Chicken Farming: ಸರ್ಕಾರದಿಂದ ಕೋಳಿ ಸಾಕಾಣಿಕೆಗೆ ಎಷ್ಟು ಹಣ ಸಿಗುತ್ತದೆ…? ವಾರ್ಷಿಕವಾಗಿ ಎಷ್ಟು ಲಾಭ ಗಳಿಸಬಹುದು.

ಕೋಳಿಫಾರಂ ತೆರೆಯಲು ಸರ್ಕಾರ ನೀಡುವ ಸಹಾಯಧನದ ಬಗ್ಗೆ ಮಾಹಿತಿ ತಿಳಿಯಿರಿ.

Chicken Farming Subsidy: ದೇಶದಲ್ಲಿ ಹೆಚ್ಚಿನ ಜನ ಸ್ವಂತ ಉದ್ಯಮವನ್ನು ನೆಡೆಸಿ ಜೀವನವನ್ನು ಸಾಗಿಸುತ್ತಾರೆ. ಸ್ವಂತ ಉದ್ಯೋಗಗಳಲ್ಲಿ ಕೋಳಿ ಸಾಕಾಣಿಕೆ ಕೂಡ ಒಂದಾಗಿದೆ. ಭಾರತೀಯ ಮಾರುಕಟ್ಟೆಯಲ್ಲಿ ಕೋಳಿ ಸಾಕಾಣಿಕೆಯ ವ್ಯವಹಾರ ಬಹುದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕೋಳಿ ಸಾಕಾಣಿಕೆಯು ಹೆಚ್ಚಿನ ಲಾಭವನ್ನು ನೀಡುತ್ತದೆ. ಇದೀಗ ಸರ್ಕಾರ ಕೋಳಿ ಫಾರ್ಮ್ ತೆರೆಯಲು ಸಹಾಯಧನವನ್ನು ನೀಡುತ್ತಿದೆ.

Chicken Farming
Image Credit: Agrifarming

ಕೋಳಿ ಸಾಕಾಣಿಕೆಯ ಸಂಪೂರ್ಣ ಮಾಹಿತಿ
ಕೋಳಿ ಸಾಕಾಣಿಕೆಯಿಂದ ಹೆಚ್ಚಿನ ಲಾಭ ಗಳಿಸಬಹುದಾಗಿದೆ. ಕೋಳಿ ಫಾರ್ಮ್ ಆರಂಭಿಸಲು ಸರ್ಕಾರ ನಿಮಗೆ ಸಹಾಯಧನವನ್ನು ನೀಡುತ್ತದೆ. ಕೋಳಿ ಸಾಕಾಣಿಕೆ ಸಬ್ಸಿಡಿಗಳು ಕೋಳಿ ಸಾಕಾಣಿಕೆದಾರರು ಮತ್ತು ಕೋಳಿ ಸಾಕಣೆ ಬೆಂಬಲಿಸಲು ಸರ್ಕಾರದಿಂದ ಒದಗಿಸಲಾದ ಹಣಕಾಸಿನ ನೆರವಾಗಿದೆ.

ಇಂತಹ ಸಹಾಯಧನದ ಉದ್ದೇಶ ಕೋಳಿ ಸಾಕಣೆಯನ್ನು ಪ್ರೋತ್ಸಾಹಿಸುದು, ಕೋಳಿ ಉತ್ಪನ್ನಗಳ ಗುಣಮಟ್ಟವನ್ನು ಸುಧಾರಿಸುವುದು, ಕೋಳಿ ಉತ್ಪಾದನೆಯನ್ನು ಹೆಚ್ಚಿಸುವುದು ಮತ್ತು ರೈತರಿಗೆ ಉತ್ಪಾದನಾ ವೆಚ್ಚವನ್ನು ಕಡಿಮೆ ಮಾಡುದಾಗಿದೆ. ಅನುದಾನಗಳು, ಕಡಿಮೆ ಬಡ್ಡಿದರದ ಸಾಲಗಳು, ತೆರಿಗೆ ವಿನಾಯಿತಿಗಳು ಮತ್ತು ತಾಂತ್ರಿಕ ಸಹಾಯದಂತಹ ವಿವಿಧ ರೂಪಗಳಲ್ಲಿ ಸಬ್ಸಿಡಿಗಳನ್ನು ನೀಡಲಾಗುತ್ತಿದೆ.

