Christmas And New Year Cake Health Issue: ಎಲ್ಲೆಡೆ ಕ್ರಿಸ್ಮಸ್ ಹಬ್ಬದ ಸಂಭ್ರಮಾಚರಣೆ ನೆಡೆಯುತ್ತಿದೆ. ಕ್ರೈಸ್ತರ ಅತೀ ದೊಡ್ಡ ಹಬ್ಬ ಕ್ರಿಸ್ಮಸ್ ಬಂದರೆ ಸಾಕು ಎಲ್ಲರೂ ಕೂಡ ಮನೆಯಲ್ಲಿ ಕೇಕ್ ಜೊತೆಗೆ ಹಬ್ಬವನ್ನು ಆಚರಿಸುತ್ತಾರೆ. ಕೇಕ್ ಅಂದರೆ ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಹೆಚ್ಚು ಇಷ್ಟಪಡುತ್ತಾರೆ. ಹುಟ್ಟು ಹಬ್ಬ, ವಿವಾಹ ವಾರ್ಷಿಕೋತ್ಸವದಿಂದ ಹಿಡಿದು ಯಾವುದೇ ಪಾರ್ಟಿ ಇದ್ದರೂ ಕೇಕ್ ಬೇಕೇ ಬೇಕು. ಆದರೆ ನಾವು ತಿನ್ನುವ ಕಲರ್ ಕಲರ್ ಕೇಕ್ ನಮ್ಮ ಜೀವಕ್ಕೆ ಅಪಾಯ ತಂದುಕೊಡುತ್ತದೆ ಮತ್ತು ಈ ಬಗ್ಗೆ ಯಾರು ಕೂಡ ಯೋಚನೆ ಮಾಡುವುದಿಲ್ಲ. ಹಾಗಾದರೆ ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯ ಸಮಯದಲ್ಲಿ ಅತೀ ಹೆಚ್ಚು ಕೇಕ್ ತಿನ್ನುವುದರಿಂದ ನಮಗೆ ಬರುವ ಗಂಭೀರ ಆರೋಗ್ಯ ಸಮಸ್ಯೆಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.
ವೈದ್ಯರ ಎಚ್ಚರಿಕೆ
ಕರ್ನಾಟಕದಲ್ಲಿ ಕೇಕ್ ಗಳನ್ನೂ ಕೆಲವು ಪರೀಕ್ಷೆಗೆ ಒಳಪಡಿಸಲಾಯಿತು. ಆ ಪರೀಕ್ಷೆಯಲ್ಲಿ ಅನುಮತಿಗಿಂತ ಹೆಚ್ಚು ಕೃತಕ ಬಣ್ಣವನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. ಇದು ನಮ್ಮನ್ನು ಭೀಕರ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. ಬಣ್ಣ ಬಣ್ಣದ ಕೇಕ್ ಖರೀದಿಸುವ ಬದಲು, ನೀವು ತಿನ್ನುವ ಕೇಕ್ ಎಷ್ಟು ಸೇಫ್ ಇದೆ ಎಂದು ಯೋಚಿಸಿ ಖರೀದಿಸಿ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಕೃತಕ ಬಣ್ಣ ಯಾವುದು ಮತ್ತು ಏಕೆ ಬಳಕೆ ಮಾಡುತ್ತಾರೆ?
Allura Red, Sunset Yellow, Tartrazine ಅನ್ನುವ ಕೃತಕ ಬಣ್ಣಗಳನ್ನು ಕೇಕ್ ನಲ್ಲಿ ಬಳಕೆ ಮಾಡುತ್ತಾರೆ. ಇನ್ನು ಈ ಬಣ್ಣಗಳನ್ನು ಕೇಕ್ ಅನ್ನು ಹೆಚ್ಚು ಆಕರ್ಷಣೀಯಗೊಳಿಸಲು ಬಳಕೆ ಮಾಡುತ್ತಾರೆ. ಅಧ್ಯಯನದ ಮಾಹಿತಿ ಪ್ರಕಾರ, ಇದನ್ನ ಸೇವನೆ ಮಾಡುದರಿಂದ ಅಲರ್ಜಿ, ತಲೆನೋವು ಅಥವಾ ಜೀರ್ಣ ಸಮಸ್ಯೆಗಳು ಉಂಟಾಗುತ್ತದೆ. ಹಾಗೆ ಮಕ್ಕಳಲ್ಲಿ ಹೈಪರ್ ಆಕ್ಟಿವಿಟಿ ಅಥವಾ ಗಮನ ಕೇಂದ್ರೀಕರಣದ ತೊಂದರೆಗಳು ಕಂಡುಬಂದಿವೆ. ಸಾಮಾನ್ಯ ಕೇಕ್ ನಲ್ಲಿ ಯಾವುದೇ ತೊಂದರೆ ಇಲ್ಲ ಆದರೆ ಅನುಮತಿಗಿಂತ ಹೆಚ್ಚಿನ ಬಣ್ಣದ ಬಳಕೆಯಿಂದ ಈ ಎಲ್ಲಾ ಸಮಸ್ಯೆಗಳು ಉಂಟಾಗುತ್ತದೆ.
