Gas Price: ಸೆಪ್ಟೆಂಬರ್ ಆರಂಭದಲ್ಲೇ ಮತ್ತೆ ಇಳಿಕೆಯಾದ ಗ್ಯಾಸ್ ಸಿಲಿಂಡರ್ ಬೆಲೆ, ಕೇಂದ್ರದ ಮತ್ತೊಂದು ಘೋಷಣೆ.
ಹೊಸ ತಿಂಗಳ ಆರಂಭದಲ್ಲಿಯೇ ಜನರಿಗೆ ಗುಡ್ ನ್ಯೂಸ್ LPG ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ.
Commercial Gas Cylinder Price Down: ಪ್ರತಿ ತಿಂಗಳ ಆರಂಭದಲ್ಲಿ ಜನ ಸಾಮಾನ್ಯರು ನಿರೀಕ್ಷೆ ಗ್ಯಾಸ್ (Gas Cylinder) ಬೆಲೆಯ ಇಳಿಕೆಯ ಮೇಲಿರುತ್ತದೆ. ಪ್ರತಿ ತಿಂಗಳು ತೈಲ ಕಂಪನಿಗಳು ಗ್ಯಾಸ್ ಬೆಲೆಯನ್ನು ಪರಿಷ್ಕರಿಸುತ್ತವೆ. ಈ ಕಾರಣಕ್ಕೆ ತಿಂಗಳ ಪ್ರಾರಂಭದಲ್ಲಿ ಗ್ಯಾಸ್ ಬೆಲೆಯ ಇಳಿಕೆಯನ್ನು ಜನರು ನಿರೀಕ್ಷಿಸುತ್ತಾರೆ.
ಆದರೆ ಈವರೆಗೂ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲಾ. ಆಗಸ್ಟ್ ಮೊದಲ ವಾರದಲ್ಲಿ ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡುವುದಾಗಿ ಸುದ್ದಿಗಳು ಹರಿದಾಡಿದ್ದವು. ಆದರೆ ಗ್ಯಾಸ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಂಡು ಬಂದಿಲ್ಲ.
ಗ್ಯಾಸ್ ಬೆಲೆಯ ಇಳಿಕೆಯ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ
ಹೊಸ ಹಣಕಾಸು ವರ್ಷದ ಆರಂಭದಿಂದಲೂ ಜನರು ಹಣದುಬ್ಬರದ ಪರಿಸ್ಥಿಯನ್ನು ಎದುರಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಘೋಷಿಸಿತ್ತು. ಇದೀಗ ಗ್ಯಾಸ್ ಸಿಲಿಂಡರ್ ಸಬ್ಸಿಡಿ ಘೋಷಣೆ ಬೆನ್ನಲ್ಲೇ ಜನತೆಗೆ ಗ್ಯಾಸ್ ಬೆಲೆಯ ವಿಚಾರವಾಗಿ ಸರ್ಕಾರ ಖುಷಿ ನೀಡಿದೆ. ಸೆಪ್ಟೆಂಬರ್ 1 ರಿಂದ ಗ್ಯಾಸ್ ಬೆಲೆಯಲ್ಲಿ ಇಳಿಕೆ ಆಗಲಿದೆ.
ಹೊಸ ತಿಂಗಳ ಆರಂಭದಲ್ಲಿಯೇ ಜನರಿಗೆ ಗುಡ್ ನ್ಯೂಸ್
ಹೆಚ್ಚುತ್ತಿರುವ ಗ್ಯಾಸ್ ಬೆಲೆಗೆ ಬ್ರೇಕ್ ನೀಡಲು ಇದೀಗ ಸರ್ಕಾರ ಮುಂದಾಗಿದೆ. ಗ್ಯಾಸ್ ಬೆಲೆಯಲ್ಲಿ ಇಳಿಕೆ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇನ್ನು ಸರ್ಕಾರೀ ತೈಲ ಕಂಪನಿಗಳು ದೇಶದಾದ್ಯಂತ ಹೊಸ ಗ್ಯಾಸ್ ಬೆಲೆ ವ್ಯವಸ್ಥೆಯನ್ನು ಪರಿಚಯಿಸಲು ಹೊರಟಿದೆ. ಇದರಿಂದಾಗಿ ಜನಸಾಮಾನ್ಯರು ಗ್ಯಾಸ್ ಬೆಲೆಯ ಏರಿಕೆಯಿಂದ ಪರಿಹಾರವನ್ನು ಪಡೆಯಬಹುದು. ಗ್ಯಾಸ್ ಬೆಲೆಯ ಇಳಿಕೆಯು ಜನಸಾಮಾನ್ಯರಿಗೆ ಆರ್ಥಿಕ ಹೊರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಿದೆ.
LPG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಇಳಿಕೆ
ಇದೀಗ ಕೇಂದ್ರ ಸರ್ಕಾರ ಸೆಪ್ಟೆಂಬರ್ ಆರಂಭದಲ್ಲಿ ಗ್ಯಾಸ್ ಬೆಲೆಯ ಇಳಿಕೆಯ ಬಗ್ಗೆ ನಿರ್ಧಾರ ಕೈಗೊಂಡಿದೆ. ಸರಕಾರಿ ತೈಲ ಕಂಪನಿಗಳು ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದೆ. ತೈಲ ಮಾರುಕಟ್ಟೆಯಲ್ಲಿ ಕಂಪನಿಗಳು ವಾಣಿಜ್ಯ ಸಿಲಿಂಡರ್ ಗಳ ಬೆಲೆಯನ್ನು ಸೆಪ್ಟೆಂಬರ್ 1 ರಿಂದ ಇಳಿಕೆ ಮಾಡಿದೆ.
ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 157 ರೂ. ಇಳಿಕೆ
ಸೆಪ್ಟೆಂಬರ್ 1 ರಿಂದ ರಿಂದ 19 KG ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 157 ರೂ. ಇಳಿಸಲಾಗಿದೆ. ಈ ಮೊದಲು 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ನ ಬೆಲೆ 1679 ರೂ. ಆಗಿದ್ದು ಪ್ರಸ್ತುತ 1522 ರೂ. ಆಗಿದೆ. ಈ ಮೂಲಕ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 157ರೂ. ಇಳಿಸಲಾಗಿದೆ. ಇನ್ನು ಗೃಹಬಳಕೆಯ ಎಲ್ ಪಿಜಿ ಸಿಲಿಂಡರ್ ಗಳಲ್ಲಿ ಯಾವುದೇ ಇಳಿಕೆ ಆಗಿಲ್ಲ. ಗ್ರಾಹಕರು ಇದೀಗ 157 ರೂ. ಕಡಿತದೊಂದಿಗೆ ವಾಣಿಜ್ಯ ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದಾಗಿದೆ.