Marriage Divorce: ವಿಚ್ಛೇಧನ ಪಡೆದರೆ ಮಗು ಯಾರಿಗೆ ಸೇರುತ್ತದೆ, ವಿಚ್ಛೇಧನ ಪಡೆಯುವ ಮುನ್ನ ಕಾನೂನು ನಿಯಮ ತಿಳಿಯಿರಿ.

ಕಾನೂನಿನ ನಿಯಮದಲ್ಲಿ ವಿಚ್ಛೇಧನ ಪಡೆದರೆ ಮಗು ಯಾರಿಗೆ ಸೇರುತ್ತದೆ ಎನ್ನುವ ಬಗ್ಗೆ ಮಾಹಿತಿ ತಿಳಿಯಿರಿ.

Childrens Rights After Divorce: ಇತ್ತೀಚಿಗೆ ವಿಚ್ಛೇದನದ (Divorce) ಪ್ರಕರಣಗಳು ಹೆಚ್ಚುತ್ತಿವೆ. ಭಾರತೀಯ ಕಾನೂನಿನಲ್ಲಿ (Indian Law) ವಿಚ್ಛೇದನ ಪಡೆದುಕೊಳ್ಳುವವರಿಗೂ ಅನೇಕ ನಿಯಮವನ್ನು ಜಾರಿಗೊಳಿಸಲಾಗಿದೆ. ಕಾನೂನಿನ ನಿಯಮದ ಪ್ರಕಾರ ವಿವಾಹ ವಿಚ್ಛೇದನವನ್ನೂ ಪಡೆದುಕೊಳ್ಳಬೇಕು.

ಇನ್ನು ವಿಚ್ಛೇದನ ಪಡೆದವರಿಗೆ ಮಕ್ಕಳು ಇದ್ದರೆ ತಂದೆ ಅಥವಾ ತಾಯಿ ಆ ಮಕ್ಕಳ ಪಾಲನೆ ಮಾಡಬೇಕಾಗುತ್ತದೆ. ಕಾನೂನಿನ ನಿಯಮದಲ್ಲಿ ವಿಚ್ಛೇಧನ ಪಡೆದರೆ ಮಗು ಯಾರಿಗೆ ಸೇರುತ್ತದೆ ಎನ್ನುವ ಬಗ್ಗೆ ನಿಯಮವನ್ನು ಜಾರಿಗೊಳಿಸಲಾಗಿದೆ.

Who will the child belong to in case of divorce
Image Credit: Family

ವಿಚ್ಛೇಧನ ಪಡೆದರೆ ಮಗು ಯಾರಿಗೆ ಸೇರುತ್ತದೆ
ಇತ್ತೀಚಿನ ದಿನಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಉಂಟಾಗಿ ವಿಚ್ಛೇದನ ಪಡೆದಿರುವವರ ಸಂಖ್ಯೆ ಸಾಕಷ್ಟಿದೆ. ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು ಕೂಡ ಯಾವುದೊ ಒಂದು ಸಣ್ಣ ಕಾರಣಗಳಿಗೆ ದಂಪತಿಗಳು ವಿಚ್ಛೇದನ ಪಡೆಯುತ್ತಾರೆ.

ಇನ್ನು ವಿಚ್ಛೇದನ ಪಡೆದ ನಂತರ ಅವರ ಮಕ್ಕಳ ಲಾಲನೆ ಪಾಲನೆಯ ಬಗ್ಗೆ ಗೊಂದಲ ಉಂಟಾಗುತ್ತದೆ. ತಂದೆ ಮತ್ತು ತಾಯಿಯಲ್ಲಿ ಮಕ್ಕಳನ್ನು ಯಾರು ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತದೆ. ಇನ್ನು ಹಿಂದೂ ಕಾನೂನು ಮತ್ತು ಸೆಕ್ಯುಲರ್ ಕಾನೂನಿನ ಅಡಿಯಲ್ಲಿ, ಐದು ವರ್ಷದೊಳಗಿನ ಮಗುವಿನ ಪಾಲನೆಯನ್ನು ಸಾಮಾನ್ಯವಾಗಿ ತಾಯಿಗೆ ನೀಡಲಾಗುತ್ತದೆ .

ಹೆಚ್ಚಿನ ಸಂದರ್ಭಗಳಲ್ಲಿ ತಂದೆಯು ಹಿರಿಯ ಹುಡುಗರ ಜವಾಬ್ದಾರಿಯನ್ನು ಪಡೆಯುತ್ತಾರೆ. ಇನ್ನು ಹಿರಿಯ ಹುಡುಗಿಯರು ತಾಯಿಯ ಪಾಲನೆಯನ್ನು ಪಡೆಯುತ್ತಾರೆ. ಇನ್ನು ತಾಯಿಯು ಆರ್ಥಿಕವಾಗಿ ಸಬಲರಾಗಿದ್ದರೆ ಅವರು ತಮ್ಮ ಹಿರಿಯ ಮಕ್ಕಳ ಜವಾಬ್ದಾರಿಯನ್ನು ಪಡೆದುಕೊಳ್ಳಬಹುದು.

Join Nadunudi News WhatsApp Group

Who will the child belong to in case of divorce
Image Credit: Legaldesire

ವಿಚ್ಛೇದನದ ನಂತರ ಮಕ್ಕಳಿಗೆ ಅಪ್ಪನ ಆಸ್ತಿಯಲ್ಲಿ ಎಷ್ಟು ಹಕ್ಕಿದೆ
ದಂಪತಿ ವಿಚ್ಛೇದನ ಪಡೆದಾಗ ತಂದೆಯು ಇನ್ನೊಂದು ಮದುವೆ ಆದರೆ ಮೊದಲ ಪತ್ನಿಯ ಮಗುವಿಗೆ ತಂದೆಯ ಸ್ವಯಾರ್ಜಿತ ಮತ್ತು ಪೂರ್ವಜರ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂದು ಹೈಕೋರ್ಟ್ ಆದೇಶ ನೀಡಿದೆ.

ತಂದೆಯ ಆಸ್ತಿಯಲ್ಲಿ ಮಗುವಿಗೆ ಹಕ್ಕು ಇರಬಾರದು ಎನ್ನುವ ನಿಯಮದ ಮೇಲೆ ದಂಪತಿಗಳು ವಿಚ್ಛೇದನ ಪಡೆಯುವಂತಿಲ್ಲ ಎಂದು ಆದೇಶ ನೀಡಲಾಗಿದೆ. ಮಕ್ಕಳ ಆಸ್ತಿಯ ಹಕ್ಕುಗಳು ತಂದೆ ತಾಯಿಯ ವಿಚ್ಛೇದನದ ಬಳಿಕ ಯಾವುದೇ ಪರಿಣಾಮವನ್ನು ಬೀರುವುದಿಲ್ಲ. ತಂದೆಯ ಸ್ವಯಾರ್ಜಿತ ಆಸ್ತಿಯ ಮೇಲೆ ಮಕ್ಕಳು ಹಕ್ಕನ್ನು ಹೊಂದಿರುತ್ತಾರೆ.

Join Nadunudi News WhatsApp Group