CNG -PNG Price: ವಾಹನ ಮಾಲೀಕರಿಗೆ ಇನ್ನೊಂದು ಗುಡ್ ನ್ಯೂಸ್, CNG ಮತ್ತು PNG ಬೆಲೆಯಲ್ಲಿ ಭರ್ಜರಿ ಇಳಿಕೆ.

October 3 ರಿಂದಲೇ CNG ಹಾಗೂ PNG ಹೊಸ ದರಗಳು ಅನ್ವಯವಾಗಲಿದೆ.

CNG -PNG Price Down: ಸದ್ಯ ಮಾರುಕಟ್ಟೆಯಲ್ಲಿ Electric Car ಗಳು ಹೆಚ್ಚಿನ ಬೇಡಿಕೆ ಪಡೆಯುತ್ತಿದೆ ಎನ್ನಬಹುದು. ಗ್ರಾಹಕರ Petrol , Diesel ಖರ್ಚನ್ನು ಉಳಿಸಲು ವಿವಿಧ ಕಂಪನಿಗಳು Electric ಮಾದರಿಯಲ್ಲಿ ಕಾರ್ ಗಳನ್ನೂ ಪರಿಚಯಿಸುತ್ತಿವೆ. ಇನ್ನು Electric ಮಾದರಿಗಳು ಇಂಧನ ಖರ್ಚನ್ನು ಉಳಿಸುತ್ತದೆ ಆದರೆ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಮಾದರಿಗಳು ಸ್ವಲ್ಪ ದುಬಾರಿ ಎನ್ನಬಹುದು. ಮಧ್ಯಮ ವರ್ಗದವರಿಗೆ ಈ ದುಬಾರಿ ಎಲೆಕ್ಟ್ರಿಕ್ ಮಾದರಿ ಖರೀದಿ ಕಷ್ಟವಾಗುತ್ತದೆ.

CNG -PNG Price Down
Image Credit: Economictimes.indiatimes

ಮಾರುಕಟ್ಟೆಯಲ್ಲಿ ಹೆಚ್ಚುತ್ತಿದೆ CNG ಚಾಲಿತ ವಾಹನಗಳ ಬೇಡಿಕೆ
ಇನ್ನು Electric ಮಾದರಿಯ ಜೊತೆಗೆ ಮಾರುಕಟ್ಟೆಯಲ್ಲಿ CNG ಚಾಲಿತ ವಾಹನಗಳು ಲಭ್ಯವಿರುವ ಬಗ್ಗೆ ಗ್ರಾಹಕರಿಗೆ ಅರಿವಿದೆ. CNG ಚಾಲಿತ ವಾಹನಗಳು Electric ಮಾದರಿಗಳಿಗೆ ಹೋಲಿಸಿದರೆ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತದೆ. ಇನ್ನು CNG ಚಾಲಿತ ವಾಹನಗಳು ಗ್ರಾಹಕರಿಗೆ ಹೆಚ್ಚಿನ ಮೈಲೇಜ್ ಅನ್ನು ಕೂಡ ನೀಡುತ್ತದೆ.

ಸದ್ಯ ಮಾರುಕಟ್ಟೆಯಲ್ಲಿ Electric ವಾಹನಗಳ ಜೊತೆಗೆ CNG ಚಾಲಿತ ವಾಹನಗಳ ಮೇಲೆ ಕೂಡ ಕ್ರೇಜ್ ಹೆಚ್ಚುತ್ತಿದೆ. ಹೀಗಾಗಿ ವಿವಿಧ ಪ್ರತಿಷ್ಠಿತ ಕಂಪನಿಗಳು CNG ಚಾಲಿತ ವಾಹನವನ್ನು ಪರಿಚಯಿಸುತ್ತಿವೆ. ಸದ್ಯ ಮಾರುಕಟ್ಟೆಯ್ಲಲಿ CNG ಚಾಲಿತ ವಾಹನಗಳಿಗೆ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ CNG ಹಾಗು PNG ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿದೆ.

CNG -PNG Price update
Image Credit: Spinny

CNG ಮತ್ತು PNG ಬೆಲೆಯಲ್ಲಿ ಭರ್ಜರಿ ಇಳಿಕೆ
October ತಿಂಗಳ ಆರಂಭದಲ್ಲಿ ಬೆಲೆ ಏರಿಕೆಯ ಸುದ್ದಿಯನ್ನು ಕೇಳುತ್ತಿರುವ ಜನರಿಗೆ ಸದ್ಯ ಸಿಹಿ ಸುದ್ದಿಯೊಂದು ಹೊರಬಿದ್ದಿದೆ. ಈ ಬಾರಿ ಮಹಾನಗರ ಗ್ಯಾಸ್ ಲಿಮಿಟೆಡ್ MMR ಪ್ರದೇಶದಲ್ಲಿ CNG-PNG ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. October 3 ರಿಂದಲೇ CNG ಹಾಗೂ PNG ಹೊಸ ದರಗಳು ಅನ್ವಯವಾಗಲಿದೆ.

CNG -PNG ದರದಲ್ಲಿ ಎಷ್ಟು ಇಳಿಕೆಯಾಗಿದೆ..?
ಈ ಹಿಂದೆ MMR ಪ್ರದೇಶದಲ್ಲಿ CNG ಪ್ರತಿ ಕೆಜಿಗೆ ರೂ. 79, PNG ಪ್ರತಿ ಯೂನಿಟ್‌ಗೆ ರೂ. 49 ಕ್ಕೆ ಮಾರಾಟವಾಗುತ್ತಿತ್ತು, ಆದರೆ ಇಂದಿನಿಂದ CNG ಪ್ರತಿ ಕೆಜಿಗೆ ರೂ. 76 ಕ್ಕೆ ಮಾರಾಟವಾಗಲಿದ್ದು, PNG ಪ್ರತಿ ಯೂನಿಟ್‌ಗೆ ರೂ. 47 ಕ್ಕೆ ಮಾರಾಟವಾಗಲಿದೆ. CNG ಕೆಜಿಗೆ 3 ರೂಪಾಯಿ ಇಳಿಕೆಯಾಗಿದ್ದರೆ, PNG ಪ್ರತಿ ಯೂನಿಟ್‌ ಗೆ 2 ರೂಪಾಯಿ ಕಡಿಮೆಯಾಗಿದೆ.

Join Nadunudi News WhatsApp Group

Join Nadunudi News WhatsApp Group