Cheapest Car: ಕೆವಲ 1 ಲಕ್ಷ ರೂಪಾಯಿ ಕೊಟ್ಟು ಮನೆಗೆ ತನ್ನಿ ಈ ಹೊಸ ಮೈಲೇಜ್ ಕಾರ್, ಕಡಿಮೆ ಬೆಲೆ 20 Km ಮೈಲೇಜ್.

ಒಂದು ಲಕ್ಷಕ್ಕೆ ಮನೆಗೆ ತನ್ನಿ 20 ಕಿಲೋಮೀಟರ್ ಮೈಲೇಜ್ ಕೊಡುವ ಈ ಕಾರ್.

Best SUV Cheapest Car: ಮಾರುಕಟ್ಟೆಯಲ್ಲಿ ಕಾರ್ ಗಳು ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿವೆ. ದೇಶದ ಹಲವು ಜನಪ್ರಿಯ ಕಾರ್ ತಯಾರಕ ಕಂಪನಿಗಳು ವಿಭಿನ್ನ ಮಾದರಿಯ ಕಾರ್ ಗಳನ್ನೂ ಮಾರುಕಟ್ಟೆಯಲ್ಲಿ ಪರಿಚಯಿಸುತ್ತಿವೆ. ಮಾರುಕಟ್ಟೆಯಲ್ಲಿ ಎಲ್ಲ ಮಾದರಿಯ ಕಾರ್ ಕೂಡ ಹೆಚ್ಚಿನ ಸೆಲ್ ಕಾಣುತ್ತಿವೆ.

ಇನ್ನು ಗ್ರಾಹಕರ ಬೇಡಿಕೆ ಅನುಗುಣವಾಗಿ ವಿವಿಧ ಜನಪ್ರಿಯ ಕಾರ್ ತಯಾರಕ ಕಂಪನಿಗಳ ಜೊತೆಗೆ ಕೆಲ ಸ್ಟಾರ್ಟಪ್ ಕಂಪನಿಗಳು ಕೂಡ ಮಾರುಕಟ್ಟೆಯಲ್ಲಿ ವಿವಿಧ ಮಾದರಿಯ ಕಾರ್ ಗಳನ್ನೂ ಪರಿಚಯಿಸುತ್ತವೆ. ಇದೀಗ ಮಾರುಕಟ್ಟೆಯಲ್ಲಿ ಜನಪ್ರಿಯ ಫ್ರೆಂಚ್ ಕಾರು ತಯಾರಕ ಕಂಪನಿಯಾದ ಸಿಟ್ರೋಯೆನ್ (Citroen) ಆ ಹೊಸ ಮಾದರಿ ಕಾರು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ.

A citroen car can be bought at a low price
Image Credit: carwale

ಸಿಟ್ರೋಯೆನ್ C3 SUV
ವೈಶಿಷ್ಟ್ಯ ವಿನ್ಯಾಸದ ನೂತನ ಸುಧಾರಿತ ವೈಶಿಷ್ಟ್ಯಗಳಿರುವ ಈ ಸಿಟ್ರೋಯೆನ್ C3 SUV ಮಾರುಕಟ್ಟೆಯಲ್ಲಿ ಖರೀದಿಗೆ ಲಭ್ಯವಿದೆ. ಕಂಪನಿಯು ಸಿಟ್ರೋಯೆನ್ C3 ಕಾರಿನಲ್ಲಿ 1198 ಸಿಸಿ ಎಂಜಿನ್ ಅನ್ನು ಅಳವಡಿಸಿದೆ. ಈ ಎಂಜಿನ್ 5750 rpm ನಲ್ಲಿ 80.46 bhp ಮತ್ತು 3750 rpm ನಲ್ಲಿ 115 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಸಿಟ್ರೋಯೆನ್ C3 ಕಾರ್ ನಲ್ಲಿ 5-ಸ್ಪೀಡ್ ಮ್ಯಾನುವಲ್ ಟ್ರಾನ್ಸ್ಮಿಷನ್ ಅನ್ನು ಪಡೆಯಬಹುದಾಗಿದೆ.

