆ.

ಕೋಳಿ ಫಾರಂ ಉದ್ಯಮ ಆರಂಭಿಸುವವರಿಗೆ ಸರ್ಕಾರದಿಂದ ಸಿಹಿ ಸುದ್ದಿ
ನೀವು ಕೋಳಿ ಫಾರಂ ಉದ್ಯಮವನ್ನು ಆರಂಭಿಸಬೇಕೆಂದುಕೊಂಡಿದ್ದರೆ ಸರ್ಕಾರದಿಂದ ನಿಮಗೆ ಸಿಹಿ ಸುದ್ದಿ ಇದೆ. ಕೋಳಿ ಫಾರಂ ಉದ್ಯಮ ಆರಂಭಿಸಲು ಸರ್ಕಾರ ನಿಮಗೆ 50 ಲಕ್ಷ ರೂಪಾಯಿ ಸಾಲ ನೀಡುತ್ತದೆ. ಇದರಲ್ಲಿ 50 % ರಷ್ಟು ಸಬ್ಸಿಡಿ ಇದ್ದು, ನೀವು 25 ಲಕ್ಷ ಹೂಡಿಕೆ ಮಾಡಿದರೆ ಉಳಿದ ಮೊತ್ತವನ್ನು ಕೇಂದ್ರ ಸರ್ಕಾರ ನೀಡಲಿದೆ.

Chicken Farm Business
Image Credit: Forbesindia

ಈ ಯೋಜನೆಯಡಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದಾಗಿದೆ, ವ್ಯಕ್ತಿ, ಸ್ವಸಹಾಯ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು, ರೈತ ಸಹಕಾರ ಸಂಘಗಳು, ಜಂಟಿ ಹೊಣೆಗಾರಿಕೆ ಗುಂಪುಗಳು. ಸೆಕ್ಷನ್ 8 ರ ಅಡಿಯಲ್ಲಿ ಬರುವ ಮೊಟ್ಟೆ ಕೇಂದ್ರಗಳು, ಬ್ರಾಯರ್ ಗಳು ಮಕ್ಕಳ ಪಾಲನೆ ಕೇಂದ್ರಗಳು ಹೀಗೆ ಎಲ್ಲರೂ ಸಹ ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಈ ಯೋಜನೆಯಡಿ ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಲ ನೀಡುತ್ತವೆ. ಇದಕ್ಕೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ www.nlm.udayanidhimitra.in/Login portal ವೆಬ್ ಸೈಟ್ ಗೆ ಭೇಟಿ ನೀಡಬೇಕಾಗುತ್ತದೆ.

ಸಾಲ ಪಡೆಯಲು ಇರಬೇಕಾದ ನಿಯಮಗಳು
ಸಾಲ ಪಡೆಯುವವರ ಹೆಸರಿನಲ್ಲಿ ಕನಿಷ್ಠ 1 ಎಕರೆ ಜಮೀನು ಮತ್ತು ಸಂಬಂಧಿಸಿದ ದಾಖಲೆ ಇರಬೇಕು. ಸ್ವಂತ ಜಮೀನು ಇಲ್ಲದವರು ಗುತ್ತಿದೆ ಜಮೀನಿನ ಮೇಲೆ ಸಾಲ ಪಡೆಯಬಹುದು. ವಿವರವಾದ ಯೋಜನಾ ವರದಿಯನ್ನು ರಾಷ್ಟ್ರೀಯ ಲೈವ್ ಸ್ಟಾಕ್ ಮಿಷನ್ ಅಧಿಕಾರಿಗಳಿಗೆ ಸಲ್ಲಿಸಬೇಕು.

Join Nadunudi News WhatsApp Group

Chicken Farm Business latest news
Image Credit: Sentientmedia

ಸಾಲಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
* ಆಧಾರ್ ಕಾರ್ಡ್
* ಜಮೀನಿನ ಫೋಟೋ
* ಭೂ ದಾಖಲೆಗಳು
* ಮತದಾರರ ಚೀಟಿ
* ನಿಮ್ಮ ಖಾತೆಯ ರದ್ದಾದ 2 ಚೆಕ್ ಗಳು
* ವಿಳಾಸದ ಪ್ರೂಫ್
* ತರಬೇತಿ ಪಡೆದರೆ ಪ್ರಮಾಣ ಪತ್ರ
* ನಿಮ್ಮ ಸ್ಕ್ಯಾನ್ ಮಾಡಿದ ಸಹಿ

Join Nadunudi News WhatsApp Group