CM Siddaramaih: ರಾಜ್ಯದ ಮುಸಲ್ಮಾನರಿಗೆ ಇನ್ನೊಂದು ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ, ಇನ್ನೊಂದು ಗ್ಯಾರೆಂಟಿ.

ರಾಜ್ಯದ ಮುಸಲ್ಮಾನರಿಗೆ ಇನ್ನೊಂದು ಭರವಸೆ ನೀಡುವ ಮೂಲಕ CM Siddaramaih ಅವರು ಮುಸಲ್ಮಾನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

CM Siddaramaih Latest Update: ರಾಜ್ಯದಲ್ಲಿ Congress ಸರ್ಕಾರದ ಅವಧಿ ಆರಂಭವಾದಾಗಿನಿಂದ ಅನೇಕ ನಿಯಮಗಳು ಬದಲಾಗುತ್ತಿದೆ. ಹೊಸ ನಿಯಮಗಳನ್ನು ಜಾರಿಗೊಳಿಸುವುದರ ಜೊತೆಗೆ ಕಾಂಗ್ರೆಸ್ ಸರ್ಕಾರ ರಾಜ್ಯದ ಜನತೆಗಾಗಿ ವಿವಿಧ ಯೋಜನೆನ್ನು ಕೂಡ ಪರಿಚಯಿಸುತ್ತಿದೆ. ಈಗಾಗಲೇ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದ ಉಚಿತ ನಾಲ್ಕು ಯೋಜನೆಗಳ ಲಾಭವನ್ನು ಪಡೆಯುತ್ತಿದೆ. ಸದ್ಯದಲ್ಲೇ ಐದನೇ ಯೋಜನೆ ಕೂಡ ಅನುಷ್ಠಾನಗೊಳ್ಳಲಿದೆ.

ಇನ್ನು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಕ್ರಮ ಕೈಗೊಳ್ಳುತ್ತಿದೆ ಎನ್ನಬಹುದು. ಸದ್ಯ ಕಾಂಗ್ರೆಸ್ ಸರ್ಕಾರ ರಾಜ್ಯದ ಮುಸಲ್ಮಾನರಿಗೆ ಮಹತ್ವದ ಮಾಹಿತಿಯನ್ನು ನೀಡಿದೆ. ರಾಜ್ಯದ ಮುಸಲ್ಮಾನರಿಗೆ ಇನ್ನೊಂದು ಭರವಸೆ ನೀಡುವ ಮೂಲಕ CM Siddaramaih ಅವರು ಮುಸಲ್ಮಾನರಿಗೆ ಸಿಹಿ ಸುದ್ದಿ ನೀಡಿದ್ದಾರೆ.

CM Siddaramaiah new guarantee for muslims
Image Credit: Hindustantimes

ರಾಜ್ಯದ ಮುಸಲ್ಮಾನರಿಗೆ ಇನ್ನೊಂದು ಭರವಸೆ ನೀಡಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರಿನಲ್ಲಿ ಬ್ಯಾರಿ ವೆಲ್ ಫೇರ್ ಅಸೋಸಿಯೇಷನ್ ವತಿಯಿಂದ ನಿರ್ಮಾಣವಾದ ಬ್ಯಾರಿ ಸೌಹಾರ್ದ ಭವನ ಉದ್ಘಾಟನೆಯ ವೇಳೆ ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿ ಸಮುದಾಯ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ. ನನ್ನ ಅಧಿಕಾರದ ಅವಧಿ ಮುಗಿಯುವುದರೊಳಗೆ ಮುಸ್ಲಿಮರ ಅಭಿವೃದ್ಧಿ ಹಣವನ್ನು 10 ಸಾವಿರ ಕೋಟಿಗೆ ಏರಿಸಲಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಮುಸ್ಲಿಮರಿಗೆ ಭರವಸೆ ನೀಡಿದ್ದಾರೆ.

ಮುಸ್ಲಿಮರ ಅಭಿವೃದ್ದಿಗಾಗಿ 10 ಸಾವಿರ ಕೋಟಿ
“ಮೊದಲು ಮುಸ್ಲಿಮರಿಗೆ 400 ಕೋಟಿ ಹಣ ಮೀಸಲಿಡಲಾಗಿತ್ತು. ಆ ಬಳಿಕ ಇದನ್ನು ನಾನು 3 ಸಾವಿರ ಕೋಟಿಗೆ ಏರಿಸಿದ್ದೇನೆ. ಅಂದು ಕೂಡ ನನ್ನ ಎದುರು ಯಾರು ಬಂದು ಇದರ ಬಗ್ಗೆ ಕೇಳಿರಲಿಲ್ಲ. ಹಾಗಾಗಿ ನಾನು ಅನುದಾನ ಹೆಚ್ಚು ಮಾಡಿದ್ದೆ.

CM Siddaramaih Latest Update
Image Credit: Firstpost

ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡೇ ಮಾಡುತ್ತೇನೆ. ಮುಂದೆ ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರಕ್ಕೆ ಏರಿಕೆ ಮಾಡುತ್ತೇನೆ ಅದು ನನ್ನ ಕೆಲಸ. ರಾಜ್ಯದಲ್ಲಿ ಎಲ್ಲಾ ಸಮುದಾಯದ ಅಭಿವೃದ್ದಿಗಾಗಿ ಕೆಲಸ ಮಾಡುತ್ತೇನೆ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು” ಎಂದು CM ಸಿದ್ದರಾಮಯ್ಯ ಅವರು ಮುಸ್ಲಿಮರ ಅಭಿವೃದ್ಧಿಯ ಬಗ್ಗೆ ಮಾತನಾಡಿದ್ದಾರೆ.

Join Nadunudi News WhatsApp Group

Join Nadunudi News WhatsApp Group