ಯಾವುದೇ ಒಂದು ಆಹಾರವನ್ನ ಸಿದ್ಧಪಡಿಸಬೇಕು ಅಂದರೆ ಅದಕ್ಕೆ ಅಡುಗೆ ಎಣ್ಣೆ ಬಹಳ ಮುಖ್ಯ ಎಂದು ಹೇಳಬಹುದು. ದೇಶದಲ್ಲಿ ಹಲವು ವಿಧದ ಅಡುಗೆ ಎಣ್ಣೆಗಳು ಲಭ್ಯವಿದ್ದು ಜನರು ತಮಗೆ ಇಷ್ಟವಾದ ಎಣ್ಣೆಯ ಬಳಕೆ ಮಾಡುತ್ತಾರೆ ಎಂದು ಹೇಳಬಹುದು. ದೇಶದಲ್ಲಿ ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಜೊತೆಗೆ ಅಡುಗೆ ಎಣ್ಣೆಯ ಬೆಲೆ ಕೂಡ ಭಾರಿ ಪ್ರಮಾಣದಲ್ಲಿ ಏರಿಕೆ ಆಗಿರುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದೆ ಎಂದು ಹೇಳಬಹುದು. ಹೌದು ಕಳೆದ ಕೆಲವು ದಿನಗಳ ದಿಂದ ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದು ಜನರು ಕೇಂದ್ರ ಸರ್ಕಾರಕ್ಕೆ ಶಾಪವನ್ನ ಹಾಕಿದ್ದರು ಎಂದು ಹೇಳಬಹುದು. ಇನ್ನು ಈಗ ಮತ್ತೆ ಜನರಿಗೆ ಸಿಹಿಸಿದ್ದು ಬಂದಿದ್ದು ಅಡುಗೆ ಎಣ್ಣೆಯ ಬೆಲೆಯಲ್ಲಿ ಭಾರಿ ಪ್ರಮಾಣದ ಇಳಿಕೆಯನ್ನ ಮಾಡಲಾಗಿದೆ.
ಹಾಗಾದರೆ ಅಡುಗೆ ಎಣ್ಣೆಯ ಬೆಲೆಯಲ್ಲಿ ಎಷ್ಟು ಇಳಿಕೆ ಆಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಅಡುಗೆ ಎಣ್ಣೆಯ ಬೆಲೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ. ಹೌದು ಕಚ್ಚಾ ಮತ್ತು ಸಂಸ್ಕರಿಸಿದ ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ತಗ್ಗಿಸುವ ನಿರ್ಧಾರದ ಹಿನ್ನೆಲೆಯಲ್ಲಿ ಜಾಗತಿಕ ದರ ಏರಿಕೆಯ ಹೊರತಾಗಿಯೂ ಸಾಸಿವೆ ಎಣ್ಣೆ ಹೊರತುಪಡಿಸಿ ಅಡುಗೆ ಎಣ್ಣೆಗಳ ಚಿಲ್ಲರೆ ಬೆಲೆಗಳು ದೇಶೀಯ ಮಾರುಕಟ್ಟೆಯಲ್ಲಿ ಕುಸಿದಿವೆ ಎಂದು ಸರ್ಕಾರ ಶುಕ್ರವಾರ ಹೇಳಿದೆ. ಕಳೆದ ತಿಂಗಳು ಸರ್ಕಾರವು ಪಾಮ್ ಎಣ್ಣೆ, ಸೋಯೊಯಿಲ್ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಕಡಿತಗೊಳಿಸಿದೆ.
ಕಚ್ಚಾ ತಾಳೆ ಎಣ್ಣೆಯ ಮೇಲಿನ ಮೂಲ ಆಮದು ತೆರಿಗೆಯನ್ನು ಶೇಕಡ 10 ರಿಂದ 2.5 ಕ್ಕೆ ಇಳಿಸಲಾಗಿದ್ದು ಕಚ್ಚಾ ಸೋಯಾ ಆಯಿಲ್ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ತೆರಿಗೆಯನ್ನು ಶೇ 7.5 ರಿಂದ 2.5 ಕ್ಕೆ ಇಳಿಸಲಾಗಿದೆ. ಈ ಇಳಿಕೆಯೊಂದಿಗೆ ಕಚ್ಚಾ ಪಾಮ್ ಎಣ್ಣೆ, ಕಚ್ಚಾ ಸೋಯಾ ಆಯಿಲ್ ಮತ್ತು ಕಚ್ಚಾ ಸೂರ್ಯಕಾಂತಿ ಎಣ್ಣೆಯ ಮೇಲಿನ ಪರಿಣಾಮಕಾರಿ ಸುಂಕ ಶೇ. 24.75 ಕ್ಕೆ ಇಳಿದಿದೆ, ಆದರೆ ಸಂಸ್ಕರಿಸಿದ ತಾಳೆ ಎಣ್ಣೆ, ಸೋಯಾ ಮತ್ತು ಸೂರ್ಯಕಾಂತಿ ಎಣ್ಣೆಯ ಮೇಲಿನ ಪರಿಣಾಮಕಾರಿ ಸುಂಕ ಶೇ. 35.75 ಕ್ಕೆ ಇಳಿದಿದೆ. ಇನ್ನು ಗ್ರಾಹಕರ ಆಯ್ಕೆಗೆ ಅನುಕೂಲವಾಗುವಂತೆ ಬ್ರಾಂಡ್ ಖಾದ್ಯ ತೈಲಗಳ ದರಗಳನ್ನು ಪ್ರಮುಖವಾಗಿ ಪ್ರದರ್ಶಿಸಲು ಚಿಲ್ಲರೆ ವ್ಯಾಪಾರಿಗಳಿಗೆ ತಿಳಿಸಲಾಗಿದೆ.
ಇನ್ನು ಬೆಲೆಗಳನ್ನು ಇಳಿಸಿ ಮತ್ತು ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಕೇಂದ್ರವು ಖಾದ್ಯ ತೈಲಗಳ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದೆ. ಅಕ್ರಮ ಸಂಗ್ರಹಣೆಯ ವಿರುದ್ಧ ಕ್ರಮಗಳನ್ನು ತೆಗೆದುಕೊಂಡಿದೆ. ಸಗಟು ವ್ಯಾಪಾರಿಗಳು, ಮಿಲ್ಲರ್‌ಗಳು ಮತ್ತು ರಿಫೈನರ್‌ಗಳು ತಮ್ಮ ಸ್ಟಾಕ್‌ನ ವಿವರಗಳನ್ನು ವೆಬ್ ಪೋರ್ಟಲ್‌ನಲ್ಲಿ ನೀಡುವಂತೆ ತಿಳಿಸಿದೆ. ಸುಂಕ ಕಡಿತಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಅಗತ್ಯ ನೀತಿ ಹಸ್ತಕ್ಷೇಪವು ಸಾಮಾನ್ಯ ಗ್ರಾಹಕರಿಗೆ ಪ್ರಯೋಜನಕಾರಿಯಾಗಿದೆ ಎಂದು ಸಾಬೀತಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಸ್ನೇಹಿತರೆ ಅಡುಗೆ ಎಣ್ಣೆಯ ಬೆಲೆ ಇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.