Marburg Virus: ಕೊರೊನಾಗಿಂತಲೂ ಅಪಾಯಕಾರಿ ವೈರಸ್ ಆಫ್ರಿಕಾದಲ್ಲಿ ಪತ್ತೆ, ಎಚ್ಚರ ಅಂದ WHO

Marburg Virus Disease: ವಿಶ್ವದಾದ್ಯಂತ ತನ್ನ ಛಾಪನ್ನು ಹರಡಿದ ಕೊರೊನಾ ವೈರಸ್ (Corona Virus) ಭಯ ಇನ್ನು ಕೆಲವು ಜನರಿಗೆ ಹೋಗಿಲ್ಲ. ಎರಡು ವರ್ಷದ ಹಿಂದೆ ಕಾಣಿಸಿಕೊಂಡ ಕೊರೊನಾ ವೈರಸ್ ಎಲ್ಲಡೆ ತನ್ನ ಶಕ್ತಿಯನ್ನು ಹರಡಿ ಜನರಲ್ಲಿ ಭಯಬೀತರಾಗುವಂತೆ ಮಾಡಿತು.

ಇದೀಗ ಕೊರೊನಾ ವೈರಸ್ ಸುದ್ದಿಯಲ್ಲಿದೆ ಜನರು ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದಾರೆ ಎನ್ನುವಷ್ಟರಲ್ಲಿ ಇನ್ನೊಂದು ವೈರಸ್ ಲಗ್ಗೆ ಇಡುತ್ತಿದೆ.

A virus more dangerous than Corona has been detected in Africa, warns WHO
Image Credit: moneycontrol

ಆಫ್ರಿಕಾದಲ್ಲಿ ಹುಟ್ಟಿಕೊಂಡಿತು ಹೊಸ ವೈರಸ್
ಕೊರೊನಾ ವೈರಸ್ ವಿನಾಶ ಇನ್ನು ಮುಗಿದಿಲ್ಲ ಎನ್ನುವಷ್ಟರಲ್ಲಿ ಆಫ್ರಿಕಾದ ಈಕ್ವಾಟೋರಿಯಲ್ ಗಿನಿಯಾದಲ್ಲಿ ಹೊಸ ವೈರಸ್ ಕದತಟ್ಟಿದೆ. ಮಾರ್ಬರ್ಗ್ ಹೆಸರಿನ ಈ ವೈರಸ್ ಸೋಂಕಿನಿಂದ ಅಲ್ಲಿ ಇದುವರೆಗೆ 9 ಜನರು ಸಾವನ್ನಪ್ಪಿದ್ದಾರೆ ಮತ್ತು ಇದು ಕೋವಿಡ್ 19 ಗಿಂತ ಹೆಚ್ಚು ಅಪಾಯಕಾರಿಯಾಗಿದೆ ಎನ್ನಲಾಗುತ್ತಿದೆ.

Marburg virus originated in South Africa
Image Credit: healthline

ಮಾರ್ಬರ್ಗ್ ವೈರಸ್ ನ ಲಕ್ಷಣಗಳು
ಮಾರ್ಬರ್ಗ್ ವೈರಸ್ ನ ಲಕ್ಷಣಗಳು ಎಬೋಲಾ ವೈರಸ್ ನಂತೆಯೇ ಇವೆ . ಈಕ್ವಟೊರಿಯಲ್ ಗಿನಿಯಾದಲ್ಲಿ ಕಂಡುಬಂದಿರುವ ಈ ಮಾರ್ಬರ್ಗ್ ವೈರಸ್ ನ ಲಕ್ಷಣಗಳು ಎಬೋಲಾ ವೈರಸ್ ನಂತೆಯೇ ಇವೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ಇದರಿಂದ ಶೋಕಿಗೆ ಒಳಗಾಗಿದ್ದಾರೆ ಎನ್ನಲಾಗುತ್ತಿದೆ.

ಮಾರ್ಬರ್ಗ್ ವೈರಸ್ ನ ಸಾಮಾನ್ಯ ಲಕ್ಷಣಗಳು ಜ್ವರ ಮತ್ತು ಎದೆ ನೋವು. ಇದು ಎಷ್ಟು ಅಪಾಯಕಾರಿ ಅಂದರೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆಯದಿದ್ದರೆ ರೋಗಿಯ ಸಾವು ಕೂಡ ಸಂಭವಿಸುವ ಸಾಧ್ಯತೆಯಿದೆ.

Join Nadunudi News WhatsApp Group

Common symptoms of Marburg virus are fever and chest pain. It is so dangerous that if not treated on time, the patient may even die.
Image Credit: standard

ಮಾರ್ಬರ್ಗ್ ವೈರಸ್ ತುಂಬಾ ಅಪಾಯಕಾರಿ ಮತ್ತು ಅದರ ಸೋಂಕಿನ ನಂತರ ಸಾವಿನ ಪ್ರಮಾಣವು ಶೇ. 88 ರಷ್ಟಕ್ಕೆ ಹೋಗಬಹುದು ಎನ್ನಲಾಗಿದೆ.

ಮಾರ್ಬರ್ಗ್ ವೈರಸ್ ಸೋಂಕು ವೇಗವಾಗಿ ಹರಡುತ್ತದೆ ಎಂದು WHO ನ ಪ್ರಾದೇಶಿಕ ನಿರ್ದೇಶಕ ಡಾ. ಮಾತಾಡಿಶಿವೋ ಮೊಯಿತಿ, ವೈರಸ್ ಹರಡುವುದನ್ನು ತಡೆಯಲು ಅನೇಕ ವ್ಯವಸ್ಥೆಗಳನ್ನು ಮಾಡುತ್ತಿದ್ದಾರೆ.

Join Nadunudi News WhatsApp Group