Car Discount: ದೀಪಾವಳಿಗೆ ಕಾರ್ ಖರೀದಿಸುವವರಿಗೆ ಭರ್ಜರಿ ಆಫರ್, ಈ ಕಾರಿನ ಮೇಲೆ ಭರ್ಜರಿ 2 ಲಕ್ಷ ರೂ ಡಿಸ್ಕೌಂಟ್.

ದೀಪಾವಳಿ ಹಬ್ಬದ ಕಾರ್ ಖರೀದಿ ಮಾಡುವವರಿಗೆ ಭರ್ಜರಿ ರಿಯಾಯಿತಿ ಆಫರ್ ಘೋಷಣೆಯಾಗಿದೆ.

Citroen Car Diwali Discount: ಈ ಬಾರಿಯ ಹಬ್ಬದ ಸೀಸನ್ ನಲ್ಲಿ ಕಾರ್ ಖರೀದಿಗೆ ಒಂದೊಳ್ಳೆ ಅವಕಾಶ ಲಭ್ಯವಾಗುತ್ತಿದೆ ಎನ್ನಬಹುದು. ಭಾರತೀಯ ಆಟೋ ವಲಯದಲ್ಲಿ ಕಾರ್ ಖರೀದಿಗೆ ಆಕರ್ಷಕ ಆಫರ್ ನೀಡಲಾಗುತ್ತಿದೆ. ವಿವಿಧ ಕಾರ್ ತಯಾರಕ ಕಂಪನಿಗಳು ಹಲವು ಮಾದರಿಯ ಕಾರ್ ಗಳ ಖರೀದಿಯಲ್ಲಿ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಗ್ರಾಹಕರು ತಮ್ಮ ಬಹುದಿನದ ಕಾರ್ ಖರೀದಿಯ ಆಸೆಯನ್ನು ಈ ಬಾರಿಯ Diwali Sale ನಲ್ಲಿ ನನಸು ಮಾಡಿಕೊಳ್ಳಬಹುದು.

Citroen C3 Car Discount
Image Credit: Autocarindia

ಭರ್ಜರಿ ಆಫರ್ ನೊಂದಿಗೆ ಖರೀದಿಸಿ Citroen ಕಾರ್
ನೀವು ಕಾರ್ ಖರೀದಿಸುವ ಯೋಜನೆಯಲ್ಲಿದ್ದರೆ ಈ ಮಾಹಿತಿ ತಿಳಿದುಕೊಳ್ಳುವ ಮೂಲಕ ಕಾರ್ ಖರೀದಿಗೆ ಮುಂದಾದರೆ ನೀವು ಲಕ್ಷಕ್ಕೂ ಅಧಿಕ ಹಣವನ್ನು ಉಳಿಸಬಹುದು.

ಇನ್ನು ಮಾರುಕಟ್ಟೆಯಲ್ಲಿ 6 ರಿಂದ 37 ಲಕ್ಷದವರೆಗೆ ಲಭ್ಯವಿರುವ Citroen ಮಾದರಿಯ ಕಾರ್ ಗಳ ಖರೀದಿಗೆ ಇದೀಗ ಕಂಪನಿಯು ಆಕರ್ಷಕ ಆಫರ್ ಅನ್ನು ಘೋಷಿಸಿದೆ. ನೀವು Citroen Car ಗಳನ್ನೂ ಖರೀದಿಸಲು ಮುಂದಾದರೆ 2 ಲಕ್ಷಕ್ಕೂ ಅಧಿಕ ಹಣವನ್ನು ಉಳಿಸಬಹುದಾಗಿದೆ. ಸದ್ಯ Citroen ಕಂಪನಿ ತನ್ನ ಯಾವ ಯಾವ ಮಾದರಿಯ ಕಾರ್ ಗಳ ಖರೀದಿಗೆ ಆಕರ್ಷಕ ಆಫರ್ ಅನ್ನು ನೀಡಿದೆ ಎನ್ನುವ ಬಗ್ಗೆ ವಿವರ ಇಲ್ಲಿದೆ.

