Congress Guarantee: ಉಚಿತ ಭರವಸೆಗಳು ಜಾರಿಗೆ ಬರುತ್ತಾ ಅಥವಾ ಇಲ್ಲವಾ, ಆರ್ಥಿಕ ತಜ್ಞರು ಹೇಳುವುದೇನು ನೋಡಿ.
ಕಾಂಗ್ರೆಸ್ ನ ಗ್ಯಾರೆಂಟಿಗಳ ಜಾರಿಗೆ ತರುವುದರ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನ ಹೊರಹಾಕಿದ್ದಾರೆ.
Congress Promises Emplementation: ಈ ಬಾರಿ ರಾಜ್ಯದಲ್ಲಿ ಹೊಸ ಸರ್ಕಾರ ರಚನೆಯಾಗಿದೆ. ಬರೋಬ್ಬರಿ 135 ಸ್ಥಾನಗಳನ್ನು ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ (Congress) ಸರ್ಕಾರ ಅಧಿಕಾರವನ್ನು ಪಡೆದಿದೆ. ಪ್ರಚಾರ ವೇಳೆ ಕಾಂಗ್ರೆಸ್ ಸರ್ಕಾರ ಜನತೆಗೆ ಐದು ಭರವಸೆಗಳನ್ನು ನೀಡಿತ್ತು. ಕಾಂಗ್ರೆಸ್ ಪಕ್ಷ ನೀಡಿದ ಭರವಸೆಗಳನ್ನು ಈಡೇರಿಸುತ್ತದೆ ಎನ್ನುವ ಕಾರಣ ಜನತೆ ಕೈ ಗೆ ಬೆಂಬಲವನ್ನು ನೀಡಿದರು.
ಇದೀಗ ಹೊಸ ಸರ್ಕಾರದ ಭರವಸೆಗಳ ಲಭ್ಯತೆಯ ಬಗ್ಗೆ ಕರ್ನಾಟಕದ ಜನತೆ ಕುತೂಹಲರಾಗಿದ್ದಾರೆ. ಈಗಾಗಲೇ ಕಾಂಗ್ರೆಸ್ ನ ಭರವಸೆಗಳ ಈಡೇರಿಕೆಯ ಬಗ್ಗೆ ಸಾಕಷ್ಟು ಅಪ್ಡೇಟ್ ಗಳು ಹೊರಬಿದ್ದಿವೆ. ಐದು ಯೋಜನೆಗಳ ಅನುಷ್ಠಾನಕ್ಕೆ ವಾರ್ಷಿಕವಾಗಿ 50,000 ಕೋಟಿ ರೂ. ಖರ್ಚಾಗುವ ಬಗ್ಗೆ ಈಗಾಗಲೇ ಮಾಹಿತಿ ಹೊರಬಿದ್ದಿದೆ.
ಐದು ಭರವಸೆಗಳ ಬಗ್ಗೆ ಹೊಸ ಅಪ್ಡೇಟ್
ಇನ್ನು ಕಾಂಗ್ರೆಸ್ ಸರ್ಕಾರದ ಐದು ಯೋಜನೆಗಳ ಫಲಾನುಭವಿಗಳು ಯಾರೆನ್ನುವ ಬಗ್ಗೆ ಇನ್ನು ಸ್ಪಷ್ಟನೆ ಸಿಕ್ಕಿಲ್ಲ. ಇತ್ತೀಚೆಗಷ್ಟೇ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆದಷ್ಟು ಬೇಗ ಭರವಸೆಗಳನ್ನು ಈಡೇರಿಸುವುದಾಗಿ ಹೇಳಿಕೆ ನೀಡಿದ್ದಾರೆ.
ಇನ್ನು ಇದೀಗ ಉಚಿತ ಭರವಸೆಗಳು ಜಾರಿಗೆ ಬರುತ್ತಾ ಅಥವಾ ಇಲ್ಲವಾ ಎನ್ನುವ ಬಗ್ಗೆ ಆರ್ಥಿಕ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಉಚಿತ ಭರವಸೆ ನೀಡುವ ಬಗ್ಗೆ ತಜ್ಞರ ಅಭಿಪ್ರಾಯ
ಪ್ರತಿ ಮನೆಯ ಒಡತಿಗೆ ಮಾಸಿಕ 2000 ವೇತನ, ಮಹಿಳೆಯರಿಗೆ ಉಚಿತ ಬಸ್ ಪಾಸ್, ನಿರುದ್ಯೋಗಿ ಪದವೀಧರರಿಗೆ ಮಾಸಿಕ 3000 ರೂ. ವೇತನ, ವರ್ಷಕ್ಕೆ ಐದು ಗ್ಯಾಸ್ ಸಿಲಿಂಡರ್ ಹಾಗೆಯೆ ಮನೆಗೆ 200 ಯುನಿಟ್ ವಿದ್ಯುತ್ ಉಚಿತ ಎನ್ನುವ ಘೋಷಣೆಯನ್ನು ಕಾಂಗ್ರೆಸ್ ಸರ್ಕಾರ ಹೊರಡಿಸಿತ್ತು. ಇದೀಗ ಉಚಿತ ಭರವಸೆಗಳ ಅನುಷ್ಠಾನದ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
‘ಅಂತಿಮವಾಗಿ ಈ ಉಚಿತ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ತೆರಿಗೆದಾರರ ಹಣವನ್ನೇ ಬಳಸಲಾಗುತ್ತದೆ. ಸ್ವಲ್ಪಸಮಯದ ನಂತರ ವಸ್ತುಗಳ ಮೇಲಿನ ರಾಜ್ಯದ ತೆರಿಗೆಗಳು ಹೆಚ್ಚಾದರೆ ಮತ್ತು ಬಜೆಟ್ ನಲ್ಲಿನ ಕೊರತೆಯು ಹೆಚ್ಚಾದರೆ ಆಶ್ಚರ್ಯವೇನಿಲ್ಲ.
ಎಲ್ಲಾ ಮಹಿಳೆಯರಿಗೂ ರೂ. 2000 ಮತ್ತು 200 ಯುನಿಟ್ ಉಚಿತ ವಿದ್ಯುತ್ ನೀಡುವ ಅಗತ್ಯವಿಲ್ಲ. ಆರ್ಥಿಕವಾಗಿ ದುರ್ಭಲರಾಗಿರುವ ಮತ್ತು ಯುವಕರಿಗೆ ಸಹಾಯ ಮಾಡುವ ಅಗತ್ಯವಿದ್ದರೂ ಉದ್ಯೋಗ ದೊರಕಿಸಿಕೊಡಲು ಮತ್ತು ದಿನದಲಿತರನ್ನು ಸಬಲೀಕರಣಗೊಳಿಸಲು ಸರ್ಕಾರವು ಸಮಾನಾಂತರವಾಗಿ ಎಲ್ಲಾ ಪ್ರಯತ್ನಗಳನ್ನು ಮಾಡಬೇಕು’ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.