Chicken Farming Subsidy
Image Credit: Kannadanews

ಇಂತವರಿಗೆ ಮಾತ್ರ ಕೋಳಿ ಸಾಕಾಣಿಕೆಯ ಸಬ್ಸಿಡಿಗೆ ಅರ್ಹರಾಗುತ್ತಾರೆ
*ಸಬ್ಸಿಡಿ ಸಾಮಾನ್ಯವಾಗಿ ಸಣ್ಣ ಮತ್ತು ಮಧ್ಯಮ ಗಾತ್ರದ ಕೋಳಿ ಸಾಕಣೆದಾರರಿಗೆ ಮಾತ್ರ ಲಭ್ಯವಿರುತ್ತದೆ. ಇನ್ನು ಕೆಲವು ಸಂದರ್ಭಗಳಲ್ಲಿ ಮಾತ್ರ ದೊಡ್ಡ ಪ್ರಮಾಣದ ರೈತರು ಈ ಸಹಾಯಧನಕ್ಕೆ ಅರ್ಹರಾಗುತ್ತಾರೆ.

*ಇನ್ನು ಕೆಲವು ಸಬ್ಸಿಡಿ ಗಳು ನಿರ್ದಿಷ್ಟ ಪ್ರದೇಶ ಅಥವಾ ರಾಜ್ಯಗಳಿಗೆ ನಿರ್ಬಂಧಿಸಿದೆ.

Join Nadunudi News WhatsApp Group

*ಕೋಳಿ ಸಾಕಾಣಿಕೆಯ ಸಬ್ಸಿಡಿ ರೈತರ ಆದಾಯ ಮತ್ತು ಆರ್ಥಿಕ ಪರಿಸ್ಥಿಯನ್ನು ಆಧರಿಸಿರುತ್ತದೆ.

*ಕೋಳಿ ಸಾಕಾಣಿಕೆಯಲ್ಲಿ ರೈತನ ಅನುಭವ, ಪಕ್ಷಿಗಳ ಸಂಖ್ಯೆ ಇತ್ಯಾದಿಗಳನ್ನು ಸಬ್ಸಿಡಿ ನೀಡುವಾಗ ಪರಿಗಣಿಸಲಾಗುತ್ತದೆ.

ಸಬ್ಸಿಡಿ ಗೆ ಅರ್ಜಿ ಸಲ್ಲಿಸುವ ವಿಧಾನ
ಗುರುತಿನ ಪುರಾವೆ, ಭೂಮಿ ಅಥವಾ ಕೋಳಿ ಫಾರ್ಮ್‌ನ ಮಾಲೀಕತ್ವ ಮತ್ತು ಹಣಕಾಸಿನ ದಾಖಲೆಗಳಂತಹ ಎಲ್ಲಾ ಅಗತ್ಯ ದಾಖಲೆಗಳನ್ನು ಅರ್ಜಿ ನಮೂನೆ ಜೊತೆಗೆ ಸರ್ಕಾರಿ ಇಲಾಖೆಗೆ ಸಲ್ಲಿಸಬೇಕಾಗುತ್ತದೆ. ಸರ್ಕಾರವು ನಿಮ್ಮ ಅರ್ಜಿಯನ್ನು ಪರಿಶೀಲಿಸಿ ನೀವು ಸಬ್ಸಿಡಿ ಗೆ ಅರ್ಹರೇ ಇಲ್ಲವೇ ಎಂದು ನಿರ್ಧರಿಸಿ ಅರ್ಹರಿಗೆ ಸಬ್ಸಿಡಿ ಒದಗಿಸುತ್ತದೆ.

Join Nadunudi News WhatsApp Group