ಕರೋನ ಲಸಿಕೆ ಇನ್ನೂ ಕೂಡ ಹಾಕಿಸಿಕೊಳ್ಳದೆ ಇರುವವರಿಗೆ ದೊಡ್ಡ ಶಾಕಿಂಗ್ ಸುದ್ದಿ ನೀಡಿದ WHO, ಜನರೇ ಎಚ್ಚರ ಎಚ್ಚರ.

ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಹೌದು ಎಷ್ಟೇ ಕಟ್ಟುನಿಟ್ಟಿನ ಕ್ರಮವನ್ನ ಕೈಗೊಂಡರು ಕೂಡ ದೇಶದಲ್ಲಿ ಕರೋನ ಮಹಾಮಾರಿ ಸೋಂಕು ಬಹಳ ವೇಗವಾಗಿ ಹರಡುತ್ತಿದ್ದು ಮತ್ತೆ ಲಾಕ್ ಡೌನ್ ಮಾಡುವ ಸಂದರ್ಭ ಬರಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರೋನ ಸೋಂಕಿನ ಬೆನ್ನಲ್ಲೇ ಇನ್ನೊಂದು ಸೋಂಕು ಕಾಣಿಸಿಕೊಂಡಿದ್ದು ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಹೌದು ಡೆಲ್ಟಾ ಪ್ಲಸ್ ಕಾಣಿಸಿಕೊಂಡಿದ್ದು ಇದು ಕೂಡ ಕರೋನ ಸೋಂಕಿನ ಹಾಗೆ ಬಹಳ ಅಪಾಯಕಾರಿ ಎಂದು ಹೇಳಬಹುದು. ದೇಶದಲ್ಲಿ ಈಗಾಗಲೇ ಹಲವರಿಗೆ ಈ ಸೋಂಕು ಕಾಣಿಸಿಕೊಂಡಿದ್ದು ಕರೋನ ಸೋಂಕಿಗಿಂತ ಈ ಸೋಂಕು ಬಹಳ ವೇಗವಾಗಿ ಹರಡುತ್ತಿದೆ ಎಂದು ಹೇಳಲಾಗುತ್ತಿದೆ.

ಕರೋನ ಲಸಿಕೆಯನ್ನ ದೇಶದಲ್ಲಿ ಕೊಡಲಾಗುತ್ತಿದ್ದು ಕೋಟ್ಯಾಂತರ ಜನರು ಲಸಿಕೆಯನ್ನ ಪಡೆದುಕೊಂಡಿದ್ದು ಇನ್ನು ಕೂಡ ಹಲವು ಜನರು ಲಸಿಕೆಯನ್ನ ಪಡೆದುಕೊಂಡಿಲ್ಲ ಎಂದು ಹೇಳಬಹುದು. ಇನ್ನು ಈಗ ಕರೋನ ಲಸಿಕೆಯನ್ನ ಪಡೆದುಕೊಳ್ಳದೇ ಇರುವವರಿಗೆ WHO ನ ಮುಖ್ಯಸ್ಥರಾದ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ದೊಡ್ಡ ಶಾಕಿಂಗ್ ಸುದ್ದಿಯನ್ನ ನೀಡಿದ್ದಾರೆ ಎಂದು ಹೇಳಬಹುದು. ಹಾಗಾದರೆ ಏನದು ಸುದ್ದಿ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸುಮಾರು 85 ದೇಶಗಳಲ್ಲಿ ಗುರುತಿಸಲಾದ ಕರೋನದ ಡೆಲ್ಟಾ ರೂಪಾಂತರವು ಇಲ್ಲಿಯವರೆಗೆ ಗುರುತಿಸಲಾದ ರೂಪಾಂತರಗಳಲ್ಲಿ ಅತ್ಯಂತ ಟ್ರಾನ್ಸ್ ಮಿಸಿಬಲ್ ಆಗಿದೆ ಮತ್ತು ಲಸಿಕೆ ಹಾಕದ ಜನಸಂಖ್ಯೆಯಲ್ಲಿ ವೇಗವಾಗಿ ಹರಡುತ್ತಿದೆ ಎಂದು ಡಬ್ಲ್ಯೂಹೆಚ್‌ಒ ಮುಖ್ಯಸ್ಥ ಟೆಡ್ರೋಸ್ ಅಧನೋಮ್ ಘೆಬ್ರೆಯೆಸಸ್ ಎಚ್ಚರಿಸಿದ್ದಾರೆ.

