ನಮ್ಮ ಕೇಂದ್ರ ಸರ್ಕಾರ ದಿನದಿಂದ ದಿನಕ್ಕೆ ಹೊಸಹೊಸ ಯೋಜನೆಯನ್ನ ಜಾರಿಗೆ ತರುತ್ತಿದ್ದು ಇದು ಜನರ ಅನುಕೂಲಕ್ಕೆ ಕಾರಣವಾಗುತ್ತಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಈಗಾಗಲೇ ಕೇಂದ್ರ ಸರ್ಕಾರ ಅನೇಕ ಯೋಜನೆಯನ್ನ ಜಾರಿಗೆ ತಂದಿದ್ದು ಈಗ ಇನ್ನೊಂದು ದೊಡ್ಡ ಯೋಜನೆಯನ್ನ ಜಾರಿಗೆ ತರುವುದರ ಮೂಲಕ ಮಕ್ಕಳ ಪೋಷಕರಿಗೆ ಕೇಂದ್ರ ಸರ್ಕಾರ ದೊಡ್ಡ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಪೋಸ್ಟ್ ಆಫೀಸ್ ನಲ್ಲಿ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದ್ದು ಮನೆಯಲ್ಲಿ ಹತ್ತು ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಸಿನ ಮಕ್ಕಳಿದ್ದರೆ ಪೋಷಕರು ಪೋಸ್ಟ್ ಆಫೀಸ್ ನಲ್ಲಿ ಈ ಯೋಜನೆಯ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.
ಮಕ್ಕಳ ವಿದ್ಯಾಭ್ಯಾಸಕ್ಕೆ ಯಾವುದೇ ರೀತಿಯ ಸಮಸ್ಯೆ ಆಗಬಾರದು ಅನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನ ಜಾರಿಗೆ ತಂದಿದ್ದು ಈ ಯೋಜನೆಯಲ್ಲಿ ಪೋಷಕರು ಪ್ರತಿ ತಿಂಗಳು 2500 ರೂಪಾಯಿಯನ್ನ ಪಡೆದುಕೊಳ್ಳಬಹುದಾಗಿದೆ. ಹಾಗಾದರೆ ಈ ಯೋಜನೆ ಯಾವುದು ಮತ್ತು ಈ ಯೋಜನೆಯ ಲಾಭವನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಪೋಸ್ಟ್ ಆಫೀಸ್ MIS ಯೋಜನೆ ಯಾರಿಯಲ್ಲಿ ಇದ್ದು ಈ ಯೋಜನೆಯ ಅಡಿಯಲ್ಲಿ ಪೋಷಕರು ಪ್ರತಿ ತಿಂಗಳು 2500 ರೂಪಾಯಿಯ ತನಕ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.
ಇನ್ನು ಈ ಖಾತೆಯನ್ನ ಹತ್ತು ವರ್ಷ ಮೇಲ್ಪಟ್ಟ ಮಕ್ಕಳ ಹೆಸರಿನಲ್ಲಿ ಪೋಷಕರು ತೆರೆಯಬಹುದು ಮತ್ತು ಇದೊಂದು ಉಳಿತಾಯ ಯೋಜನೆ ಆಗಿದ್ದು ಈ ಯೋಜನೆಯ ಅಡಿಯಲ್ಲಿ ಪ್ರತಿ ತಿಂಗಳು ಪೋಷಕರು ಹಣವನ್ನ ಪಡೆದುಕೊಳ್ಳಬಹುದು. ಇನ್ನು ಈ ಖಾತೆಯನ್ನ ತೆರೆಯುವಾಗ ನೀವು ಕನಿಷ್ಠ 1 ಸಾವಿರ ರೂಪಾಯಿಯಿಂದ ಗರಿಷ್ಠವಾಗಿ 4.5 ಲಕ್ಷದ ತನಕ ಹೂಡಿಕೆ ಮಾಡಬಹುದು. ಇನ್ನು ಈ ಯೋಜನೆಯ ಅಡಿಯಲ್ಲಿ ನೀವು ಹೂಡಿಕೆ ಮಾಡಿದ ಹಣಕ್ಕೆ ಶೇಕಡಾ 6.6 ರಷ್ಟು ಬಡ್ಡಿ ಹಣವನ್ನ ಪೋಸ್ಟ್ ಆಫೀಸ್ ನಿಮಗೆ ನೀಡುತ್ತದೆ. ಇನ್ನು ಈ ಯೋಜನೆಯ ಮುಕ್ತಾಯವು ಐದು ವರ್ಷವಾಗಿದ್ದು ಐದು ವರ್ಷದ ನಂತರ ನೀವು ಹೂಡಿಕೆ ಮಾಡಿದ ಹಣವನ್ನ ವಾಪಾಸ್ ಪಡೆದುಕೊಳ್ಳಬಹುದಾಗಿದೆ.
ಸ್ನೇಹಿತರೆ ನೀವು ಉದಾಹರಣೆಗೆ, ನಿಮಗೆ ಹತ್ತು ವರ್ಷದ ಮಕ್ಕಳಿದ್ದು ನೀವು ಈ ಯೋಜನೆಯ ಅಡಿಯಲ್ಲಿ ಎರಡು ಲಕ್ಷ ರೂಪಾಯಿಯನ್ನ ಪೋಸ್ಟ್ ಆಫೀಸ್ ನಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು ಶೇಕಡಾ 6.6 ರ ಬಡ್ಡಿ ದರದಲ್ಲಿ 1100 ರೂಪಾಯಿಯನ್ನ ಪಡೆದುಕೊಳ್ಳಬಹುದು ಮತ್ತು ಐದು ವರ್ಷದ ನಂತರ ನೀವು ಠೇವಣಿ ಇಟ್ಟ ಹಣವನ್ನ ಮರಳಿ ಪಡೆದುಕೊಳ್ಳಬಹುದು. ಇನ್ನು ಅದೇ ರೀತಿಯಲ್ಲಿ ನೀವು 3.5 ಲಕ್ಷ ರೂಪಾಯಿಯನ್ನ ಇಟ್ಟರೆ 1925 ರೂಪಾಯಿ ಸಿಗುತ್ತದೆ ಮತ್ತು ಗರಿಷ್ಟ ಮೊತ್ತ 4.5 ಲಕ್ಷ ರೂಪಾಯಿಯನ್ನ ಈ ಯೋಜನೆಯ ಅಡಿಯಲ್ಲಿ ಹೂಡಿಕೆ ಮಾಡಿದರೆ ನೀವು ಪ್ರತಿ ತಿಂಗಳು 2500 ರೂಪಾಯಿಯನ್ನ ಪಡೆದುಕೊಳ್ಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಪೋಷಕರಿಗೆ ತಲುಪಿಸಿ.