ಮಕ್ಕಳನ್ನ ದೇವರಿಗೆ ಹೋಲಿಕೆ ಮಾಡಲಾಗುತ್ತದೆ ಮತ್ತು ಮಕ್ಕಳು ಮಾಡುವ ಕೆಲವು ಕೆಲಸಗಳು ನಮಗೆ ಆಶ್ಚರ್ಯ ಕೂಡ ಉಂಟುಮಾಡುತ್ತದೆ. ಇನ್ನು ಅದೇ ರೀತಿಯಲ್ಲಿ ಮಕ್ಕಳಿಗೆ ಒಳ್ಳೆಯ ನಡವಳಿಕೆ ಮತ್ತು ಗುಣವನ್ನ ರೂಪಿಸುವಲ್ಲಿ ಹೆತ್ತವರು ಪ್ರಮುಖವಾದ ಪಾತ್ರವನ್ನ ವಹಿಸಬೇಕು. ಹೆತ್ತವರು ಮತ್ತು ಹಿರಿಯರನ್ನ ನೋಡಿ ಮಕ್ಕಳು ಹಲವು ವಿಷಯಗಳನ್ನ ಕಲಿತುಕೊಳ್ಳುತ್ತಾರೆ. ಹೆತ್ತವರು ಪೋಷಕರು ಮಾಡುವ ಕೆಲವು ತಪ್ಪುಗಳನ್ನ ಮುಂದಿನ ದಿನಗಳಲ್ಲಿ ಮಕ್ಕಳು ಮಾಡುತ್ತಾರೆ ಎಂದು ಹೇಳಲಾಗುತ್ತದೆ. ಇನ್ನು ಈಗ ಅದೇ ರೀತಿಯಲ್ಲಿ ಹೊಸ ಕಾನೂನು ಜಾರಿಗೆ ಬಂದಿದ್ದು ಈ ಹೆತ್ತವರ ಮತ್ತು ಪೋಷಕರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಿದರೆ ತಪ್ಪಾಗಲ್ಲ.
ಹಾಗಾದರೆ ಏನದು ಶಾಕಿಂಗ್ ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಮುಂದಿನ ದಿನಗಳಲ್ಲಿ ಮಕ್ಕಳು ತಪ್ಪುಗಳನ್ನ ಮಾಡಿದರೆ ಅವರ ಬದಲಿಗೆ ಹೆತ್ತವರಿಗೆ ಮತ್ತು ಪೋಷಕರು ಶಿಕ್ಷೆಯನ್ನ ನೀಡಲು ಚೀನಾ ಸರ್ಕಾರ ಮುಂದಾಗಿದೆ. ಮಗು ಯಾವುದೇ ತಪ್ಪನ್ನ ಮಾಡಿದರೆ ಮಗುವಿನ ಬದಲಾಗಿ ಇನ್ನುಮುಂದೆ ಹೆತ್ತವರು ಶಿಕ್ಷೆಯನ್ನ ಅನುಭವಿಸಬೇಕು. ಶೀಘ್ರದಲ್ಲೇ ಚೀನಾದ ಸಂಸತ್ತು ಒಂದು ಮಸೂದೆಯನ್ನು ಪರಿಗಣಿಸಲಾಗಿದ್ದು ಇದರ ಪ್ರಕಾರ ಚಿಕ್ಕ ಮಕ್ಕಳು ಅತ್ಯಂತ ಕೆಟ್ಟ ನಡವಳಿಕೆ ತೋರಿದರೆ ಅಥವಾ ಯಾವುದೇ ಅಪರಾಧ ಕೃತ್ಯವನ್ನು ಎಸಗಿದರೆ ಪೋಷಕರಿಗೆ ಶಿಕ್ಷೆ ನೀಡಲಾಗುವುದು.
ಕುಟುಂಬ ಶಿಕ್ಷಣ ಪ್ರಚಾರ ಕಾಯಿದೆ ಅಡಿಯಲ್ಲಿ ಮಕ್ಕಳ ಅಪರಾಧಕ್ಕಾಗಿ ಪೋಷಕರನ್ನು ಶಿಕ್ಷಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ಅಷ್ಟೇ ಅಲ್ಲದೆ ಪೋಷಕರ ಆರೈಕೆಯಲ್ಲಿರುವ ಮಗುವಿನ ನಡವಳಿಕೆಯು ತುಂಬಾ ಕೆಟ್ಟದ್ದಾಗಿದ್ದರೆ ಅಥವಾ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ ಅವರನ್ನು ಕುಟುಂಬ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಕಳುಹಿಸಬಹುದು. ಚೀನಾದಲ್ಲಿ ಮಕ್ಕಳ ಕೆಲವು ತಪ್ಪುಗಳನ್ನ ದೊಡ್ಡವರ ಸಮಸ್ಯೆಗೆ ಕಾರಣವಾಗುತ್ತಿದ್ದು ಅವರ ತಪ್ಪುಗಳಿಗೆ ಕಡಿವಾಣವನ್ನ ಹಾಕುವುದು ಹೆತ್ತವರಿಂದ ಮಾತ್ರ ಸದ್ಯ ಮತ್ತು ಕ್ರಮ ಸರಿಯಾಗಿ ಜಾರಿಗೆ ಬರಬೇಕು ಅಂದರೆ ಈ ನಿಯಮ ಜಾರಿಗೆ ತರುವುದು ಅನಿವಾರ್ಯ ಎಂದು ಸರ್ಕಾರ ಹೇಳಿದೆ.
ಇನ್ನು ಚೀನಾ ದೇಶದಲ್ಲಿ ಮಕ್ಕಳು ಕೆಲವು ತಪ್ಪುಗಳನ್ನ ಮಾಡಲು ಅಸಲಿ ಕಾರಣ ಆನ್ಲೈನ್ ಆಟಗಳು ಆಗಿದ್ದು ಕೆಲವು ಆನ್ಲೈನ್ ಆಟಗಳನ್ನ ಸ್ಥಗಿತ ಮಾಡಲು ಸರ್ಕಾರ ಆದೇಶವನ್ನ ಹೊರಡಿಸಿದೆ. ಸದ್ಯ ಚೀನಾ ದೇಶದ ಈ ಹೊಸ ಕಾನೂನು ಸಾಮಜಿಕ ಜಾಲತಾಣದಲ್ಲಿ ಸಕತ್ ಸದ್ದು ಮಾಡುತ್ತಿದ್ದು ಈ ನಿಯಮವನ್ನ ನಮ್ಮ ದೇಶದಲ್ಲಿ ಕೂಡ ಜಾರಿಗೆ ತರಬೇಕು ಎಂದು ಕೆಲವರು ಹೇಳುತ್ತಿದ್ದಾರೆ. ಸ್ನೇಹಿತರೆ ಮಕ್ಕಳು ಮಾಡಿದ ತಪ್ಪಿಗೆ ಹೆತ್ತವರು ಶಿಕ್ಷೆಯನ್ನ ಅನುಭವಿಸುವುದು ಸರಿನ ತಪ್ಪಾ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ನಿಯಮ ನಮ್ಮ ದೇಶದಲ್ಲಿ ಜಾರಿಗೆ ಬಂದರೆ ಹೇಗಿರುತ್ತದೆ ಎಂದು ಅಭಿಪ್ರಾಯ ತಿಳಿಸಿ.