corona and delta plus

ಶುಕ್ರವಾರ ಜಿನೀವಾದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಇವರು ಪ್ರಸ್ತುತ ಜಾಗತಿಕವಾಗಿ ಡೆಲ್ಟಾ ರೂಪಾಂತರದ ಬಗ್ಗೆ ಸಾಕಷ್ಟು ಕಾಳಜಿ ಇದೆ ಅನ್ನೋದು ನನಗೆ ತಿಳಿದಿದೆ, ಆದರೆ ಡಬ್ಲ್ಯೂಹೆಚ್‌ಒ ಕೂಡ ಅದರ ಬಗ್ಗೆ ಕಾಳಜಿ ವಹಿಸಿದೆ ಎಂದರು. ಇನ್ನು ಡೆಲ್ಟಾ ಬಹಳ ಅಪಾಯಕಾರಿ ಟ್ರಾನ್ಸ್ ಮಿಸಿಬಲ್ ಆಗಿದೆ ಮತ್ತು ಕನಿಷ್ಠ 85 ದೇಶಗಳಲ್ಲಿ ಇದನ್ನ ಗುರುತಿಸಲಾಗಿದೆ. ಇನ್ನೂ ಕೂಡ ಲಸಿಕೆ ಪಡೆದುಕೊಳ್ಳದ ಜನರಲ್ಲಿ ಇದು ಬಹಳ ವೇಗವಾಗಿ ಹರಡುತ್ತಿದೆ ಎಂದು ಅವರು ಹೇಳಿದರು. ಇನ್ನು ಕೆಲವು ದೇಶಗಳು ಸಾರ್ವಜನಿಕ ಆರೋಗ್ಯ ಮತ್ತು ಸಾಮಾಜಿಕ ಕ್ರಮಗಳನ್ನ ಸರಾಗಗೊಳಿಸುತ್ತಿದ್ದಂತೆ ನಾವು ಪ್ರಪಂಚದಾದ್ಯಂತ ಪ್ರಸರಣದಲ್ಲಿ ಹೆಚ್ಚಳವನ್ನ ಕಾಣಲು ಪ್ರಾರಂಭಿಸುತ್ತಿದ್ದೇವೆ ಎಂದು ಅವರು ಕಳವಳ ವ್ಯಕ್ತ ಪಡಿಸಿದರು.

ಇನ್ನು ಇನ್ನು ಹೆಚ್ಚಿನ ಪ್ರಕರಣಗಳು ಬಂದರೆ ಹೆಚ್ಚಿನ ಆಸ್ಪತ್ರೆಗಳು, ಆರೋಗ್ಯ ಕಾರ್ಯಕರ್ತರು ಮತ್ತು ಆರೋಗ್ಯ ವ್ಯವಸ್ಥೆಗಳನ್ನು ಮತ್ತಷ್ಟು ವಿಸ್ತರಿಸುವುದು ಮತ್ತು ಇದು ಸಾವಿನ ಅಪಾಯವನ್ನ ಹೆಚ್ಚಿಸುತ್ತದೆ ಎಂದು ಅವರು ಹೇಳಿದರು. ಏನೇ ಆಗಲಿ ಲಸಿಕೆ ಹಾಕಿಸಿಕೊಳ್ಳದೆ ಇರುವವರು ಆದಷ್ಟು ಬೇಗ ಲಸಿಕೆಯನ್ನ ಹಾಕಿಸಿಕೊಳ್ಳಿ ಮತ್ತು ಡೆಲ್ಟಾ ಪ್ಲಸ್ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ ಹಾಗು ಈ ಮಾಹಿತಿಯನ್ನ ಲಸಿಕೆ ಹಾಕಿಸಿಕೊಳ್ಳದೆ ಇರುವ ಎಲರಿಗೂ ತಲುಪಿಸಿ.

Join Nadunudi News WhatsApp Group

corona and delta plus

Join Nadunudi News WhatsApp Group