Toyota SUV: ಕಡಿಮೆ ಬೆಲೆ ಮತ್ತು 30 Km ಮೈಲೇಜ್, ಟೊಯೋಟಾ ಈ SUV ಕಾರಿನ ಮುಂದೆ ಸೈಲೆಂಟ್ ಆದ ಟಾಟಾ ಮತ್ತು ಮಹಿಂದ್ರಾ.

ಟೊಯೋಟಾ ಕಂಪನಿಯ ಈ SUV ಕಾರಿನ ಮುಂದೆ ಮಹಿಂದ್ರಾ ಮತ್ತು ಟಾಟಾ ಕಾರುಗಳು ಬೇಡಿಕೆ ಕಳೆದುಕೊಂಡಿದೆ.

Toyota Corolla Cross SUV: ಮಾರುಕಟ್ಟೆಯಲ್ಲಿ SUV ಗಳಿಗೆ ಬಾರಿ ಬೇಡಿಕೆ ಕಂಡು ಬರುತ್ತಿದೆ. ಮಾರುತಿ, ಹ್ಯುಂಡೈ, ಮಹಿಂದ್ರಾ ಸೇರಿದಂತೆ ಇನ್ನಿತರ ಕಂಪನಿಗಳು ನೂತನ ಮಾದರಿಯ SUV ಗಳನ್ನು ಮಾರುಕಟ್ಟೆಗೆ ಪರಿಚಯಿಸುತ್ತವೆ. ಇನ್ನು SUV ಗಳು ಹೆಚ್ಚಿನ ಮೈಲೇಜ್ ಹಾಗೂ ಕಡಿಮೆ ಬೆಲೆಗೆ ಲಭ್ಯವಾಗುವ ಕಾರಣ ಹೆಚ್ಚು ಬೇಡಿಕೆ ಪಡೆಯುತ್ತಿದೆ. ಇತ್ತೀಚೆಗಷ್ಟೇ ಮಹೀಂದ್ರಾ XUV 700 SUV ಯನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಈ ಮಾದರಿಯ ಕಾರ್ ಬಾರಿ ಬೇಡಿಕೆ ಪಡೆದುಕೊಂಡಿದೆ. ಇದೀಗ ಟೊಯೋಟಾ (Toyota) ಈ ಮಹೀಂದ್ರಾ XUV 700 ಜೊತೆ ಸ್ಪರ್ದಿಸಲು ನೂತನ ವಿನ್ಯಾಸದ SUV ಯನ್ನು ಬಿಡುಗಡೆಗೆ ಸಜ್ಜು ಮಾಡುತ್ತಿದೆ. ನೀವು ಎಸ್ ಯುವಿ ಖರೀದಿಸುವ ಯೋಜನೆಯಲ್ಲಿದ್ದರೆ ಇದೀಗ ಟೊಯೋಟಾ ನಿಮಗಾಗಿ ಹೊಸ ವಿನ್ಯಾಸದ SUV ಯನ್ನು ಪರಿಚಯಿಸಿದೆ.

Toyota has become very popular in this SUV car market
Image Credit: hindustantimes

ಟೊಯೊಟಾ ಕೊರೊಲ್ಲಾ ಕ್ರಾಸ್ SUV (Toyota Corolla Cross SUV) 
ಇದೀಗ ಟೊಯೊಟಾ ಕಂಪನಿ ನವೀಕರಿಸಿದ ವಿನ್ಯಾಸದ ಟೊಯೊಟಾ ಕೊರೊಲ್ಲಾ ಕ್ರಾಸ್ SUV ಯನ್ನು ಪರಿಚಯಿಸಿದೆ ಈ SUV ಮಾರುಕಟ್ಟೆಯಲ್ಲಿ ವಿವಿಧ ಎಸ್ ಯೂವಿಗಳ ಜೊತೆ ಪೈಪೋಟಿ ನಡೆಸಲಿದೆ. ನೂತನ ಟೊಯೊಟಾ ಕೊರೊಲ್ಲಾ ಕ್ರಾಸ್ SUV ಡೀಸೆಲ್ ಮತ್ತು ಪೆಟ್ರೋಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಈ ಕಾರ್ ನ ವಿಶೇಷವೆಂದರೆ ಇದಕ್ಕೆ ಎಲೆಕ್ಟ್ರಿಕ್ ಟೈಲ್ ಗೇಟ್ ಕೂಡ ನೀಡಬಹುದು.

