Congress: 500 ರೂಪಾಯಿಗೆ ಗ್ಯಾಸ್ ಸಿಲಿಂಡರ್ ಮತ್ತು ಪ್ರತಿ ಮಹಿಳೆಗೆ 1500 ರೂ, ಕಾಂಗ್ರೆಸ್ ಬಂಪರ್ ಗ್ಯಾರಂಟೀ.
ಮದ್ಯ ಪ್ರದೇಶದಲ್ಲಿ ಕಾಂಗ್ರೆಸ್ 500 ರೂಪಾಯಿಯಲ್ಲಿ ಗ್ಯಾಸ್ ಸಿಲಿಂಡರ್ ಮತ್ತು ಮಹಿಳೆಯರಿಗೆ ಪ್ರತಿ ತಿಂಗಳು 1500 ರೂಪಾಯಿ ನೀಡುವುದಾಗಿ ಘೋಷಣೆಯನ್ನ ಮಾಡಿದೆ.
Congress Guarantee In Madhya Pradesh: ಈಗಾಗಲೇ ವಿಧಾನಸಭಾ ಚುನಾವಣೆ (Assembly Election) ಮುಗಿದಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನತೆಗೆ ಐದು ಗ್ಯಾರೆಂಟಿಗಳನ್ನು ಘೋಷಿಸಿದೆ. ಇದೀಗ ಕಾಂಗ್ರೆಸ್ ಕರ್ನಾಟಕದಲ್ಲಿ 135 ಕ್ಷೇತ್ರದಲ್ಲಿ ಗೆದ್ದು ಸರ್ಕಾರವನ್ನು ತನ್ನದಾಗಿಸಿಕೊಂಡು ಈಗಾಗಲೇ ಸರ್ಕಾರ ರಚನೆಯನ್ನು ಸಹ ಮಾಡಿದೆ.
ಜನತೆಗೆ ಐದು ಭರವಸೆಗಳನ್ನು ನೀಡಿದ ಮಧ್ಯಪ್ರದೇಶ ಕಾಂಗ್ರೆಸ್ ಸರ್ಕಾರ
ಕಾಂಗ್ರೆಸ್ ತನ್ನ ಮೊದಲ ಕ್ಯಾಬಿನೆಟ್ ನಲ್ಲಿಯೇ ಐದು ಗ್ಯಾರೆಂಟಿಗಳನ್ನು ಜಾರಿಗೆ ತರಲು ತೀರ್ಮಾನಿಸಿದೆ. ಇದರ ಬೆನ್ನಲ್ಲಿಯೇ ಮಧ್ಯಪ್ರದೇಶದಲ್ಲಿ ಮತ್ತೊಂದು ನಿರ್ಣಾಯಕ ವಿಧಾನಸಭಾ ಚುನಾವಣೆಯತ್ತ ಮುಖಮಾಡಿದ್ದು ಸೋಮವಾರ ಐದು ಭರವಸೆಗಳನ್ನು ಘೋಷಿಸಿದೆ. ಒಂದು ಗ್ಯಾಸ್ ಸಿಲಿಂಡರ್ ಬೆಲೆ 500 ರೂಪಾಯಿ ಮತ್ತು ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ತಿಂಗಳಿಗೆ 1500 ಸೇರಿದಂತೆ ಐದು ಭರವಸೆಗಳನ್ನು ನೀಡಿದೆ.
ಮಧ್ಯಪ್ರದೇಶ ಜಾರಿಗೆ ತಂದ ಐದು ಗ್ಯಾರೆಂಟಿಗಳು
1. ಗ್ಯಾಸ್ ಸಿಲಿಂಡರ್ ಬೆಲೆ 500 ರೂಪಾಯಿ.
2. ಪ್ರತಿ ಮಹಿಳೆಗೆ ತಿಂಗಳಿಗೆ 1500 ರೂಪಾಯಿ.
3.100 ಯೂನಿಟ್ ಉಚಿತ ವಿದ್ಯುತ್, 200 ಯುನಿಟ್ ಗೆ ಅರ್ಧ ಹಣ.
4. ಕೃಷಿ ಸಾಲ ಮನ್ನಾ.
5. ಹಳೆಯ ಪಿಂಚಣಿ ಯೋಜನೆ ಜಾರಿ.
ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿಯುವ ಕಾಂಗ್ರೆಸ್ ಸರ್ಕಾರ
ಮೊನ್ನೆ ಅಷ್ಟೇ ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ರಚನೆ ಆಗಿದೆ. ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಕರ್ನಾಟಕದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇನ್ನು ಡಿಕೆ ಶಿವಕುಮಾರ್ ಉಪಮುಖ್ಯಮಂತ್ರಿಯಾಗಿದ್ದಾರೆ.
ರಾಜ್ಯದಲ್ಲಿ ಇನ್ನು ಮುಂದೆ ಕಾಂಗ್ರೆಸ್ ಸರ್ಕಾರದ ಅಧಿಕಾರ ನಡೆಯಲಿದೆ. ಚುನಾವಣೆಯ ಪ್ರಚಾರದಲ್ಲಿ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳ ಘೋಷಣೆಯನ್ನು ಮಾಡಿತ್ತು. ಇದೀಗ ಜನರು ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಗ್ಯಾರೆಂಟಿಗಳ ಬಗ್ಗೆ ಭರವಸೆ ಇಟ್ಟುಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಸರ್ಕಾರ ಒಂದೊಂದೇ ಗ್ಯಾರೆಂಟಿಗಳನ್ನು ಜಾರಿಗೆ ತರುತ್ತಿದೆ.