ಕರ್ನಾಟಕದಲ್ಲಿ ಆಹಾರ ಸುರಕ್ಷತೆಯ ಕ್ರಮಗಳು
2024 ರಲ್ಲಿ 235 ಕೇಕ್ ಮಾದರಿಗಳ ಪರೀಕ್ಷೆಯನ್ನು ನೆಡೆಸಲಾಯಿತು. ಇದರಲ್ಲಿ ಅನುಮತಿಗಿಂತ ಹೆಚ್ಚು ಕೃತಕ ಬಣ್ಣವನ್ನು ಬಳಕೆ ಮಾಡಿರುವುದು ಕಂಡು ಬಂದಿದೆ. ಮುಖ್ಯವಾಗಿ Red Velvet, Black Forest ಕೇಕ್ ಗಳಲ್ಲಿ. ಈ ಹಿನ್ನೆಲೆಯಲ್ಲಿ ಬೇಕರಿಗಳಿಗೆ ಎಚ್ಚರಿಕೆ ನೀಡಲಾಗಿದೆ. ಆಹಾರ ಸುರಕ್ಷತಾ ನಿಯಮಗಳ ಪ್ರಕಾರ ಅನುಮತಿ ಇರುವ ಬಣ್ಣಗಳನ್ನು ಮಾತ್ರ ಸೀಮಿತ ಪ್ರಮಾಣದಲ್ಲಿ ಬಳಕೆ ಮಾಡಬೇಕು.
ವೈದ್ಯರ ಸುರಕ್ಷತೆಯ ಸಲಹೆ
- ವಿಶ್ವಾಸಾರ್ಹ ಬೇಕರಿಗಳಿಂದ ಕೇಕ್ ಖರೀದಿ ಮಾಡಿ
- ನೈಸರ್ಗಿಕ ಬಣ್ಣಗಳಾದ ಬೀಟ್‌ರೂಟ್, ಹಳದಿ ಅಥವಾ ಹಣ್ಣುಗಳನ್ನು ಬಳಸಿ ಮನೆಯಲ್ಲಿ ಕೇಕ್ ಮಾಡುವುದು ಇನ್ನು ಉತ್ತಮ
- ಮಕ್ಕಳಿಗೆ ಸೀಮಿತ ಪ್ರಮಾಣದಲ್ಲಿ ಕೇಕ್ ನೀಡಬೇಕು
ಅಪಾಯಗಳು
- ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ
- ಅತಿಯಾದ ಬಳಕೆಯಿಂದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು
- ಅಲರ್ಜಿ, ಜೀರ್ಣಕ್ರಿಯೆಯಲ್ಲಿ ಸಮಸ್ಯೆ, ತಲೆನೋವು
ವಿಶೇಷ ಸೂಚನೆ: ನಾಡುನುಡಿ ಮಾದ್ಯಮದಲ್ಲಿ ಯಾವುದೇ ಸುಳ್ಳುಸುದ್ದಿ ಪ್ರಕಟಿಸಲಾಗುವುದಿಲ್ಲ. ಇದು ಆರೋಗ್ಯ ಸಂಬಂಧಿಸಿದ ಮಾಹಿತಿಯಾಗಿದೆ ಮತ್ತು ಹೆಚ್ಚಿನ ಮಾಹಿತಿಗಾಗಿ ವೈದ್ಯರನ್ನು ಸಂಪರ್ಕಿಸಿ.

