Congress Guarantee Card: ಮತ್ತೆ 5 ಗ್ಯಾರೆಂಟಿಗಳನ್ನು ಘೋಷಿಸಿದ ಕಾಂಗ್ರೆಸ್, ಎಲ್ಲವೂ ಫ್ರೀ.
ಕಾಂಗ್ರೆಸ್ ಸರ್ಕಾರ ಮಧ್ಯ ಪ್ರದೇಶದಲ್ಲಿ ಮತ್ತೆ 5 ಭರವಸೆಯ ಗ್ಯಾರೆಂಟಿಗಳನ್ನ ಘೋಷಣೆ ಮಾಡಿದೆ.
Madhya Pradesh Assembly Election 2023 : ಈಗಾಗಲೇ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಜನರಿಗೆ ಎಲೆಕ್ಷನ್ ಗು ಮುನ್ನವೇ ಐದು ಗ್ಯಾರೆಂಟಿಗಳನ್ನು ನೀಡುವ ಭರವಸೆ ಕೊಟ್ಟಿತ್ತು. ಅದರಂತೆಯೇ ಎಲೆಕ್ಷನ್ ಮುಗಿದ ಬಳಿಕ ಇದೀಗ ಕೊಟ್ಟ ಮಾತಿನಂತೆ ಸಿದ್ದು ಸರ್ಕಾರ ಉಚಿತ ಭರವಸೆಗಳನ್ನು ಖಂಡಿತವಾಗಿ ಈಡೇರಿಸುತ್ತೇನೆ ಎಂದು ಭರವಸೆ ಕೊಟ್ಟಿದ್ದಾರೆ.
ಕಾಂಗ್ರೆಸ್ ಗೆ ಪ್ಲಸ್ ಆಯ್ತು ಉಚಿತ ಭರವಸೆಗಳು
ಕಾಂಗ್ರೆಸ್ ನ ಉಚಿತ ಭರವಸೆಗಳ ಬಗ್ಗೆ ಇದೀಗ ಹಲವು ಟೀಕೆಗಳು ಇದ್ದರೂ ಕೂಡ ಈ ಭರವಸೆಗಳೇ ಕಾಂಗ್ರೆಸ್ ಗೆ ಕರ್ನಾಟಕದಲ್ಲಿ ಬಹುಮತದ ಸರ್ಕಾರ ರಚನೆ ಮಾಡಲು ಕಾರಣವಾಗಿದೆ. ಹೀಗಾಗಿ ಇದೀಗ ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದ ವಿಧಾನಸಭಾ ಚುನಾವಣೆ ಮೇಲೂ ಕೂಡ ಇದೆ ರೀತಿಯ ಗ್ಯಾರೆಂಟಿ ಘೋಷಣೆ ಮಾಡಿದೆ.
ಮಧ್ಯಪ್ರದೇಶ ಚುನಾವಣೆ ಕಾಂಗ್ರೆಸ್ ಉಚಿತ ಗ್ಯಾರೆಂಟಿ ಹೀಗಿದೆ.
1. ಎಲ್ಲರಿಗು 500 ರೂ ದರದಲ್ಲಿ ಗ್ಯಾಸ್ ಸಿಲಿಂಡರ್
2. ಮನೆಯೊಡತಿಗೆ ತಿಂಗಳಿಗೆ 1500 ರೂ ಹಣ
3. 100 ಯೂನಿಟ್ ವಿದ್ಯುತ್ ಫ್ರೀ, 200 ಯೂನಿಟ್ ಬಳಕೆಗೆ ಅರ್ಧ ಹಣ ಕಟ್ಟಿದರೆ ಸಾಕು
4. ಎಲ್ಲಾ ರೈತರ ಸಾಲಗಳು ಸಂಪೂರ್ಣ ಮನ್ನಾ
5. ಹಳೆಯ ಪಿಂಚಣಿ ವ್ಯವಸ್ಥೆ ಮತ್ತೆ ಜಾರಿಗೆ
ಮಧ್ಯಪ್ರದೇಶಕ್ಕೆ ಕಮಲ್ ನಾಥ್ ಸಾರಥ್ಯದಲ್ಲಿ ಕಾಂಗ್ರೆಸ್ ಪ್ರಚಾರ ಆರಂಭ
ಈಗಾಗಲೇ ಕಾಂಗ್ರೆಸ್ ಸರ್ಕಾರ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ಸಿಎಂ ಅಭ್ಯರ್ಥಿ ಎಂದು ಘೋಷಿಸಿ ಚುನಾವಣಾ ಪ್ರಚಾರ ಆರಂಭಿಸಿದೆ. ಬಹುತೇಕ ಕ್ಲರ್ನಾಟಕ ಮಾದರಿಯಲ್ಲೇ ಉಚಿತ ಗ್ಯಾರೆಂಟಿಗಳನ್ನು ಕೊಡುವ ಮೂಲಕ ಮಧ್ಯಪ್ರದೇಶದಲ್ಲಿಯೂ ಕೂಡ ಕಾಂಗ್ರೆಸ್ ಸರ್ಕಾರ ಜಯಭೇರಿ ಬಾರಿಸಲು ಹೊರಟಿದೆ.
ಕಾಂಗ್ರೆಸ್ ಪ್ರಣಾಳಿಕೆಗೆ ಹಲವರ ಆಕ್ರೋಶ.
ತೆರಿಗೆ ಹಣದಲ್ಲಿ ಎಲ್ಲವನ್ನು ಫ್ರೀ ಮಾಡುತ್ತಿರುವ ಕಾಂಗ್ರೆಸ್ ದೇಶವನ್ನು ಮುಳುಗಿಸಲು ಹೊರಟಿದೆ ಎಂದು ಅನೇಕ ಮಂದಿ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಇದೆ ರೀತಿ ಕಾಂಗ್ರೆಸ್ ಸರ್ಕಾರ ಉಚಿತ ಯೋಜನೆಗಳನ್ನು ನೀಡಿದರೆ ಭಾರತ ಮುಂದೊಂದು ದಿನ ದಿವಾಳಿಯಾಗುತ್ತೆ ಎಂದು ಅನೇಕ ಆರ್ಥಿಕ ತಜ್ಞರು ಕೂಡ ಅಭಿಪ್ರಾಯ ಪಟ್ಟಿದ್ದಾರೆ ಎನ್ನಲಾಗಿದೆ.
मध्य प्रदेश की जनता से कांग्रेस का वादा
????गैस सिलेंडर: 500 रुपए
????हर महिला को 1,500 रुपए प्रति महीना
????बिजली: 100 यूनिट माफ, 200 यूनिट हाफ
????किसानों का कर्ज माफ
????पुरानी पेंशन योजना लागू होगीकर्नाटक में हमने वादा निभाया-अब MP में निभाएंगे
जय जनता-जय कांग्रेस ✋️
— Congress (@INCIndia) May 22, 2023