CNAP Aadhaar Caller ID: ಈ ಮೊದಲು ನೀವು ನಿಮ್ಮ ಮೊಬೈಲ್ ಗೆ ಬರುವ ಅಪರಿಚಿತ ಸಂಖ್ಯೆಯಿಂದ ಬರುವ ಕರೆಯನ್ನು ಟ್ರೂ ಕಾಲರ್ ಮೂಲಕ ಚೆಕ್ ಮಾಡಿಕೊಳ್ಳುತ್ತಿದ್ದೀರಿ. ಆದರೆ ಇನ್ನುಮುಂದೆ ಟ್ರೂ ಕಾಲರ್ ಬಳಸುವ ಅವಶ್ಯಕೆ ಇಲ್ಲ. ಇದಕ್ಕಾಗಿ ಭಾರತ ಸರಕಾರ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಇದರಿಂದ ಕರೆ ಮಾಡುವವರ ನಿಜವಾದ ಹೆಸರು ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳುತ್ತದೆ. ಇದು ಸ್ಕ್ಯಾಮ್ ಕರೆಯನ್ನು ತಡೆಯುವಲ್ಲಿ ದೊಡ್ಡ ಸಹಾಯವಾಗುತ್ತದೆ. ಹಾಗಾದರೆ ನಾವೀಗ ಭಾರತ ಸರ್ಕಾರ ಜಾರಿಗೆ ತಂದ ಈ ಹೊಸ ವ್ಯವಸ್ಥೆ ಏನು…? ಇದು ಹೇಗೆ ಕೆಲಸ ಮಾಡುತ್ತದೆ..? ಅನ್ನುವ ಬಗ್ಗೆ ನಾವೀಗ ಸಂಪೂರ್ಣ ಮಾಹಿತಿಯನ್ನ ತಿಳಿದುಕೊಳ್ಳೋಣ.
CNAP ಎಂದರೆ ಏನು..?
CNAP (Calling Name Presentation) ಎಂದರೆ, ಸ್ವೀಕರಿಸುವವರ ಫೋನ್ ಪರದೆಯ ಮೇಲೆ ಕರೆ ಮಾಡಿದವರ ನೋಂದಾಯಿತ ಹೆಸರನ್ನು ಪ್ರದರ್ಶಿಸುವ ದೂರಸಂಪರ್ಕ ಸೇವೆಯಾಗಿದೆ. ಅಂದರೆ, ಸಿಮ್ ಕಾರ್ಡ್ ಆಧಾರ್ ಲಿಂಕ್ ಆಗಿರುವ ಹೆಸರನ್ನು ತೋರಿಸುತ್ತದೆ. ಉದಾಹರಣೆಗೆ, ನೀವು ನಿಮ್ಮ ಅಮ್ಮನ ನಂಬರನ್ನು ಅಮ್ಮ ಎಂದು ಸೇವ್ ಮಾಡಿಕೊಂಡಿದ್ದರೆ, ಅವರ ಕರೆ ಬರುವಾಗ ಮೊದಲು ‘ಸೀತಾ ಎಂ.ಆರ್’ ಎಂದು ತೋರಿಸುತ್ತದೆ. ಇದು 4G ಮತ್ತು 5G ನೆಟ್ವರ್ಕ್ ನಲ್ಲಿ ಮಾತ್ರ ಕೆಲಸ ನಿರ್ವಹಿಸಿತ್ತದೆ. TRAI ಮತ್ತು DoT ವತಿಯಿಂದ ಇನ್ನು ಪರೀಕ್ಷೆಯ ಹಂತದಲ್ಲಿದೆ. ಜಿಯೋ, ಏರ್ಟೆಲ್ ಸೇರಿದಂತೆ ಎಲ್ಲ ಟೆಲಿಕಾಂ ಕಂಪನಿಗಳು 2026 ರ ರೊಳಗೆ ಜಾರಿಗೊಳಿಸಲಿದೆ
ಟ್ರೂ ಕಾಲರ್ ಮತ್ತು CNAP ನಲ್ಲಿ ಯಾವುದು ಉತ್ತಮ..?
ಟ್ರೂ ಕಾಲರ್ ಕ್ರೌಡ್ ಸೋರ್ಸ್ಡ್ ಡೇಟದಿಂದ ಹೆಸರನ್ನು ತೋರಿಸುತ್ತದೆ. ಇದು ತಪ್ಪಾಗಿರಬಹುದು. ಆದರೆ CNAP ಸರ್ಕಾರೀ KYC ದಾಖಲೆಯಿಂದ ನಿಜವಾದ ಹೆಸರನ್ನು ತೋರಿಸುತ್ತದೆ. ಇದರಿಂದ ವಂಚನೆಯ ಕರೆಯನ್ನು ಗುರುತಿಸಲು ಸುಲಭ ಆಗುತ್ತದೆ. ಆದರೆ ಇದು ಎಲ್ಲರಿಗೂ ಲಭ್ಯ ಇಲ್ಲ. ಹೌದು, ಇದು 2G ಬಳಕೆದಾರರಿಗೆ ಸಾಧ್ಯವಿಲ್ಲ. ಇದರಿಂದ ಟೆಲಿಕಾಂ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಆಗಲಿದೆ ಎಂದು ಸರ್ಕಾರ ಹೇಳುತ್ತಿದೆ.
ಈ ಯೋಜನೆಯಿಂದ ಆಗುವಂತಹ ಲಾಭ
ಮಾಹಿತಿಯ ಪ್ರಕಾರ, ಈ ಯೋಜನೆಯಿಂದ ಸುಮಾರು ಸ್ಪ್ಯಾಮ್ ಕರೆಗಳು 30-50% ಕಡಿಮೆಯಾಗಬಹುದು ಮತ್ತು ಜನರಿಗೆ ಹೆಚ್ಚು ಸುರಕ್ಷತೆ ಕೂಡ ಸಿಗಲಿದೆ. ಸ್ಕ್ಯಾಮ್ ಕರೆಗಳ ಮೂಲಕ ಸಾಕಷ್ಟು ಜನರು ಈಗಾಗಲೇ ನಷ್ಟವನ್ನು ಅನುಭವಿಸಿದ್ದು ಈ ಯೋಜನೆ ಸ್ಕ್ಯಾಮ್ ಕರೆ ಸಂಖ್ಯೆಯನ್ನು ಕಡಿಮೆ ಮಾಡಲಿದೆ. ಹೊಸ ಫೋನ್‌ಗಳು ಮಾತ್ರ ಈ ಸೇವೆ ಲಭ್ಯವಿರುವುದರಿಂದ ಟೆಲಿಕಾಂ ಕಂಪನಿಗಳು ನೆಟ್‌ವರ್ಕ್ ಅಪ್‌ಗ್ರೇಡ್ ಮಾಡಬೇಕಾಗಿದೆ. CNAPಯಿಂದ ನಿಮ್ಮ ಹೆಸರು ಎಲ್ಲರಿಗೂ ಕಾಣಿಸುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

