ಕರೋನ ಮಹಾಮಾರಿ ದೇಶದಲ್ಲಿ ಎಷ್ಟು ಆತಂಕವನ್ನ ಉಂಟುಮಾಡಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ ಎಂದು ಹೇಳಬಹುದು. ದೇಶದಲ್ಲಿ ಕೇಳದ ಒಂದು ವಾರದಿಂದ ಕರೋನ ಸೋಂಕಿತರ ಸಂಖ್ಯೆ ಏರಿಕೆ ಆಗಿದ್ದು ಇದು ಜನರ ಭಯಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಕರೋನ ಇಳಿಕೆ ಆಯಿತು ಎಂದು ಜನರು ನಿಟ್ಟುಸಿರುವ ಬಿಡುವ ಸಮಯದಲ್ಲೇ ದೇಶದಲ್ಲಿ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಇದು ಜನರ ಶಾಕ್ ಗೆ ಕಾರಣವಾಗಿದೆ ಎಂದು ಹೇಳಬಹುದು. ದೇಶದಲ್ಲಿ ಈಗಾಗಲೇ 21 ಜನರಿಗೆ ಓಮಿಕ್ರಾನ್ ಸೋಂಕು ಕಾಣಿಸಿಕೊಂಡಿದ್ದು ಈ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಲ್ಲಿ ಕೆಲವು ಅಗತ್ಯ ಕ್ರಮಗಳನ್ನ ತೆಗೆದುಕೊಳ್ಳಲಾಗಿದೆ ಎಂದು ಹೇಳಬಬುದು.
ಇನ್ನು ಇದರ ನಡುವೆ ಶಾಲೆ ಮತ್ತು ಕಾಲೇಜಿನಲ್ಲಿ ಕರೋನ ಸೋಂಕು ಹೆಚ್ಚುಹೆಚ್ಚು ಆವರಿಸುತ್ತಿದ್ದು ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಕಳೆದ ನಾಲ್ಕು ದಿನದಲ್ಲಿ 500 ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕರೋನ ಸೋಂಕು ಕಾಣಿಸಿಕೊಂಡಿದ್ದು ಇದರಿಂದ ಪೋಷಕರು ಬಹಳ ಆಘಾತಕ್ಕೆ ಒಳಗಾಗಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಇದರ ನಡುವೆ ಕರೋನ ಸೋಂಕಿನ ಏರಿಕೆಯ ಕಾರಣ ಶಾಲೆ ಬಂದ್ ಮಾಡುವ ಕುರಿತಂತೆ ರಾಜ್ಯದ ಪ್ರಾರ್ಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ಮಹತ್ವದ ಹೇಳಿಕೆಯನ್ನ ನೀಡಿದ್ದಾರೆ.
ಹಾಗಾದರೆ ಶಾಲೆಗಳನ್ನ ಬಂದ್ ಮಾಡುವ ಕುರಿತಂತೆ ಸಚಿವ ಬಿ.ಸಿ.ನಾಗೇಶ್ ಅವರು ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ರಾಜ್ಯದ ಶಾಲೆಗಳಲ್ಲಿ ಕರೋನ ಸ್ಪೋಟವಾಗುತ್ತಿರುವ ಹಿನ್ನಲೆಯಲ್ಲಿ ರಾಜ್ಯದಲ್ಲಿ ಶಾಲೆಗಳನ್ನ ಬಂದ್ ಮಾಡುವ ಕುರಿತಂತೆ ರಾಜ್ಯದ ಪ್ರರಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರು ದೊಡ್ಡ ಹೇಳಿಕೆಯನ್ನ ನೀಡಿದ್ದಾರೆ.
ಇನ್ನು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದಲ್ಲಿ ಕೊರೊನಾ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ಸಿದ್ದ ಎಂದು ಹೇಳಿದ್ದಾರೆ. ಕೋವಿಡ್ ಬಗ್ಗೆ ತಜ್ಞರಿಂದ ಪ್ರತಿದಿನ ವರದಿ ಪಡೆಯುತ್ತಿದ್ದೇವೆ. ವರದಿ ಪ್ರಕಾರ ತಕ್ಷಣಕ್ಕೆ ಆತಂಕ ಬೇಡ, ಕೊರೊನಾ ಪ್ರಕರಣಗಳಲ್ಲಿ ತೀವ್ರ ಹೆಚ್ಚಾದರೆ ಶಾಲೆಗಳನ್ನು ಬಂದ್ ಮಾಡಲು ನಾವು ಸಿದ್ದರಿದ್ದೇವೆ. ಪೋಷಕರು ಯಾವುದೇ ರೀತಿ ಆತಂಕ ಪಡುವುದು ಬೇಡ ಎಂದು ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ. ರಾಜ್ಯದಲ್ಲಿ ಹಲವು ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದ್ದು ಇದು ಪೋಷರಕ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಬಹುದು. ಈ ಹಿನ್ನಲೆಯಲ್ಲಿ ಮಾತನಾಡಿರುವ ಅವರಿ ಪೋಷಕರಿಗೆ ಈ ಮಾಹಿತಿಯನ್ನ ನೀಡಿದ್ದಾರೆ.