LPG Price Hike In India: ಹೊಸ ವರ್ಷ ಆರಂಭದಲ್ಲಿ ಹಣಕಾಸು ನಿಯಮಗಳು ಬದಲಾವಣೆ ಆಗುವುದು ಸರ್ವೇ ಸಾಮಾನ್ಯವಾಗಿದೆ. ಈ ಬದಲಾವಣೆ ಗಳು ಜನರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಈ ಬದಲಾದ ನಿಯಮಗಳಿಗೆ ಹೊಂದಿಕೊಂಡು ಹೋಗುವುದು ಅನಿವಾರ್ಯವಾಗಿದೆ. ಪ್ರತಿ ತಿಂಗಳು ಗ್ಯಾಸ್ ಬೆಲೆಯಲ್ಲಿ ಬದಲಾವಣೆ ಆಗುತ್ತದೆ. ಇದೀಗ ವರ್ಷದ ಮೊದಲ ದಿನವೇ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯೆಲ್ಲಿ ಭರ್ಜರಿ ಏರಿಕೆ ಆಗಿದೆ. ಇದೀಗ ನಾವು ಗ್ಯಾಸ್ ಬೆಲೆಯಲ್ಲಿ ಎಷ್ಟು ಏರಿಕೆ ಆಗಿದೆ ಅನ್ನುವ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನ ತಿಳಿದುಕೊಳ್ಳೋಣ.
ವರ್ಷದ ಮೊದಲ ದಿನವೇ ಗ್ಯಾಸ್ ಬೆಲೆಯಲ್ಲಿ ಭರ್ಜರಿ ಏರಿಕೆ
2026 ರ ಹೊಸ ವರ್ಷ ಆರಂಭವಾಗುತ್ತಿದಂತೆ ದೇಶಾದ್ಯಂತ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ, ಹಾಗೆ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು 19 KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 111 ರೂಪಾಯಿ ಏರಿಕೆ ಘೋಷಣೆ ಮಾಡಿವೆ. ಇದು ಹೋಟೆಲ್ ಮಾಲೀಕರು, ರೆಸ್ಟೋರೆಂಟ್ ಹಾಗೆ ಇನ್ನಿತರ ಸಣ್ಣ ಪುಟ್ಟ ವ್ಯಾಪಾರಸ್ಥರ ಮೇಲೆ ಹೆಚ್ಚುವರಿ ಪರಿಣಾಮ ಬೀರುತ್ತದೆ. ಈ ಏರಿಕೆ ಮಾಲೀಕರು ಗ್ರಾಹಕರ ಊಟದ ಬೆಲೆ ಮೇಲು ಹಾಕಬಹುದು.
- ಸದ್ಯ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ 1,691.50 ಆಗಿದೆ. ಈ ಹಿಂದೆ 1,580.50 ರೂಪಾಯಿಗೆ ಲಭ್ಯವಿತ್ತು.
- ಇನ್ನು ಚನೈ ನಲ್ಲಿ 1,849.50 ರೂ. ಆಗಿದೆ.
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್
ವರ್ಷದ ಮೊದಲ ದಿನವೇ 19 KG ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಭರ್ಜರಿ ಏರಿಕೆ ಆಗಿದೆ. ಆದರೆ ಮನೆಯಲ್ಲಿ ಬಳಸುವ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸದ್ಯ ಕಳೆದ ಕೆಲವು ತಿಂಗಳಿನಿಂದ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಸ್ಥಿರವಾಗಿದೆ.
- ಬೆಂಗಳೂರಿನಲ್ಲಿ 14.2 ಕೆಜಿ ಗೃಹ ಗ್ಯಾಸ್ ಸಿಲಿಂಡರ್ ಬೆಲೆ 855.50 ರೂ. ಆಗಿದೆ
- ದೆಹಲಿಯಲ್ಲಿ 14.2 ಕೆಜಿ ಗೃಹ ಗ್ಯಾಸ್ ಸಿಲಿಂಡರ್ ಬೆಲೆ 853 ರೂ. ಆಗಿದೆ
- ಮುಂಬೈನಲ್ಲಿ 14.2 ಕೆಜಿ ಗೃಹ ಗ್ಯಾಸ್ ಸಿಲಿಂಡರ್ ಬೆಲೆ 852.50 ರೂ. ಆಗಿದೆ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಸಬ್ಸಿಡಿ
ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹ ಬಡ ಕುಟುಂಬಗಳಿಗೆ ಗ್ಯಾಸ್ ಸಿಲಿಂಡರ್ ಗಳ ಮೇಲೆ ಸಬ್ಸಿಡಿಯನ್ನು ಒದಗಿಸುತ್ತದೆ. 2025-26 ನೇ ಹಣಕಾಸು ವರ್ಷಕ್ಕೆ 14.2 ಕೆಜಿ ಸಿಲಿಂಡರ್‌ಗೆ 300 ರೂ. ಸಬ್ಸಿಡಿ ನೀಡಲಾಗುತ್ತಿದೆ. ಸಬ್ಸಿಡಿ ಮೊತ್ತವನ್ನು ನೇರವಾಗಿ ಫಲಾನುಭವಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ.
Disclaimer: This information is provided for awareness purposes only. For personalised legal advice, consult a qualified professional and refer to official government notifications.

