Coin Deposit: ಬ್ಯಾಂಕಿನಲ್ಲಿ ಎಷ್ಟು ನಾಣ್ಯಗಳನ್ನ ಡೆಪಾಸಿಟ್ ಮಾಡಬಹುದು, RBI ನಿಯಮಗಳನ್ನ ತಿಳಿದುಕೊಳ್ಳಿ.

ನಾಣ್ಯಗಳನ್ನ ಬ್ಯಾಂಕಿನಲ್ಲಿ ಡೆಪಾಸಿಟ್ ಮಾಡುವ ಕುರಿತು RBI ನೀಡಿರುವ ಆದೇಶಗಳನ್ನ ತಿಳಿದುಕೊಳ್ಳಿ.

Reserve Bank Of India Coin Deposit Limit: ದೇಶದೆಲ್ಲೆಡೆ ಇದೀಗ 2,000 ರೂ. ಮುಖಬೆಲೆಯ ನೋಟ್ ರದ್ದತಿಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿದೆ. ಸರ್ಕಾರ ಸೆಪ್ಟೆಂಬರ್ 30 ರವರೆಗೆ ನೋಟು ವಿನಿಮಯ ಪ್ರಕ್ರಿಯೆಗೆ ಸಮಯಾವಕಾಶವನ್ನು ನೀಡಿದೆ. ಇನ್ನು 2,000 ನೋಟು ಬ್ಯಾನ್ ಆಗುತ್ತಿದ್ದಂತೆ ಹೊಸ ನೋಟ್ ಹಾಗೂ ನಾಣ್ಯಗಳ ಚಲಾವಣೆಯ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿವೆ.

ಇದೀಗ ಆರ್ ಬಿಐ (RBI) ನಾಣ್ಯಗಳ ಠೇವಣಿಯ ಕುರಿತು ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ. ಬ್ಯಾಂಕ್ ನಲ್ಲಿ ಎಷ್ಟು ಮೌಲ್ಯದ ನಾಣ್ಯಗಳನ್ನು ಠೇವಣಿ ಮಾಡಬಹುದು ಎನ್ನುವ ಬಗ್ಗೆ ಆರ್ ಬಿಐ ಮಾಹಿತಿ ನೀಡಿದೆ. ಈ ಕುರಿತು ವಿವರಗಳನ್ನು ತಿಳಿಯೋಣ.

How many coins can be deposited in the bank?
Image Credit: youtube

ಬ್ಯಾಂಕುಗಳಿಗೆ ನಾಣ್ಯ ಕೊಡುವವರಿಗೆ ಹೊಸ ನಿಯಮ ಹೊರಡಿಸಿದ RBI
ಇನ್ನು 2000 ನೋಟು ರದ್ದತಿಯ ಬಳಿಕ ಜನರು ತಮ್ಮ ಬಳಿ ಇರುವ 2000 ನೋಟುಗಳ ವಿನಿಮಯ ಪ್ರಕ್ರಿಯೆಯಲ್ಲಿ ಬ್ಯುಸಿ ಆಗಿದ್ದರೆ. ಇನ್ನು ದೇಶಿಯ ಮಾರುಕಟ್ಟೆಯಲ್ಲಿ ವಿವಿಧ ರೀತಿಯ ನಾಣ್ಯಗಳು ಚಲಾವಣೆಯಲ್ಲಿದೆ. ಆದರೆ ಚಲಾವಣೆಯಲ್ಲಿರುವ ನಾಣ್ಯಗಳ ರದ್ದಾಗುವ ಬಗ್ಗೆ ಕೂಡ ಸಾಕಷ್ಟು ಸುದ್ದಿಗಳು ಹರಡಿದ್ದವು.

ಇನ್ನು ಯಾವುದೇ ನಾಣ್ಯಗಳು ರದ್ದಾಗಿಲ್ಲ ಎಂದು ಆರ್ ಬಿಐ ಮಾಹಿತಿ ನೀಡಿದೆ.ಬ್ಯಾಂಕ್ ಗಳು ಎಲ್ಲಾ ರೀತಿಯ ನಾಣ್ಯಗಳಲ್ಲೂ ತೆಗೆದುಕೊಳ್ಳಬೇಕು ಎಂದು ಘೋಷಣೆ ಹೊರಡಿಸಿದೆ.

How many coins can be deposited in the bank?
Image Credit: rightsofemployees

ಬ್ಯಾಂಕ್ ನಲ್ಲಿ ಎಷ್ಟು ನಾಣ್ಯಗಳ ಠೇವಣಿ ಮಾಡಬಹುದು
ಪ್ರಸ್ತುತ 1, 2, 5, 10 ಮತ್ತು 20 ರೂ. ಮುಖಬೆಲೆಯ ನಾಣ್ಯಗಳು ಚಲಾವಣೆಯಲ್ಲಿವೆ. ಇದೀಗ ಆರ್ ಬಿಐ ಬ್ಯಾಂಕ್ ನಲ್ಲಿ ಎಷ್ಟು ನಾಣ್ಯಗಳನ್ನು ಠೇವಣಿ ಮಾಡಬಹುದು ಎನ್ನುವ ಬಗ್ಗೆ ಮಹಿತಿ ನೀಡಿದೆ. ಆರ್ ಬಿಐ ನೀಡಿರುವ ಮಾಹಿತಿಯ ಪ್ರಕಾರ ಬ್ಯಾಂಕ್ ನ ನಾಣ್ಯಗಳ ಠೇವಣಿಗೆ ಯಾವುದೇ ಮಿತಿ ಇರುವುದಿಲ್ಲ. ಬ್ಯಾಂಕ್ ನಲ್ಲಿ ಎಷ್ಟು ಮೌಲ್ಯದ ನಾಣ್ಯಗಳನ್ನು ಕೂಡ ಠೇವಣಿ ಮಾಡಬಹುದು.

Join Nadunudi News WhatsApp Group

Join Nadunudi News WhatsApp Group