Central Ministry: 5 ವರ್ಷದ ಮಕ್ಕಳಿಗೆ ಇನ್ಮೇಲೆ ಹೊಸ ನಿಯಮ, ಇದೀಗ ಕೇಂದ್ರದ ಘೋಷಣೆ
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮನೆಯಲ್ಲಿಯೇ ಆಧಾರ್ ಅನ್ನು ಮಾಡಿಕೊಡಲಾಗುತ್ತದೆ.
Child Aadhaar Available At Home: ದೇಶದಲ್ಲಿ ಪ್ರಸ್ತುತ Aadhaar Card ಪ್ರಮುಖ ದಾಖಲೆಯಾಗಿದೆ. ಆಧಾರ್ ಕಾರ್ಡ್ ನಲ್ಲಿ ಸಾಕಷ್ಟು ಅಪ್ಡೇಟ್ ಗಳು ಬಂದಿದೆ. ಆಧಾರ್ ಕಾರ್ಡ್ ಅನ್ನು ಪ್ರತಿಯೊಬ್ಬರೂ ಹೊಂದಿರಲೇಬೇಕು.
ಇನ್ನು UIDAI ಇತ್ತೀಚಿಗೆ ಆಧಾರ್ ನವೀಕರಣವನ್ನು ಕಡ್ಡಾಯಗೊಳಿಸಿದೆ. ಈಗಾಗಲೇ UIDAI ಆಧಾರ್ ನವೀಕರಣವನ್ನು ಉಚಿತವಾಗಿ ಘೋಷಿಸಿದೆ. Septembar 14 ರವರೆಗೆ ನೀವು ನಿಮ್ಮ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನವೀಕರಿಸಿಕೊಳ್ಳಬಹುದು. ಸದ್ಯ ಮಕ್ಕಳ ಆಧಾರ್ ವಿಷಯಕ್ಕೆ ಸಂಬಂಧಿಸಿದಂತ ಕೇಂದ್ರ ಸರ್ಕಾರ ಇನ್ನೊಂದು ಘೋಷಣೆಯನ್ನ ಮಾಡಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ Child Aadhaar ಕಡ್ಡಾಯ
ಈಗಾಗಲೇ UIDAI ಮಕ್ಕಳಿಗೆ ಸಂಬಂಧಿಸಿದಂತೆ ಆಧಾರ್ ಕಾರ್ಡ್ ನಲ್ಲಿ ಅನೇಕ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಶಾಲಾ ಮಕ್ಕಳ ಶೈಕ್ಷಣಿಕ ಪ್ರವೇಶಕ್ಕೆ Aadhaar Card ಅನ್ನು ಕಡ್ಡಾಯಗೊಳಿಸಲಾಗಿದೆ. ಮಗುವಿನ ಆಧಾರ್ ಕಾರ್ಡ್ ಇದ್ದರೆ ಮಾತ್ರ ಶಾಲೆಗೆ ದಾಖಲು ಮಾಡಿಕೊಳ್ಳಲಾಗುತ್ತದೆ. ಇನ್ನು ಆಧಾರ್ ಮುಖ್ಯ ದಾಖಲೆಯಾಗಿರುವ ಕಾರಣ ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸಬೇಕಾಗಿದೆ.
Child Aadhaar Card
ಮಗುವಿಗೆ ಐದು ವರ್ಷ ತುಂಬಿದ ಬಳಿಕ Child Aadhaaar Card ಅನ್ನು ಮಾಡಿಸುವುದು ಕಡ್ಡಾಯವಾಗಿದೆ. ಇನ್ನು ಜನನ ಪ್ರಮಾಣಪತ್ರದಲ್ಲಿ ಯಾವ ಹೆಸರನ್ನು ಇರಿಸಲಾಗಿದೆಯೋ ಅದೇ ರೀತಿ ಆಧಾರ್ ಕಾರ್ಡ್ ನಲ್ಲಿಯೂ ಹೆಸರು ನೋಂದಾಯಿಸಬೇಕು. ಮಗುವಿನ ಜನನ ಪ್ರಮಾಣಪತ್ರ, ಪಾಸ್ ಪೋರ್ಟ್ ಗಾತ್ರದ ಫೋಟೋ ಸೇರಿದಂತೆ ಪೋಷಕರ ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇನ್ನಿತರ ವೈಯಕ್ತಿಕ ಗುರುತಿನ ಪುರಾವೆಯನ್ನು ನೀಡುವ ಮೂಲಕ ನೀವು ನಿಮ್ಮ ಮಗುವಿನ ಆಧಾರ್ ಕಾರ್ಡ್ ಅನ್ನು ಮಾಡಿಸುವುದು ಅಗತ್ಯವಾಗಿದೆ.
5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮನೆಯಲ್ಲಿಯೇ ಆಧಾರ್ ಅನ್ನು ಮಾಡಿಕೊಡಲಾಗುತ್ತದೆ
UIDAI ಮೊಬೈಲ್ ಅಪ್‌ಡೇಟ್ ಸೇವೆಯನ್ನು ಇದೀಗ ಪೋಸ್ಟ್ ಆಫೀಸ್ ನೆಟ್‌ವರ್ಕ್ ಮೂಲಕ ಪೋಸ್ಟ್‌ಮ್ಯಾನ್ ಮತ್ತು ಗ್ರಾಮೀಣ ಡಾಕ್ ಸೇವಕರ ಮೂಲಕ ಮಾಡಲಾಗುತ್ತಿದೆ. ಮೊಬೈಲ್ ಸಂಖ್ಯೆಯನ್ನು ಆಧಾರ್‌ನೊಂದಿಗೆ ಲಿಂಕ್ ಮಾಡಲು, ಕೇವಲ 50 ರೂಪಾಯಿಗಳನ್ನು ಶುಲ್ಕವಾಗಿ ಪಾವತಿಸಬೇಕಾಗುತ್ತದೆ. ಆದರೆ 0 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ನೀಡಲಾಗುವುದು. ಮನೆಯಲ್ಲಿಯೇ ಆಧಾರ್ ಕಾರ್ಡ್ ಅನ್ನು ಮಾಡಿಸಲು UIDAI ಪೋಸ್ಟ್ ಮ್ಯಾನ್ ಗಳಿಗೆ ತರಬೇತಿಯನ್ನು ನೀಡುತ್ತಿದೆ.