ಕಳೆದ ಕೆಲವು ದಿನಗಳಿಂದ ಬಹುತೇಕ ಸಾಮಾಜಿಕ ಜಾಲತಾಣದಲ್ಲಿ ಕರೋನ ಸೋಂಕಿನ ವಿಷಯ ಬಿಟ್ಟರೆ ಅತೀ ಹೆಚ್ಚು ಸುದ್ದಿಯಾಗುತ್ತಿರುವ ಒಂದೇ ಒಂದು ವಿಷಯ ಏನು ಅಂದರೆ ಅದೂ ದಿನದಿಂದ ದಿನಕ್ಕೆ ಏರಿಕೆಯನ್ನ ಕಾಣುತ್ತಿರುವ ಚಿನ್ನದ ಬೆಲೆಯ ವಿಷಯ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕಳೆದ ಎರಡು ತಿಂಗಳುಗಳಿಂದ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯ ಹಾದಿಯನ್ನ ಹಿಡಿದಿದ್ದು ಇಳಿಕೆಯನ್ನ ಕಾಣುವ ಯಾವುದೇ ಲಕ್ಷಣ ಕಾಣುತ್ತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಚಿನ್ನದ ಬೆಲೆ ದಿನದಿಂದ ದಿನಕ್ಕೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಾಣುತ್ತಿದ್ದು ಇದು ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಬಹುದು.
ಮಾರ್ಚ್ ತಿಂಗಳಲ್ಲಿ ಕೊಂಚ ಇಳಿಕೆಯ ಹಾದಿಯನ್ನ ಹಿಡಿದಿದ್ದ ಚಿನ್ನದ ಬೆಲೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕರೋನ ಸೋಂಕಿನ ಪ್ರಮಾಣ ಜಾಸ್ತಿ ಆಗಿ ಲಾಕ್ ಡೌನ್ ಮಾಡಿದ ಸಮಯದಲ್ಲಿ ಮತ್ತೆ ಏರಿಕೆಯನ್ನ ಕಂಡಿದೆ ಎಂದು ಹೇಳಬಹುದು, ಕಳೆದ ಬಾಯಾರಿ ಕೂಡ ಲಾಕ್ ಡೌನ್ ಮಾಡಿದ ಸಮಯದಲ್ಲಿ ಬಾರಿ ಏರಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಲಾಕ್ ಡೌನ್ ಸಡಿಲಿಕೆಯ ನಂತರ ಕೊಂಚ ಇಳಿಕೆಯನ್ನ ಕೂಡ ಕಂಡಿತ್ತು ಎಂದು ಹೇಳಬಹುದು. ಇನ್ನು ಈ ಬಾರಿ ಬಾರಿ ಕೂಡ ಬಾರಿ ಏರಿಕೆಯತ್ತ ಮುಖವನ್ನ ಮಾಡಿರುವ ಚಿನ್ನದ ಬೆಲೆ ಜನರ ಮುಖದಲ್ಲಿ ಬೇಸರ ಮೂಡುವಂತೆ ಮಾಡಿದೆ ಎಂದು ಹೇಳಬಹುದು. ಹಾಗಾದರೆ ಚಿನ್ನದ ಬೆಲೆ ಎಷ್ಟು ಏರಿಕೆ ಆಗಿದೆ, ಇಂದಿನ ಚಿನ್ನದ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಆಭರಣ ಚಿನ್ನದ ಬೆಲೆ ಎಷ್ಟು ಮತ್ತು ಮುಂದಿನ ದಿನಗಳಲ್ಲಿ ಎಷ್ಟು ಏರಿಕೆ ಆಗುವ ಲಕ್ಷಣ ಇದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.
ಹೌದು ಮಾರ್ಚ್ ತಿಂಗಳಲ್ಲಿ ಕೊಂಚ ಇಳಿಕೆಯನ್ನ ಕಂಡಿದ್ದ ಚಿನ್ನದ ಬೆಲೆ ಪ್ರತಿ ಗ್ರಾಂ ಗೆ 4115 ರೂಪಾಯಿ ಆಗಿತ್ತು. ಇನ್ನು ಅದೇ ರೀತಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಚಿನ್ನದ ಬೆಲೆ ಕೊಂಚ ಏರಿಕೆಯನ್ನ ಮುಖವನ್ನ ಮಾಡಿದ್ದು ಏಪ್ರಿಲ್ ತಿಂಗಳ ಅಂತ್ಯದಲ್ಲಿ 22 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 4300 ರೂಪಾಯಿ ಆಗಿತ್ತು, ಆದರೆ ಈಗ ಮೇ ತಿಂಗಳಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದ್ದು ಇಂದು ದೇಶಿಯ ಚಿನ್ನದ ಮಾರುಕಟ್ಟೆಯಲ್ಲಿ ಒಂದು ಗ್ರಾಂ ಚಿನ್ನದ ಬೆಲೆ 4545 ರೂಪಾಯಿ ಆಗಿದೆ. ಕಳೆದ ಮಾರ್ಚ್ ತಿಂಗಳಿಗೆ ಹೋಲಿಕೆ ಮಾಡಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ ಬರೋಬ್ಬರಿ 430 ರೂಪಾಯಿ ಏರಿಕೆ ಕಂಡಿದೆ ಮತ್ತು ಹತ್ತು ಗ್ರಾಂ ಚಿನ್ನದ ಬೆಲೆಯಲ್ಲಿ 4300 ರೂಪಾಯಿ ಏರಿಕೆ ಕಂಡಿದೆ ಎಂದು ಹೇಳಬಹುದು.
ಕರೋನ ಮಹಾಮಾರಿಯ ದೇಶದ ಷೇರು ಮಾರುಕಟ್ಟೆಯಲ್ಲಿ ಬಾರಿ ಏರಿಳಿತ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡ ಕಾರಣ ದೇಶದಲ್ಲಿ ಚಿನ್ನದ ಬೆಲೆ ಬಾರಿ ಪ್ರಮಾಣದಲ್ಲಿ ಏರಿಕೆಯನ್ನ ಕಂಡಿದೆ ಎಂದು ತಜ್ಞರು ತಮ್ಮ ಅಭಿಪ್ರಾಯವನ್ನ ಹೇಳಿಕೊಂಡಿದ್ದಾರೆ. ಸ್ನೇಹಿತರೆ ಕರೋನ ಏರಿಕೆಯ ಜೊತೆ ಚಿನ್ನದ ಬೆಲೆ ಬಾರಿ ಪ್ರಾಣದಲ್ಲಿ ಏರಿಕೆಯನ್ನ ಕಾಣುತ್ತಿರುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.