Oil Price Fall: ಅಡುಗೆಗೆ ಎಣ್ಣೆ ಬಳಸುವವರಿಗೆ ಸಿಹಿಸುದ್ದಿ, ಅಡುಗೆ ಎಣ್ಣೆ ಬೆಲೆಯಲ್ಲಿ ಭರ್ಜರಿ ಇಳಿಕೆ.
ಅಡುಗೆ ಎಣ್ಣೆಯ ಬೆಲೆಯನ್ನು ಕೇಂದ್ರ ಸರ್ಕಾರ ಈಗ ಇಳಿಕೆ ಮಾಡಿದೆ ಮತ್ತು ಅಡುಗೆ ಎಣ್ಣೆ ಬೆಲೆ ಇಳಿಕೆ ಜನರಿಗೆ ಸಿಹಿ ಸುದ್ದಿಯನ್ನ ನೀಡಿದೆ.
Cooking Oil Price Down: ಇದೀಗ ಜನಸಾಮಾನ್ಯರಿಗೆ ಸಿಹಿ ಸುದ್ದಿ ಒಂದು ಹೊರ ಬಿದ್ದಿದೆ. ಸತತ ಬೆಲೆ ಏರಿಕೆಯಿಂದಾಗಿ ಕಂಗಾಲಾಗಿದ್ದ ಗ್ರಾಹಕರಿಗೆ ಬೆಲೆ ಇಳಿಕೆಯಿಂದಾಗಿ ಸಮಾಧಾನ ಆಗಿದೆ. ಅಡುಗೆ ಎಣ್ಣೆ (Cooking Oil) ಬೆಲೆಯಲ್ಲಿ ಇಳಿಕೆ ಕಂಡಿರುವುದರಿಂದ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಜಾಗತಿಕ ಮಾರುಕಟ್ಟೆಯಲ್ಲಿ ಅಡುಗೆ ಎಣ್ಣೆ ಬೆಲೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಇದರಿಂದಾಗಿ ದೇಶಕ್ಕೆ ಆಮದು ಕೂಡ ಭಾರಿ ಪ್ರಮಾಣದಲ್ಲಿ ಹೆಚ್ಚಿದೆ. ಹಾಗಾಗಿ ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.
ಅಡುಗೆ ಎಣ್ಣೆಯ ಬೆಲೆ ಇಳಿಕೆ
ಮಾಹಿತಿಯ ಪ್ರಕಾರ ನವೆಂಬರ್, ಮಾರ್ಚ್ ಅವಧಿಯಲ್ಲಿ ಅಡುಗೆ ಎಣ್ಣೆ ಆಮದು ವರ್ಷದಿಂದ ವರ್ಷಕ್ಕೆ 23.7% ರಷ್ಟು ಹೆಚ್ಚಾಗಿದೆ. 6.98 ಮಿಲಿಯನ್ ಟನ್ ದಾಖಲಾಗಿದೆ. ಪಾಮ್ ಆಯಿಲ್ ಬೆಲೆಗಳು ಏಪ್ರಿಲ್ ನಲ್ಲಿ ವರ್ಷದಿಂದ ವರ್ಷಕ್ಕೆ ಶೇಕಡಾ 42 ರಷ್ಟು ಇಳಿಕೆಯಾಗಿದೆ .
ಪ್ರತಿ ಟನ್ ಗೆ 1791 ಡಾಲರ್ ಗಳಿಂದ 1030 ಡಾಲರ್ ಗೆ ಇಳಿದಿದೆ. ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆಯ ಬೆಲೆಗಳು ಕ್ರಮವಾಗಿ 45% ಮತ್ತು 53% ರಷ್ಟು ಕಡಿಮೆಯಾಗಿದೆ. ಇವುಗಳು ಪ್ರತಿ ಟನ್ ಗೆ ಕ್ರಮವಾಗಿ 1040 ಡಾಲರ್ ಮತ್ತು 1010 ಡಾಲರ್ ಗಳಿಗೆ ಇಳಿದಿವೆ.
ಜನಸಾಮಾನ್ಯರಿಗೆ ಸಿಹಿ ಸುದ್ದಿ
ಎಣ್ಣೆ ದರದಲ್ಲಿ ಸಾಸಿವೆ ಎಣ್ಣೆ ದರ ಈಗ 5 ಸಾವಿರದಿಂದ 5,100 ರೂಪಾಯಿಗೆ ಹೆಚ್ಚಿದೆ. ಇದರ ಬೆಲೆ 5,450 ರೂಪಾಯಿಗಿಂತ ಕಡಿಮೆಯಾಗಿದೆ. ಕಡಲೆ ಎಣ್ಣೆಯ ಬೆಲೆ ಕ್ವಿಂಟಲ್ ಗೆ 6,805 ರಿಂದ 6,865 ರೂಪಾಯಿಗೆ ಹೆಚ್ಚಾಗಿದೆ.
ಸದ್ಯ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲಗಳ ಬೆಲೆ ಇಳಿಕೆ ಆಗಿರುವ ಕಾರಣ ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಜನರು ಅಡುಗೆಗೆ ಬಳಸುವ ಎಣ್ಣೆಗಳ ಬೆಲೆಯಲ್ಲಿ ಇಳಿಕೆ ಆಗಲಿದೆ ಎಂದು ತಿಳಿದುಬಂದಿದೆ.
ಪ್ರತಿ ಟನ್ ಕಡಲೆ ಸಂಸ್ಕರಿಸಿದ ತೈಲ ಬೆಲೆ 2,540 ರಿಂದ 2,805 ರೂಪಾಯಿ ಆಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಬೆಲೆ ಇಳಿಕೆ ಆಗಿರುವುದರಿಂದ ದೇಶಿಯ ಮಾರುಕಟ್ಟೆಯಲ್ಲೂ ಬೆಲೆ ಇಳಿಕೆಯಾಗುತ್ತದೆ ಎಂಬ ನಿರೀಕ್ಷೆ ಇದೆ. ಇದರಿಂದ ಜನಸಾಮಾನ್ಯರಿಗೆ ನೆಮ್ಮದಿ ಸಿಗಲಿದೆ.