CM Siddaramaiah: ಈ ತಿಂಗಳು ಇಂತಹ ಮಹಿಳೆಯರಿಗೆ ಸಿಗಲ್ಲ ಗೃಹಲಕ್ಷ್ಮಿ ಯೋಜನೆಯ ಹಣ, ಸರ್ಕಾರದ ಖಡಕ್ ನಿರ್ಧಾರ.
ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮಿ ಯೋಜನೆಯ ಬಗ್ಗೆ ಇನ್ನೊಂದು ಅಪ್ಡೇಟ್ ಬಿಡುಗಡೆ.
CM Siddaramaiah About Gruha Lakshmi 2000 Credit: ಸದ್ಯ ರಾಜ್ಯದಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ Gruha Lakshmi ಅನುಷ್ಠಾನಗೊಂಡು ಒಂದು ತಿಂಗಳು ಕಳೆದಿದೆ. August 30 ರಂದು ರಾಜ್ಯದ ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ರೂ. ಹಣ ಜಮಾ ಆಗಿದೆ. ಇನ್ನು ಅರ್ಹ ಮಹಿಳೆಯರು ಎರಡನೇ ಕಂತಿನ ಹಣದ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಸರ್ಕಾರ ಗೃಹ ಲಕ್ಷ್ಮಿ ಯೋಜನೆಯಡಿ ಜಮಾ ಮಾಡಲಾದ ಮಾಸಿಕ 2000 ರೂ. ಪ್ರತಿ ಅರ್ಜಿದಾರರಿಗೆ ಲಭ್ಯವಾಗಿಲ್ಲ.
ಗೃಹ ಯೋಜನೆಯ 2000 ಹಣ ಪಡೆಯಲು ಅರ್ಹತೆ ಹೊಂದಿದ್ದರು ಕೂಡ ಕೆಲವು ಕಾರಣಗಳಿಂದ ಮಹಿಳೆಯರ ಖಾತೆಗೆ ಇನ್ನು ಮಾಸಿಕ ಹಣ ಜಮಾ ಆಗಿಲ್ಲ. ಸದ್ಯ ರಾಜ್ಯದಲ್ಲಿ ಗೃಹ ಲಕ್ಷ್ಮಿ ಹಣ ಯಾವಾಗ ಜಮಾ ಆಗುತ್ತದೋ ಎಂದು ಅರ್ಜಿದಾರರ ಮಹಿಳೆಯರು ಚಿಂತಿಸುವಂತಾಗಿದೆ.
ಇದೀಗ ರಾಜ್ಯದ ಮುಖ್ಯಮಂತ್ರಿ Siddaramaiah ಅವರು ಗೃಹ ಲಕ್ಷ್ಮಿ ಯೋಜನೆಯಡಿ ಇನ್ನು ಕೂಡ ಮಾಸಿಕ ಹಣ ಖಾತೆಗೆ ಜಮಾ ಆಗದೆ ಇದ್ದವರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಸದ್ಯ ರಾಜ್ಯ ಸರ್ಕಾರದಿಂದ ಗೃಹ ಲಕ್ಷ್ಮಿ ಯೋಜನೆಯಡಿ ಹಣ ಪಡೆಯದೇ ಇದ್ದವರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ.
