Chris Gayle: ಕೊಹ್ಲಿಗಾಗಿ ಮತ್ತೆ IPL ಗೆ ಎಂಟ್ರಿ ಕೊಟ್ಟ ಗೇಲ್, ಮುಂದಿನ ವರ್ಷ ನನ್ನ ಟಾರ್ಗೆಟ್ ಕೊಹ್ಲಿ ಅಂದ ಗೇಲ್.
ಕೊಹ್ಲಿ ದಾಖಲೆಯನ್ನ ಮುರಿಯುವ ಸಲುವಾಗಿ ಮತ್ತೆ ಐಪಿಎಲ್ ನಲ್ಲಿ ಆಡಲು ಮುಂದಾದ ಕ್ರಿಶ್ ಗೇಲ್.
Chris Gayle About Virat Kohli: ಪ್ರಸ್ತುತ ಐಪಿಎಲ್ (IPL)ನ ಹದಿನಾರನೇ ಆವೃತ್ತಿ ನಡೆಯುತ್ತಿದೆ. ಕ್ರಿಕೆಟ್ ಪ್ರಿಯರು ಐಪಿಎಲ್ ನೋಡಲು ಬಹಳ ಕುತೂಹಲರಾಗಿದ್ದಾರೆ. ಈ ಬಾರಿಯ ಪಂದ್ಯ ಬಹಳ ರೋಚಕವಾಗಿದೆ.
ಪ್ರಮುಖ ತಂಡಗಳ ನಡುವೆ ಹಣಾಹಣಿ ನಡೆಯುತ್ತಿದೆ. ಇನ್ನು ಇತ್ತೀಚಿಗಷ್ಟೇ ಕನ್ನಡಿಗರ ನೆಚ್ಚಿನ ತಂಡವಾದ ಆರ್ ಸಿಬಿ (RCB) ಎದುರಾಳಿ ತಂಡದ ವಿರುದ್ಧ ಗೆದ್ದಿದೆ. ಕ್ರಿಕೆಟ್ ಪ್ರಿಯರು ಆರ್ ಸಿ ಬಿ ಗೆಲುವನ್ನು ಆನಂದಿಸುತ್ತಿದ್ದಾರೆ.
ಭಾರತೀಯ ಸ್ಟಾರ್ ಕ್ರಿಕೆಟ್ ಆಟಗಾರ
ಇನ್ನು ಈ ಬಾರಿಯ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಅವರು ತಮ್ಮ ಅದ್ಭುತ ಪ್ರದರ್ಶವನ್ನು ನೀಡುತ್ತಿದ್ದಾರೆ. ಇದೀಗ ವಿರಾಟ್ ಕೊಹ್ಲಿ ದಾಖಲೆಯನ್ನು ಮುಂದಿನ ವರ್ಷ ಕ್ರಿಸ್ ಗೇಲ್ ಮುರಿಯುವುದಾಗಿ ಹೇಳಿದ್ದಾರೆ. ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿರಾಟ್ ಕೊಹ್ಲಿ ದಾಖಲೆಯನ್ನು ಮುರಿಯುತ್ತೇನೆ ಎಂದ ಕ್ರಿಸ್ ಗೇಲ್
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ 7 ನೇ ಶತಕ ಬಾರಿಸಿ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದಿದ್ದಾರೆ. ಇದನ್ನು ಯೂನಿವರ್ಸ್ ಬಾಸ್ ಖ್ಯಾತಿಯ ಗೇಲ್ ತಮಾಷೆಯಾಗಿ ಸ್ವೀಕರಿಸಿದ್ದಾರೆ. ಮುಂದಿನ ವರ್ಷ ಮರಳಿ ಐಪಿಎಲ್ ಆಡಲಿದ್ದು ಕೊಹ್ಲಿ ದಾಖಲೆಯನ್ನು ಮತ್ತೆ ವಶಪಡಿಸಿಕೊಳ್ಳಲಿದ್ದೇನೆ ಎಂದು ಜೋಕ್ ಮಾಡಿದ್ದಾರೆ.
ಅನುಮಾನವೇ ಇಲ್ಲ. ವಿರಾಟ್ ಕೊಹ್ಲಿ ಅವರದು ಅದ್ಭುತ ಇನ್ನಿಂಗ್ಸ್. ಅವರು ಯುನಿವರ್ಸ್ ಬಾಸ್ ನ ದಾಖಲೆಯನ್ನು ಮೀರಿ ನಿಂತರು. ಇರಲಿ, ನಾನು ನಿವೃತ್ತಿಯನ್ನು ತೊರೆದು ಐಪಿಎಲ್ಗೆ ಮರಳುತ್ತೇನೆ. ಮುಂದಿನ ವರ್ಷ ನಿಮ್ಮನ್ನು ನೋಡಿಕೊಳ್ಳುತ್ತೇನೆ, ನಿಮ್ಮ ದಾಖಲೆಯನ್ನು ಮುರಿಯುತ್ತೇನೆ ನೋಡಿ ವಿರಾಟ್ ಎಂಬುದಾಗಿ ಚಟಾಕಿ ಹಾರಿಸಿದರು.