ಕರೋನ ಮಹಾಮಾರಿ ದೇಶದಲ್ಲಿ ಅದೆಷ್ಟೋ ಜನರ ಜೀವವನ್ನ ಬಲಿ ತೆಗೆದುಕೊಳ್ಳುವುದರ ಮೂಲಕ ಅದೆಷ್ಟೋ ಕುಟುಂಬವನ್ನ ಆರ್ಥಿಕ ಪರಿಸ್ಥಿತಿಯಲ್ಲಿ ಮುಳುಗುವಂತೆ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕರೋನ ಮಹಾಮಾರಿಯ ಆರ್ಭಟ ದಿನದಿಂದ ದಿನಕ್ಕೆ ಏರುತ್ತಲೇ ಇದ್ದು ಜನರು ಕಂಗಾಲಾಗಿ ಹೋಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಈಗ ರಾಜ್ಯದಲ್ಲಿ ಒಮಿಕ್ರಾನ್ ಆವರಿಸಿದ್ದು ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಇನ್ನು ಇದರ ನಡುವೆ ರಾಜ್ಯದ ಜನರಿಗೆ ರಾಜ್ಯ ಸರ್ಕಾರ ಬಂಪರ್ ಗುಡ್ ನ್ಯೂಸ್ ನೀಡಿದೆ ಎಂದು ಹೇಳಬಹುದು. ಹೌದು ಒಮಿಕ್ರಾನ್ ಆತಂಕದ ನಡುವೆ ರಾಜ್ಯ ಸರ್ಕಾರ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಕುಟುಂಬಗಳಿಗೆ 1 ಲಕ್ಷ ರೂಪಾಯಿಯನ್ನ ನೀಡುವುದಾಗಿ ಅಧಿಕೃತ ಘೋಷಣೆಯನ್ನ ಹೊರಡಿಸಿದೆ.
ಹಾಗಾದರೆ ಯಾವಯಾವ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿ ಸಿಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕರ್ನಾಟಕ ರಾಜ್ಯ ಸರ್ಕಾರವು ಕರೋನ ಮಹಾಮಾರಿಯಿಂದ ಮೃತಪಟ್ಟ ಬಿಪಿಎಲ್ ಕುಟುಂಗಳಿಗೆ ಪರಿಹಾರವಾಗಿ ಒಂದು ಲಕ್ಷ ರೂಪಾಯಿಯನ್ನ ನೀಡಲು ಘೋಷಣೆಯನ್ನ ಹೊರಡಿಸಿದೆ.
ಈ ಹಿಂದೆ ರಾಜ್ಯ ಸರ್ಕಾರ ಒಂದು ಲಕ್ಷ ರೂಪಾಯಿಯನ್ನ ನೀಡುವುದಾಗಿ ಘೋಷಣೆಯನ್ನ ಮಾಡಿತ್ತು, ಆದರೆ ಕೆಲವು ಷರತ್ತುಗಳನ್ನ ಹಾಕುವುದರ ಮೂಲಕ ಜನರಿಗೆ ದೊಡ್ಡ ಶಾಕ್ ನೀಡಿದ್ದು, ಆದರೆ ಈಗ ಜನರಿಗೆ ಗುಡ್ ನ್ಯೂಸ್ ನೀಡಿದ್ದು ಎಲ್ಲ ಶರತ್ತುಗಳನ್ನ ಸಡಿಲ ಮಾಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಒಂದು ಕರೋನ ಮಹಾಮಾರಿಯ ಕುಟುಂಬದ ಯಾವುದೇ ವ್ಯಕ್ತಿ ಮೃತಪಟ್ಟರೆ ಆ ವ್ಯಕ್ತಿಯ ಕುಟುಂಬದವರಿಗೆ ಒಂದು ಲಕ್ಷ ರೂಪಾಯಿಯನ್ನ ನೀಡಲಾಗುತ್ತದೆ.
ಈ ಹಿಂದೆ ಒಂದು ಲಕ್ಷ ರೂಪಾಯಿಯನ್ನ ನೀಡಲು ವಯಸ್ಸಿನ ಮಿತಿಯನ್ನ ನಿಗದಿ ಮಾಡಲಾಗಿತ್ತು, ಆದರೆ ಈಗ ಕರೋನ ಮಹಾಮಾರಿಯ ಕಾರಣ ಬಿಪಿಎಲ್ ಕುಟುಂಬದ ಎಷ್ಟೇ ವಯಸ್ಸಿನ ವ್ಯಕ್ತಿ ಮೃತಪಟ್ಟರು ಅವರ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರದ ಹಣ ನೀಡುವಂತೆ ರಾಜ್ಯ ಸರ್ಕಾರ ಆದೇಶವನ್ನ ಹೊರಡಿಸಿದೆ. ಯಾವುದೇ ವಯಸ್ಸಿನ ನಿಬಂಧನೆಯಿಲ್ಲದೆ ಕಾನೂನುಬದ್ಧ ವಾರಸುದಾರರಿಗೆ 1 ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವಂತೆ ಕಂದಾಯ ಇಲಾಖೆಗೆ ತಿದ್ದುಪಡಿ ಆದೇಶ ಹೊರಡಿಸಿದೆ. ಸ್ನೇಹಿತರೆ ಸಹಾಯ ಅದೆಷ್ಟೋ ಬಡಕುಟುಂಬಗಳಿಗೆ ನೆರವಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಬಿಪಿಎಲ್ ಕಾರ್ಡುದಾರರಿಗೆ ತಲುಪಿಸಿ.