ಈ ತಿಂಗಳು ಕೂಡ ಜಮಾ ಆಗಿಲ್ಲ ಇಂತಹ ಮಹಿಳೆಯರ ಖಾತೆಗೆ ಹಣ
ಸದ್ಯ ರಾಜ್ಯದ ಗೃಹಿಣಿಯರು ಕಳೆದ ತಿಂಗಳುಗಳ ಮಾಸಿಕ 2000 ರೂ. ನಿರೀಕ್ಷೆಯಲ್ಲಿದ್ದಾರೆ. ಈ ಬಾರಿ ಕೂಡ ಕೆಲ ಮಹಿಳೆಯರ ಖಾತೆಗೆ ಹಣ ಜಮಾ ಆಗುವ ಸಾಧ್ಯತೆ ಕಡಿಮೆ ಇದೆ. ಮುಖ್ಯವಾಗಿ ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಲು ರೇಷನ್ ಕಾರ್ಡ್ ನಲ್ಲಿ ಮುಖ್ಯಸ್ಥೆ ಮಹಿಳೆಯೇ ಆಗಬೇಕಿದೆ. ಈಗಾಗಲೇ ಸರ್ಕಾರ ರೇಷನ್ ಕಾರ್ಡ್ ತಿದ್ದುಪಡಿಗೆ ಅವಕಾಶ ನೀಡಿದೆ. ರೇಷನ್ ಕಾರ್ಡ್ ನಲ್ಲಿ ಮನೆಯ ಯಜಮಾನಿ ಮಹಿಳೆ ಆಗದಿದ್ದರೆ ಹಣ ಖಾತೆಗೆ ಜಮಾ ಆಗುವುದಿಲ್ಲ.
BPL Ration Card ಇಲ್ಲದೆ ಇದ್ದವರು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಿ ಹೊಸ ಕಾರ್ಡ್ ಬಂದ ಮೇಲೆ ಅರ್ಜಿ ಸಲ್ಲಿಸಬೇಕಿದೆ. ಅರ್ಜಿ ಸಲ್ಲಿಕೆಗೆ ಯಾವುದೇ ಗಡುವನ್ನು ಸರ್ಕಾರ ವಿಧಿಸಿಲ್ಲ. ನಿಮ್ಮ Ration Card ಗೆ ನಿಮ್ಮ Aadhaar Card Link ಆಗದೆ ಇದ್ದರೂ ಕೂಡ ಯಾವುದೇ ಕಾರಣಕ್ಕೂ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ ಎನ್ನುವ ಬಗ್ಗೆ ನಿಮಗೆ ತಿಳಿದಿದೆ. ಸದ್ಯ ಸಿದ್ದರಾಮಯ್ಯ ಅವರು ಗೃಹ ಲಕ್ಷ್ಮಿ ಯೋಜನೆಯ ಹಣದ ನಿರೀಕ್ಷೆಯಲ್ಲಿದ್ದವರಿಗೆ ಮಹತ್ವದ ಮಾಹಿತಿ ನೀಡಿದ್ದಾರೆ.
2000 ಹಣ ಖಾತೆಗೆ ಜಮಾ ಆಗದ ಮಹಿಳೆಯರಿಗೆ ಗುಡ್ ನ್ಯೂಸ್ ನೀಡಿದ ಸಿದ್ದರಾಮಯ್ಯ
ಗೃಹ ಲಕ್ಷ್ಮಿ ಯೋಜನೆಯಡಿ ಮಾಸಿಕ 2000 ಹಣ ಖಾತೆಗೆ ಜಮಾ ಆಗದ ಮಹಿಳೆಯರಿಗೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿಹಿ ಸುದ್ದಿ ನೀಡಿದ್ದಾರೆ. “ರಾಜ್ಯದ ಕೆಲ ಯಜಮಾನಿಯರ ಖಾತೆಗೆ ಗೃಹ ಲಕ್ಷ್ಮಿ 2000 ಹಣ ಇನ್ನು ಕೂಡ ಜಮಾ ಆಗಿಲ್ಲ. ತಾಂತ್ರಿಕ ಸಮಸ್ಯೆಯ ಕಾರಣ ಅರ್ಹರು ಯೋಜನೆಯಿಂದ ವಂಚಿರಾಗುತ್ತಿದ್ದಾರೆ. ತಾಂತ್ರಿಕ ಸಮಸ್ಯೆಯನ್ನು ಸರಿಪಡಿಸೋ ಮೂಲಕ 2000 ಹಣವನ್ನು ಡಿಬಿಟಿ ಮೂಲಕ ವರ್ಗಾವಣೆ ಮಾಡಲಾಗುತ್ತದೆ” ಎಂದು ಸಿಎಂ ಸಿದ್ದರಾಮಯ್ಯ ಅವರು ಮಾಹಿತಿ ನೀಡಿದ್ದಾರೆ.