ಕರೋನ ಮಹಾಮಾರಿ ದೇಶದಲ್ಲಿ ಯಾವ ರೀತಿಯಲ್ಲಿ ಹರಡುತ್ತಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಸರ್ಕಾರ ಅದೆಷ್ಟೋ ನಿಯಮಗಳನ್ನ ಮತ್ತು ಮಾರ್ಗಸೂಚಿಯನ್ನ ಜಾರಿಗೆ ತಂದರು ಕೂಡ ಕರೋನ ಮಹಾಮಾರಿಯನ್ನ ಸಂಪೂರ್ಣವಾಗಿ ತಡೆಗಟ್ಟುವಲ್ಲಿ ಸರ್ಕಾರ ವಿಫಲ ಆಗಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಮೊದಲಿಗೆ ಹೋಲಿಕೆ ಮಾಡಿದರೆ ಈ ಬಾರಿ ಕರೋನ ಎರಡನೆಯ ಅಲೆಯ ಪ್ರಭಾವ ಬಹಳ ಜಾಸ್ತಿ ಆಗಿದ್ದು ಅದೆಷ್ಟೋ ಜನರು ತಮ್ಮ ಪ್ರಾಣವನ್ನ ಕಳೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಕರ್ನಾಟಕವನ್ನ ಸಂಪೂರ್ಣವಾಗಿ ಲಾಕ್ ಡೌನ್ ಮಾಡಲಾಗಿದ್ದು ನಿನ್ನೆಯಿಂದ ಸ್ವಲ್ಪ ಲಾಕ್ ಡೌನ್ ತೆಗೆಯಲಾಗಿದೆ ಎಂದು ಹೇಳಬಹುದು.
ಇನ್ನು ಕರ್ನಾಟಕದಲ್ಲಿ ಕರೋನ ಪ್ರಭಾವ ಸ್ವಲ್ಪ ಇಳಿಮುಖ ಆಗಿದ್ದು ಈ ಕಾರಣದಿಂದ ಲಾಕ್ ಡೌನ್ ಅನ್ನು ಸ್ವಲ್ಪ ಕಡಿಮೆ ಮಾಡಲಾಗಿದೆ ಎಂದು ಹೇಳಬಹುದು. ಇನ್ನು ಈಗ ಕರೋನ ಮಧ್ಯದಲ್ಲಿ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಜನರಿಗೆ ರಾಜ್ಯ ಸರ್ಕಾರ ಬಂಪರ್ ಗುಡ್ ನ್ಯೂಸ್ ನೀಡಿದ್ದು ಇದು ಬಹಳ ಜನರಿಗೆ ಅನುಕೂಲ ಆಗಲಿದೆ ಎಂದು ಹೇಳಬಹುದು. ಹಾಗಾದರೆ ಏನದು ಬಂಪರ್ ಗುಡ್ ನ್ಯೂಸ್ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಕರೋನ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳಿಗೆ ಒಂದು ಲಕ್ಷ ರೂಪಾಯಿಗಳ ಪರಿಹರಣ ಹಣ ನೀಡಲು ಈಗ ರಾಜ್ಯ ಸರ್ಕಾರ ತೀರ್ಮಾನವನ್ನ ಮಾಡಿದ್ದು ಇದರ ಕುರಿತು ರಾಜ್ಯದ ಮುಖ್ಯ ಮಂತ್ರಿಗಳಾದ ಬಿ ಎಸ್ ಯಡಿಯೂರಪ್ಪನವರು ಮಾಹಿತಿಯನ್ನ ನೀಡಿದ್ದಾರೆ.
ಇನ್ನು ಮಾಧ್ಯಮದವರ ಜೊತೆ ಮಾತನಾಡಿದ ಮುಖ್ಯಮಂತ್ರಿಗಳು ಕರೋನ ಮಹಾಮಾರಿಯಿಂದ ಅದೆಷ್ಟೋ ಕುಟುಂಬಗಳು ಬಹಳ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿದೆ ಮತ್ತು ಕರೋನ ಮಹಾಮಾರಿಯಿಂದ ಮೃತಪಟ್ಟ ಕುಟುಂಬಗಳು ತುಂಬಾ ಸಂಕಷ್ಟವನ್ನ ಎದುರಿಸುತ್ತಿದೆ ಹೀಗಾಗಿ ಬಿಪಿಎಲ್ ಕುಟುಂಬಗಳಿಗೆ ಒಂದು ಲಕ್ಷ ರೂ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದರು. ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಕುಟುಂಬಗಳಲ್ಲಿ ಕರೋನ ಸೋಂಕಿನಿಂದ ವಯಸ್ಕರು ಮೃತಪಟ್ಟರೆ ಆ ಒಂದು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿಗಳ ಪರಿಹಾರ ಹಣವನ್ನ ನೀಡಲಾಗುತ್ತದೆ ಎಂದು ಅವರು ಹೇಳಿದರು. ಇನ್ನು ಒಂದೇ ಕುಟುಂಬದಲ್ಲಿ ಮೂವರು ಅಥವಾ ಇಬ್ಬರು ಸಾವನ್ನಪ್ಪಿದರು ಅವರಲ್ಲಿ ಒಬ್ಬರಿಗೆ ಮಾತ್ರ ಪರಿಹಾರ ಹಣ ಸಿಗುತ್ತದೆ ಎಂದು ಅವರು ಹೇಳಿದರು.
ಇನ್ನು ಅಪ್ಪ ಅಮ್ಮ ಇಲ್ಲದೆ ಇದ್ದರೆ ಅವರ ಮಕ್ಕಳ ಹೆಸರಿನಲ್ಲಿ ಹಣವನ್ನ ಡೆಪಾಸಿಟ್ ಮಾಡಲಾಗುತ್ತದೆ ಎಂದು ಮುಖ್ಯ ಮಂತ್ರಿಗಳು ಹೇಳಿದರು. ಈ ಯೋಜನೆಯಲ್ಲಿ ಸರ್ಕಾರಕ್ಕೆ ಸುಮಾರು 300 ಕೋಟಿ ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜು ಮಾಡಲಾಗಿದೆ. ಏನೇ ಆಗಲಿ ಇದೊಂದು ಬಹಳ ಉತ್ತಮವಾದ ಯೋಜನೆ ಆಗಿದ್ದು ಇದು ಬಡಜನರ ಅನುಕೂಲಕ್ಕೆ ಕಾರಣವಾಗಲಿದೆ ಎಂದು ಹೇಳಬಹುದು. ಸ್ನೇಹಿತರೆ ಸರ್ಕಾರದ ಈ ಯೋಜನೆಯನ್ನ ಬಿಪಿಎಲ್ ಕಾರ್ಡುಗಳನ್ನ ಹೊಂದಿರುವ ಎಲ್ಲಾ ಕುಟುಂಬದವರಿಗೆ ತಲುಪಿಸಿ.