ಕರೋನ ಜನರ ನಿದ್ದೆಯನ್ನ ಕೆಡಿಸಿದೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ಎರಡು ವರ್ಷದ ಹಿಂದೆ ಕಾಣಿಸಿಕೊಂಡ ಕರೋನ ಮಹಾಮಾರಿ ಸೋಂಕು ಅದೆಷ್ಟೋ ಜನರ ಜೀವವನ್ನ ಬಲಿ ತೆಗೆದುಕೊಂಡಿದೆ ಎಂದು ಹೇಳಬಹುದು. ಇನ್ನು ಕರೋನ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆ ಆಗುತ್ತಲೇ ಇದ್ದು ಅದೆಷ್ಟೋ ಜನರು ಇಂದಿಗೂ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟವನ್ನ ಮಾಡುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಕರೋನ ಲಸಿಕೆಯನ್ನ ನೀಡಲಾಗುತ್ತಿದ್ದು ನೂರು ಕೋಟಿಗೂ ಅಧಿಕ ಜನರು ಕರೋನ ಲಸಿಕೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಕರೋನ ಲಸಿಕೆ ಪಡೆದುಕೊಂಡವರಿಗೆ ಇನ್ನೊಂದು ಗುಡ್ ನ್ಯೂಸ್ ಬಂದಿದ್ದು ಇನೇನು ಕೆಲವೇ ದಿನಗಳಲ್ಲಿ ಜನರ ಕೈಗೆ ಕರೋನ ಮಾತ್ರೆಗಳು ಸಿಗಲಿದೆ.
ಇನ್ನು ಈ ಮಾತ್ರೆಗಳು ಕರೋನ ಸೋಂಕಿನ ವಿರುದ್ಧ ಪರಿಣಾಮಕಾರಿಯಾಗಿ ಹೊರವನ್ನ ಮಾಡಲಿದ್ದು ಇದು ಜನರಿಗೆ ರಕ್ಷಾ ಕವಚವಾಗಿರಲಿದೆ ಎಂದು ಸಂಶೋದಹಕರು ಹೇಳಿದ್ದಾರೆ. ಹಾಗಾದರೆ ಈ ಮಾತ್ರೆಗಳು ಯಾವುದು ಮತ್ತು ಈ ಮಾತ್ರೆಗಳ ವಿಶೇಷತೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಯುನೈಟೆಡ್ ಕಿಂಗ್‌ಡಂ ನಿಂದ ಅಂಗೀಕಾರ ಪಡೆದಿರುವ ಮೊಟ್ಟ ಮೊದಲ ಕೊರೊನಾ ನಿಗ್ರಹ ಮಾತ್ರೆ ಮೊಲುಪಿರವಿರ್‌ನ ತುರ್ತು ಬಳಕೆಗೆ ಸದ್ಯದಲ್ಲೇ ಭಾರತ ಸರಕಾರವೂ ಒಪ್ಪಿಗೆ ನೀಡುವ ಸಾಧ್ಯತೆಯಿದೆ ಎಂದು ಕೋವಿಡ್ ಕಾರ್ಯತಂತ್ರ ತಂಡದ ಮುಖ್ಯಸ್ಥ ಡಾ. ರಾಮ್ ವಿಶ್ವಕರ್ಮ ಹೇಳಿದ್ದಾರೆ.
ಕರೋನ ಸೋಂಕಿನಲ್ಲಿ ಹಲವು ಲಕ್ಷಣಗಳು ಇದ್ದು ಯಾವ ಸೋಂಕಿತನಿಗೆ ಗಂಭೀರ ಲಕ್ಷಣಗಳು ಇರುತ್ತದೆಯೋ ಅಂತ ವ್ಯಕ್ತಿಗೆ ಈ ಮಾತ್ರೆಗಳನ್ನ ನೀಡಲಾಗುತ್ತದೆ ಮತ್ತು ಈ ಮಾತ್ರೆಗಳನ್ನ ಸೋಂಕಿನ ಪರಿಮಾಣವನ್ನ ಹತೋಟಿಗೆ ತರುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಅಷ್ಟೇ ಅಲ್ಲದೆ ಫೈಜರ್ ಸಂಸ್ಥೆ ಪ್ಯಾಕ್ಸ್‌ಲೋವಿಡ್ ಎಂಬ ಮಾತ್ರೆಯನ್ನು ಅಭಿವೃದ್ಧಿಪಡಿಸಿದ್ದು, ಅದರ ಬಳಕೆಗೆ ಸಮ್ಮತಿ ಸಿಗಲು ಇನ್ನಷ್ಟು ಕಾಲಾವಕಾಶ ಬೇಕಾಗಬಹುದು ಎಂದಿದ್ದಾರೆ.
ಇನ್ನು ಕರೋನ ವ್ಯಾಕ್ಸೀನ್ ಕುರಿತು ಮಾತನಾಡಿರುವ ಇವರು, ಭಾರತ್ ಬಯೋಟೆಕ್ ಅಭಿವೃದ್ಧಿ ಪಡಿಸಿರುವ ಮೂಗಿನ ಮೂಲಕ ಹಾಕುವ ಲಸಿಕೆಯನ್ನು ಕೊವ್ಯಾಕ್ಸಿನ್‌ನ ಎರಡನೇ ಡೋಸ್‌ನ ಬದಲಿಗೆ ಬಳಸಬಹುದು. ಇಂಜೆಕ್ಟ್ ಮಾಡುವಂಥ ಲಸಿಕೆಗೆ ಹೋಲಿಸಿದರೆ ಮೂಗಿನ ಮೂಲಕ ನೀಡುವ ಲಸಿಕೆಯು ಸೋಂಕಿನ ಪ್ರಸರಣ ತಡೆಯುವಲ್ಲಿ ಹೆಚ್ಚು ಪರಿಣಾಮಕಾರಿ ಎಂದು ಹೇಳಿದ್ದಾರೆ. ಸ್ನೇಹಿತರೆ ಕರೋನ ಮಾತ್ರೆಗಳು ಸೋಂಕು ತಗುಲಿದವರ ರಕ್ಷಣೆ ಮಾಡುವಲ್ಲಿ ಪ್ರಮುಖವಾದ ಪಾತ್ರವನ್ನ ವಹಿಸುತ್ತದೆ ಎಂದು ಅವರು ಹೇಳಿದ್ದಾರೆ. ಇನ್ನು ಬಂದಿರುವ ಮಾಹಿತಿಯ ಪ್ರಕಾರ ಕರೋನ ಮಾತ್ರೆಗಳ ಬೆಲೆ ಪ್ರತಿ ಮಾತ್ರೆಗೆ 35 ರೂಪಾಯಿ ಎಂದು ಹೇಳಲಾಗುತ್ತಿದೆ. ಕರೋನ ಮಾತ್ರೆಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.