ಸಿಟ್ರೋಯೆನ್ C3 SUV ಬೆಲೆ ಮತ್ತು ಮೈಲೇಜ್
ನೂತನ ಫೀಚರ್ ಗಳೊಂದಿಗೆ ಬಿಡುಗಡೆಯಾದ ಈ ಕಾರು ಪ್ರತಿ ಲೀಟರ್‌ ಗೆ 19.3 ಕಿಲೋಮೀಟರ್ ಮೈಲೇಜ್ ನೀಡುತ್ತದೆ. ಮಾರುಕಟ್ಟೆಯಲ್ಲಿ ಸಿಟ್ರೋಯೆನ್ ಕಂಪನಿಯು ಪ್ಯೂರ್‌ ಟೆಕ್ 82 ಲೈವ್ ರೂಪಾಂತರವನ್ನು ಪರಿಚಯಿಸಿದೆ. ಈ ರೂಪಾಂತರಕ್ಕೆ ದೇಶಿಯ ಮಾರುಕಟ್ಟೆಯಲ್ಲಿ 6,16,000 ರೂ. ಬೆಲೆಯನ್ನು ನಿಗದಿಪಡಿಸಿದೆ. ಇನ್ನು ಸಿಟ್ರೋಯೆನ್ C3 SUV ಒನ್ ರೋಡ್ ಬೆಲೆ 6,91,752 ಆಗುತ್ತದೆ.

People have expressed appreciation for the price and mileage of the citroen C3 car.
Image Credit: autocarindia

ಕೇವಲ 1 ಲಕ್ಷ ರೂಪಾಯಿ ಕೊಟ್ಟು ಮನೆಗೆ ತನ್ನಿ ಈ ಹೊಸ ಮೈಲೇಜ್ ಕಾರ್
ಈ ಕಾರ್ ನ ಬೆಲೆ ಸ್ವಲ್ಪ ಅಧಿಕವಾಗಿದ್ದು ಮಧ್ಯಮ ವರ್ಗದ ಜನರಿಗೆ ಈ ಕಾರ್ ನ ಖರೀದಿ ಕಷ್ಟವಾಗಬಹುದು. ಹೀಗಾಗಿ ಕಂಪನಿಯು ಈ ಕಾರ್ ಖರಿಗಾಗಿ ಹಣಕಾಸಿನ ಯೋಜನೆಯನ್ನು ನೀಡಿದೆ. ಕೇವಲ 1 ಲಕ್ಷ ರೂಪಾಯಿ ಕೊಟ್ಟು ಈ ಹೊಸ ಮೈಲೇಜ್ ಕಾರ್ ಅನ್ನು ಮನೆಗೆ ತರಬಹುದಾಗಿದೆ.

Join Nadunudi News WhatsApp Group

ಈ ಕಾರ್ ಖರೀದಿಗೆ ಬ್ಯಾಂಕ್ ನಿಮಗೆ 5 ವರ್ಷಗಳ ಸಾಲವನ್ನು ಶೇ. 9.8 ರ ಬಡ್ಡಿದರದಲ್ಲಿ ನೀಡುತ್ತವೆ. ಈ ಬಡ್ಡಿದರದ ಆಧಾರದ ಮೇಲೆ ನೀವು 5,94,545 ರೂ. ಗಳ ಸಾಲವನ್ನು ಪಡೆಯಬಹುದು. ನಂತರ ನೀವು ಮಾಸಿಕವಾಗಿ 12,574 ರೂ. ಗಳನ್ನೂ ಪಾವತಿಸುವ ಮೂಲಕ 5 ವರ್ಷಗಳಲ್ಲಿ ಸಾಲ ಮರುಪಾವತಿ ಮಾಡಬಹುದಾಗಿದೆ. ಕಡಿಮೆ ಬೆಲೆಗೆ ಹೆಚ್ಚಿನ ಮೈಲೇಜ್ ನೀಡುವ ಕಾರ್ ಇದಾಗಿದ್ದು ಗ್ರಾಹಕರು ಈ ಕಾರ್ ಖರೀದಿಗೆ ಮನಸ್ಸು ಮಾಡಬಹುದು.

Join Nadunudi News WhatsApp Group