Gruha Lakshmi: ಗೃಹ ಲಕ್ಷ್ಮಿ ಹಣ ಖಾತೆಗೆ ಜಮಾ ಆಗಿಲ್ವಾ…? ಈ ಕೆಲಸ ಮಾಡಿದರೆ ಜಮಾ ಆಗಲಿದೆ ಒಟ್ಟು 4000 ರೂಪಾಯಿ.
ಈ ಸಣ್ಣ ತಪ್ಪನ್ನು ಸರಿಪಡಿಸಿಕೊಂಡರೆ ಖಾತೆಗೆ ಜಮಾ ಆಗಲಿದೆ ಗೃಹ ಲಕ್ಷ್ಮಿ 4000 ರೂಪಾಯಿ.
Gruha Lakshmi Scheme Update: ರಾಜ್ಯದಲ್ಲಿ Gruha Lakshmi ಯೋಜನೆ ಅನುಷ್ಠಾನಗೊಂಡಿದ್ದರು ಈ ಯೋಜನೆಯ ಬಗ್ಗೆ ಇನ್ನು ಕೂಡ ಗೊಂದಲಗಳು ಕಡಿಮೆ ಆಗಿಲ್ಲ. ರಾಜ್ಯ ಸರ್ಕಾರಕ್ಕೆ ಗೃಹ ಲಕ್ಷ್ಮಿ ಯೋಜನೆ ಇನ್ನು ಕೂಡ ತಲೆನೋವಾಗಿ ಉಳಿದಿದೆ. ಅರ್ಹರ ಖಾತೆಗೆ ಹಣ ಜಮಾ ಮಾಡಲು ಈಗಾಗಲೇ ಸಾಕಷ್ಟು ಬಾರಿ ಚರ್ಚೆ ನಡೆಸಲಾಗಿದೆ.
ಸದ್ಯ ಗೃಹ ಲಕ್ಷ್ಮಿ ಯೋಜನೆಯಡಿ ಇಲ್ಲಿಯವರೆಗೆ 1.10 ಕೋಟಿ ಅರ್ಹ ಮಹಿಳೆಯರು ಯೋಜನೆಗೆ ಅರ್ಜಿ ಸಲ್ಲಿಸಿದ್ದು ಅದರಲ್ಲಿ ಕೇವಲ 82 ಲಕ್ಷ ಮಂದಿಗೆ ಹಣ ಜಮಾ ಆಗಿದೆ.ಇನ್ನುಳಿದ 28 ಲಕ್ಷ ಮಂದಿಗೆ ಇನ್ನು ಕೂಡ ಹಣ ಖಾತೆಗೆ ಜಮಾ ಆಗಿಲ್ಲ.
ಇನ್ನು ಕೂಡ ಶೇ. 30 ರಷ್ಟು ಅರ್ಹರಿಗೆ ಹಣ ಜಮಾ ಆಗಬೇಕಿದೆ. August ಹಾಗೂ Septembar ತಿಂಗಳಿನಲ್ಲಿ ಜಮಾ ಆಗಬೇಕಿದ್ದ 2000 ರೂಪಾಯಿ ಹಣಕ್ಕಾಗಿ ಅರ್ಹ ಮಹಿಳೆಯರು ಚಿಂತಿಸುವಂತಾಗಿದೆ. ಇದೀಗ ಗೃಹ ಲಕ್ಷ್ಮಿ ಹಣ ಜಮಾ ಆಗುವ ಬಗ್ಗೆ ಮಹತ್ವದ ಮಾಹಿತಿಯೊಂದು ಹೊರಬಿದಿದ್ದಿದೆ. ನೀವು ಈ ಸಣ್ಣ ತಪ್ಪನ್ನು ಸರಿಪಡಿಸಿಕೊಂಡರೆ ಎರಡು ತಿಂಗಳ ಹಣ ನಿಮ್ಮ ಖಾತೆಗೆ ಜಮಾ ಆಗಲಿದೆ.
ಈ ಕೆಲಸ ಮಾಡಿದರೆ ಖಾತೆಗೆ ಜಮಾ ಆಗಲಿದೆ 4000 ರೂಪಾಯಿ ಹಣ
*Aadhaar Link To Bank Account
ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ 2000 ರೂಪಾಯಿ ಹಣ ಜಮಾ ಆಗದಿರಲು ಮುಖ್ಯ ಕಾರಣ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಆಗದೆ ಇರುವುದು. ಹೀಗಾಗಿ ಇಂದೇ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಅನ್ನು ಲಿಂಕ್ ಮಾಡಿಸಿಕೊಳ್ಳುವುದು ಉತ್ತಮ.
*Name Miss Match
ಇನ್ನು ನಿಮ್ಮ ಆಧಾರ್, ರೇಷನ್ ಕಾರ್ಡ್, ಪಾಸ್ ಬುಕ್ ನಲ್ಲಿ ಒಂದೇ ರೀತಿ ಹೆಸರು ಇಲ್ಲದೆ, ಬೇರೆ ಹೆಸರು ನೋಂದಣಿಯಾಗಿದ್ದರೆ ನಿಮ್ಮ ಖಾತೆಗೆ ಹಣ ಜಮಾ ಆಗುವುದಿಲ್ಲ. ಹೀಗಾಗಿ ನಿಮ್ಮ ಎಲ್ಲ ದಾಖಲೆಯಲ್ಲಿ ಕೂಡ ಒಂದೇ ರೀತಿಯ ಹೆಸರು ಬರುವಂತೆ ಇಂದೇ ಸರಿಪಡಿಸಿಕೊಳ್ಳಿ.
*Ration Card Link To Bank Account
ಅರ್ಹ ಮಹಿಳೆಯರ ಖಾತೆಗೆ ಗೃಹ ಲಕ್ಷ್ಮಿ 2000 ರೂಪಾಯಿ ಹಣ ಜಮಾ ಆಗದಿರಲು ಇನ್ನೊಂದು ಕಾರಣ ಎಂದರೆ ನಿಮ್ಮ ಬ್ಯಾಂಕ್ ಖಾತೆಗೆ Ration Card ಲಿಂಕ್ ಆಗದೆ ಇರುವುದು. ಹೀಗಾಗಿ ಇಂದೇ ನಿಮ್ಮ ಬ್ಯಾಂಕ್ ಖಾತೆಗೆ eKYC ಮಾಡಿಸಿಕೊಳ್ಳುವುದು ಉತ್ತಮ.