7 ಆಸನಗಳ ಭರ್ಜರಿ ಮೈಲೇಜ್ ನೀಡುವ SUV
ಈಗಾಗಲೇ ಮಾರುಕಟ್ಟೆಯಲ್ಲಿ ಮಹಿಂದ್ರಾ ಹಾಗೂ ಮಾರುತಿ 7 ಆಸನದ SUV ಯನ್ನು ಪರಿಚಯಿಸಿದೆ. ಟೊಯೊಟಾ ಕೂಡ ಇದೀಗ 7 ಆಸನದ ಕೊರೊಲ್ಲಾ ಕ್ರಾಸ್ SUV ಪರಿಚಯಿಸಿ ಗ್ರಾಹಕರನ್ನು ಸೆಳೆಯುತ್ತಿದೆ. ದೊಡ್ಡ ಕುಟುಂಬಕ್ಕೆ ಈ ಕಾರ್ ಉತ್ತಮವಾಗಿರುತ್ತದೆ. ಹೊಂದಿಕೊಳ್ಳುವ ಆಸನಗಳನ್ನು ಅಳವಡಿಸಿರುವುದರಿಂದ ಈ ಆಸನಗಳನ್ನು ಸುಲಭವಾಗಿ ಹಿಂದಕ್ಕೆ ಮಡಚಬಹುದು.

Toyota Carolla Cross SUV is appreciated by people
Image Credit: forbesargentina

ಕಡಿಮೆ ಬೆಲೆ ಮತ್ತು 30 Km ಮೈಲೇಜ್
ನೂತನ ಟೊಯೊಟಾ ಕೊರೊಲ್ಲಾ ಕ್ರಾಸ್ SUV 172bhp ಪವರ್ ಔಟ್‌ ಪುಟ್‌ನೊಂದಿಗೆ 2.0-ಲೀಟರ್ ನೈಸರ್ಗಿಕವಾಗಿ ಆಕಾಂಕ್ಷೆಯ ಪೆಟ್ರೋಲ್ ಮತ್ತು 186bhp ಉತ್ಪಾದನೆಯೊಂದಿಗೆ ಸ್ವಯಂ ಚಾರ್ಜಿಂಗ್ ಪ್ರಬಲ ಹೈಬ್ರಿಡ್ ತಂತ್ರಜ್ಞಾನದೊಂದಿಗೆ 2.0-ಲೀಟರ್ ಪೆಟ್ರೋಲ್ ಅನ್ನು ಪಡೆಯಲಿದೆ. ಇನ್ನು ಈ ಕೊರೊಲ್ಲಾ ಕ್ರಾಸ್ SUV ಬೆಲೆ ಮಾರುಕಟ್ಟೆಯಲ್ಲಿ 14 ರಿಂದ 20 ಲಕ್ಷ ರೂ. ಆಗಿದೆ. ಟೊಯೊಟಾ ಕೊರೊಲ್ಲಾ ಕ್ರಾಸ್ ಎಸ್ ಯುವಿ ಬರೋಬ್ಬರಿ 30 ಕಿಲೋಮೀಟರ್ ಮೈಲೇಜ್ ನೀಡಲಿದೆ ಎಂದು ಅಂದಾಜು ಮಾಡಲಾಗಿದೆ.

Join Nadunudi News WhatsApp Group

Join Nadunudi News WhatsApp Group