Pakistan Economy: ಪಾಕಿಸ್ತಾನದಲ್ಲಿ 1 ಕೆಜಿ ಕೋಳಿ ಬೆಲೆ ಎಷ್ಟು ಗೊತ್ತಾ…? ಆರ್ಥಿಕ ಬಿಕ್ಕಟ್ಟಿನಿಂದ ಕಂಗಲಾದ ಪಾಕ್ ಜನರು.

ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನದಲ್ಲಿ ಕೋಳಿ ಮಾಂಸದ ಬೆಲೆ ದಾಖಲೆಯ ಮಟ್ಟ ತಲುಪಿದೆ.

Chicken Price In Pakistaan: ಆರ್ಥಿಕತೆಯಲ್ಲಿ ಪಾಕಿಸ್ತಾನವನ್ನು ಬಹುತೇಕ ಹಿಂದುಳಿದಿದೆ ಎನ್ನಬಹುದು. ಸದ್ಯ ಪಾಕಿಸ್ತಾನ ದಿವಾಳಿಯ ಅಂಚಿನಲ್ಲಿದೆ ಎನ್ನಬಹುದು. ಆರ್ಥಿಕ ಬಿಕ್ಕಟ್ಟಿನ ಕಾರಣ ಪಾಕಿಸ್ತಾನ ಬೆಲೆ ಏರಿಕೆ ಹೆಚ್ಚಾಗುತ್ತಿದೆ.

ಸದ್ಯ ಪಾಕಿಸ್ತಾನದಲ್ಲಿ ಎಲ್ಲವು ದುಬಾರಿಯಾಗಿದ್ದು, ಜನರು ಕಂಗಾಲಾಗುವಂತಾಗಿದೆ. ಇನ್ನು ಪಾಕಿಸ್ತಾನದಲ್ಲಿ ಕೋಳಿಯ ಬೆಲೆ ಕೇಳಿದರೆ ನೀವು ಅಚ್ಚರಿ ಪಡುವುದಂತೂ ಖಚಿತ. ಏಕೆಂದರೆ ಪಾಕಿಸ್ತಾನದಲ್ಲಿ ಕೋಳಿ ಅಷ್ಟೊಂದು ದುಬಾರಿಯಾಗಿದೆ ಎನ್ನಬಹುದು.

Chicken Price In Pakistan
Image Credit: Dainandinbartagroup

ಪಾಕಿಸ್ತಾನದಲ್ಲಿ 1 ಕೆಜಿ ಕೋಳಿ ಬೆಲೆ ಎಷ್ಟು ಗೊತ್ತಾ…?
ಸದ್ಯ ಪಾಕಿಸ್ತಾನದಲ್ಲಿ ಕೋಳಿ ಬೆಲೆ ದಾಖಲೆಯ ಏರಿಕೆ ಕಂಡಿದೆ. ಪಾಕಿಸ್ತಾನದಲ್ಲಿ ಕೋಳಿ ಮಾಂಸದ ಬೆಲೆ ಚಿಲ್ಲರೆ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 700 ಪಾಕಿಸ್ತಾನಿ ರೂ. ತಲುಪಿದೆ. ಕರಾಚಿಯ ಕಮಿಷನರ್ ಕೋಳಿಯ ಬೆಲೆಯನ್ನು ನಿಗದಿಪಡಿಸುವ ಅಧಿಸೂಚನೆಯನ್ನು ಹೊರಡಿಸಬೇಕಾಗಿತ್ತು. ಇದೇ ವೇಳೆ 20 ಕೆಜಿ ಹಿಟ್ಟಿನ ಬೆಲೆ ಮೂರು ಸಾವಿರ ದಾಟಿದೆ.

ವರದಿಯ ಪ್ರಕಾರ, ಕರಾಚಿಯಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 502 ರೂ. ಗೆ ನಿಗದಿಪಡಿಸಲಾಗಿದೆ. ಕೋಳಿ ಫಾರ್ಮ್‌ ಗಳ ಕೋಳಿ ಮಾಂಸದ ಬೆಲೆ ಕೆಜಿಗೆ 310 ರೂ. ಆಗಿದೆ. ಅಲ್ಲದೆ ಕೋಳಿ ಮಾಂಸದ ಸಗಟು ದರವನ್ನು ಪ್ರತಿ ಕೆಜಿಗೆ PRK 318 ಎಂದು ನಿಗದಿಪಡಿಸಲಾಗಿದೆ.

Chicken Price In Pakistan
Image Credit: Zeenews

ಆರ್ಥಿಕ ಬಿಕ್ಕಟ್ಟಿನಿಂದ ಕಂಗಲಾದ ಪಾಕ್ ಜನರು
ಫೆಬ್ರವರಿಯಲ್ಲಿ ಕರಾಚಿಯಲ್ಲಿ ಕೋಳಿ ಮಾಂಸದ ಬೆಲೆ ತೀವ್ರವಾಗಿ ಏರಿದ್ದು, ಅದನ್ನು PKR 700 ಗೆ ಮಾರಾಟ ಮಾಡಲಾಗುತ್ತಿತ್ತು. ಹಣದುಬ್ಬರದಿಂದಾಗಿ ಬಡವರ ಕೈಗೆ ಮಾಂಸಗಳು ತಲುಪುತ್ತಿಲ್ಲ. ಲೈವ್ ಚಿಕನ್ ಬೆಲೆ ಕೆಜಿಗೆ 500 ರೂ. ಆಗಿದೆ. ರಾವಲ್ಪಿಂಡಿ, ಇಸ್ಲಾಮಾಬಾದ್ ಮತ್ತು ಇತರ ಕೆಲವು ನಗರಗಳಲ್ಲಿ ಚಿಕನ್ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿವೆ. ಒಂದು ಕೆಜಿ ಕೋಳಿ ಮಾಂಸ 700 ರಿಂದ 705 ರೂ. ಗೆ ಮಾರಾಟವಾಗುತ್ತಿದೆ.

Join Nadunudi News WhatsApp Group

ದೇಶದ ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಲಾಹೋರ್‌ ನಲ್ಲಿ ಕೋಳಿ ಮಾಂಸದ ಬೆಲೆ ಕೆಜಿಗೆ 550 ರಿಂದ 600 ರೂ. ಆಗಿದೆ. ಹೆಚ್ಚುತ್ತಿರುವ ಬೆಲೆ ಏರಿಕೆಯ ಕಾರಣ ಪಾಕಿಸ್ತಾನದಲ್ಲಿ ಬಡತನ ಸೃಷ್ಟಿಯಾಗಿದೆ. ಮಾರುಕಟ್ಟೆಯಲ್ಲಿ 20 KG ಹಿಟ್ಟಿನ ಚೀಲಗಳನ್ನು 2850 ರಿಂದ 3050 ರೂ. ಮಾರಾಟ ಮಾಡಲಾಗುತ್ತಿದೆ.

Join Nadunudi News WhatsApp Group