ಕರೋನ ಮಹಾಮಾರಿ ದೇಶದಲ್ಲಿ ಎಷ್ಟು ವಂತರವನ್ನ ಸೃಷ್ಟಿ ಮಾಡಿದೆ ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ ಎಂದು ಹೇಳಬಹುದು. ಎರಡು ವರ್ಷದ ಹಿಂದೆ ಕಾಣಿಸಿಕೊಂಡ ಈ ಕರೋನ ಮಹಾಮಾರಿ ಲಕ್ಷಾಂತರ ಜೀವವನ್ನ ಬಲಿ ತೆಗೆದುಕೊಂಡಿದೆ ಮತ್ತು ಈಗಲೂ ಅದೆಷ್ಟೋ ಜನರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟವನ್ನ ಮಾಡುತ್ತಿದ್ದಾರೆ. ಇನ್ನು ದೇಶದಲ್ಲಿ ಕರೋನ ಮಹಾಮಾರಿಗೆ ಸಂಬಂಧಿಸಿದಂತೆ ಲಸಿಕೆಯನ್ನ ಬಹಳ ವೇಗವಾಗಿ ನೀಡಲಾಗುತ್ತಿದ್ದು ಕೋಟ್ಯಂತರ ಜನರು ಕರೋನ ಮಹಾಮಾರಿ ಲಸಿಕೆಯನ್ನ ಪಡೆದುಕೊಂಡಿದ್ದಾರೆ ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ದೇಶದಲ್ಲಿ ಮಕ್ಕಳಿರುವ ಪ್ರತಿಯೊಂದು ಮನೆಯಲ್ಲಿ ಕಾಡುತ್ತಿರುವ ಭಯ ಏನು ಅಂದರೆ ಅದೂ ಮಕ್ಕಳಿಗೆ ಕರೋನ ಸೋಂಕು ತಾಗುತ್ತದೆ ಅನ್ನುವುದು ಆಗಿದೆ.
ಮಕ್ಕಳಿಗೆ ಕರೋನ ಲಸಿಕೆಯನ್ನ ಯಾವ ನೀಡಲಾಗುತ್ತದೆ ಎಂದು ಪೋಷಕರು ಸರ್ಕಾರಕ್ಕೆ ಪದೇ ಪದೇ ಪ್ರಶ್ನೆಯನ್ನ ಕೇಳುತ್ತಿದ್ದು ಈಗ ಸರ್ಕಾರ ಅದಕ್ಕೆ ಉತ್ತರವನ್ನ ಕೊಟ್ಟಿದೆ. ಹೌದು ಮಕ್ಕಳಿಗೆ ಕರೋನ ಲಸಿಕೆ ಸಿದ್ದವಾಗಿದ್ದು ಆದಷ್ಟು ಬೇಗ ಮಕ್ಕಳಿಗೆ ಕರೋನ ಲಸಿಕೆಯನ್ನ ನೀಡಲಾಗುತ್ತದೆ ಎಂದು ಆರೋಗ್ಯ ಈಗ ಹೇಳಿದೆ. ಹೌದು ಸ್ನೇಹಿತರೆ ಮಕ್ಕಳಿಗೆ ಕರೋನ ಲಸಿಕೆ ಸಿದ್ದವಾಗಿದ್ದು ಇನ್ನೇನು ಕೆಲವೇ ದಿನಗಳಲ್ಲಿ ಮಕ್ಕಳಿಗೆ ಲಸಿಕೆಯನ್ನ ನೀಡಲಾಗುತ್ತದೆ. ಹಾಗಾದರೆ ಯಾವ ಮಕ್ಕಳಿಗೆ ಲಸಿಕೆಯನ್ನ ನೀಡಲಾಗುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯನ್ನ ಮಕ್ಕಳಿಗೆ ಪ್ರತಿಯೊಬ್ಬ ಪೋಷಕರಿಗೆ ತಲುಪಿಸಿ.
DCGI ತುರ್ತು ಬಳಕೆಗಾಗಿ ಭಾರತ್ ಬಯೋಟೆಕ್ ನ ಕೊವಾಕ್ಸಿನ್ (Covaxin for Children) ಅನ್ನು 2 ವರ್ಷದಿಂದ 18 ವರ್ಷದೊಳಗಿನ ಮಕ್ಕಳಿಗೆ ಅನುಮೋದಿಸಿದೆ. ಭಾರತದಲ್ಲಿ ಮಕ್ಕಳಿಗೆ ಅನುಮೋದನೆ ಪಡೆದ ಮೊದಲ ಲಸಿಕೆ ಇದಾಗಿದೆ. ಭಾರತ್ ಬಯೋಟೆಕ್ (Bharat Biotech) ಮಕ್ಕಳ ಮೇಲೆ ಲಸಿಕೆಯ ಪ್ರಯೋಗಗಳನ್ನು ಸೆಪ್ಟೆಂಬರ್‌ನಲ್ಲಿ ಪೂರ್ಣಗೊಳಿಸಿತ್ತು. ಕ್ಲಿನಿಕಲ್ ಪ್ರಯೋಗಗಳಲ್ಲಿ ಇದು ಸುಮಾರು 78 ಪ್ರತಿಶತದಷ್ಟು ಪರಿಣಾಮಕಾರಿ ಎಂದು ಸಾಬೀತಾಗಿದೆ. ಇನ್ನು ಲಸಿಕೆ ಮಕ್ಕಳ ಮೇಲೆ ಬಹುತೇಕ ವಯಸ್ಕರಂತೆ ಪರಿಣಾಮವನ್ನ ಬೀರಲಿದೆ ಎಂದು ಕಂಪನಿ ಹೇಳಿದೆ. DCGI ಮೌಲ್ಯಮಾಪನದ ನಂತರ ಕಂಪನಿಯಿಂದ ಹೆಚ್ಚುವರಿ ಡೇಟಾವನ್ನು ಕೇಳಿತ್ತು. ನಿನ್ನೆ ತಜ್ಞರ ಸಮಿತಿಯೂ ಈ ಕುರಿತಂತೆ ಸಭೆ ನಡೆಸಿತ್ತು.
ಇಂದು ನಡೆದ ಸಭೆಯಲ್ಲಿ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಕೋವಾಕ್ಸಿನ್ (Covaxin) ಹಾಕಲು ಅನುಮತಿ ನೀಡಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಂಕಿಅಂಶಗಳ ಪ್ರಕಾರ ಇದುವರೆಗೆ ದೇಶಾದ್ಯಂತ 95 ಕೋಟಿ 89 ಲಕ್ಷ 78 ಸಾವಿರದ 49 ಡೋಸ್ ಕೊರೊನಾ ಲಸಿಕೆ ನೀಡಲಾಗಿದೆ ಮತ್ತು ಭಾರತದಲ್ಲಿ 68 ಕೋಟಿ 65 ಲಕ್ಷ 80 ಸಾವಿರದ 570 ಜನರು ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡಿದ್ದರೆ 27 ಕೋಟಿ 23 ಲಕ್ಷ 97 ಸಾವಿರದ 479 ಜನರು ಲಸಿಕೆಯ ಎರಡೂ ಡೋಸ್ ಪಡೆದಿದ್ದಾರೆ. ಸ್ನೇಹಿತರೆ ಈ ಮಾಹಿತಿಯನ್ನ ಮಕ್ಕಳಿರುವ ಪ್ರತಿಯೊಬ್ಬ ಪೋಷಕರಿಗೆ ತಲುಪಿಸಿ.