Citroen C3 Aircross Discount
Image Credit: Cardekho

Citroen ಕಾರ್ ಗಳ ಖರೀದಿಯಲ್ಲಿ ಭರ್ಜರಿ 4 ಲಕ್ಷ ಉಳಿಸಬಹುದು
*Citroen C3 Car Discount
ಕಂಪನಿಯು Citroen C3 ಹ್ಯಾಚ್‌ ಬ್ಯಾಕ್‌ ನಲ್ಲಿ ರೂ. 99,000 ರಿಯಾಯಿತಿ ನೀಡುತ್ತಿದೆ. ಕಂಪನಿಯ ಹೆಚ್ಚು ಮಾರಾಟವಾದ ಕಾರ್ ಗಳ ಪಟ್ಟಿಯಲ್ಲಿ Citroen C3 ಸೇರಿಕೊಂಡಿದೆ. ಇನ್ನು Citroen C3 ಎಕ್ಸ್ ಶೋ ರೂಂ ಬೆಲೆ 7 ಲಕ್ಷ ರೂ. ಆಗಿದೆ. ಇದು ಎರಡು ಎಂಜಿನ್ ಆಯ್ಕೆಗಳನ್ನು ಹೊಂದಿದೆ. ಸುಧಾರಿತ ವೈಶಿಷ್ಟ್ಯಗಳೊಂದಿಗೆ ಬರುತ್ತಿರುವ ಈ ಕಾರು ಟಾಟಾ ಪಂಚ್ ಮತ್ತು ಹ್ಯುಂಡೈ ಎಕ್ಸ್ಟ್ರಾದೊಂದಿಗೆ ಸ್ಪರ್ಧಿಸುತ್ತದೆ.

*Citroen C3 Aircross Discount
Citroen C3 Aircross ಇದು C3 ನ SUV ಆವೃತ್ತಿಯಾಗಿದೆ. ಇದರ ಮೇಲೂ ಕಂಪನಿಯು 99 ಸಾವಿರ ರೂಪಾಯಿ ರಿಯಾಯಿತಿ ನೀಡುತ್ತಿದೆ. ಇದರ ಎಕ್ಸ್ ಶೋರೂಂ ಬೆಲೆಯು ಟಾಟಾ ನೆಕ್ಸಾನ್‌ ನಂತೆಯೇ ಇದೆ. ಇನ್ನು ಈ ಕಾರ್ ನಲ್ಲಿ 1.2 ಲೀಟರ್ ಎಂಜಿನ್ ಹೊಂದಿದೆ. ಈ ಎಂಜಿನ್ ಉತ್ತಮ ಪ್ರಮಾಣದ ಶಕ್ತಿಯನ್ನು ಉತ್ಪಾದಿಸುತ್ತದೆ.

Join Nadunudi News WhatsApp Group

Citroen C5 Aircross Discount
Image Credit: Carwale

*Citroen C5 Aircross Discount
Citroen C5 Aircross ಕಂಪನಿಯ ಅತ್ಯಂತ ದುಬಾರಿ SUV ಆಗಿದ್ದು, ಅದರ ಮೇಲೆ ರೂ. 2 ಲಕ್ಷ ರಿಯಾಯಿತಿ ನೀಡಲಾಗುತ್ತಿದೆ. ಇದು 2 ಲೀಟರ್ ಡೀಸೆಲ್ ಎಂಜಿನ್ ಹೊಂದಿದೆ. ಇದು 8 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್‌ ನೊಂದಿಗೆ ಬರುತ್ತದೆ. ಹೆಚ್ಚಿನ ಮೈಲೇಜ್ ನೀಡು ಕಾರ್ ಇದಾಗಿದ್ದು, ಅಗ್ಗದ ಬೆಲೆಯಲ್ಲಿ ಈ ಕಾರ್ ಅನ್ನು ಖರೀದಿಸಬಹುದು.

Join Nadunudi News WhatsApp Group