Food Ban: ರಾಜ್ಯದಲ್ಲಿ ಇನ್ನಮುಂದೆ ಸಿಗಲ್ಲ ಗೋಬಿ ಮಂಚೂರಿ ಮತ್ತು ಬೋಂಬೆ ಮಿಠಾಯಿ, ಬ್ಯಾನ್ ಮಾಡಿದ ಸರ್ಕಾರ.

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲು ಕಾರಣವೇನು...?

Cotton Candy And Gobi Manchurian Ban In India: ಭಾರತೀಯರ ಅಭಿರುಚಿಗೆ ತಕ್ಕಂತೆ ವಿವಿಧ ಖಾದ್ಯಗಳಿವೆ. ಎಲ್ಲರು ಕೂಡ ಒಂದೊಂದು ಖಾದ್ಯವನ್ನು ಇಷ್ಟಪಟ್ಟು ಸವಿಯುತ್ತಾರೆ. ಅದರಲ್ಲೂ ಅನೇಕ ಖಾದ್ಯಗಳು ಸಕ್ಕತ್ ಫೇಮಸ್ ಆಗಿರುತ್ತದೆ. ಸಾಮಾನ್ಯವಾಗಿ ಜನರು ಫಾಸ್ಟ್ ಫುಡ್ ಗಳನ್ನೂ ತಿನ್ನಲು ಇಷ್ಟಪಡುತ್ತಾರೆ. ಫಾಸ್ಟ್ ಫುಡ್ ಐಟೆಮ್ ಗಳಲ್ಲಿ ಹೆಚ್ಚಾಗಿ ಜನರು ಗೋಬಿ ಮಂಚುರಿಯನ್ನು ಇಷ್ಟಪಡುತ್ತಾರೆ. ಗೋಬಿ ಮಂಚೂರಿಯ ಬಗ್ಗೆ ಹೆಚ್ಚು ಹೇಳುವ ಅಗತ್ಯವಿಲ್ಲ.

ಭಾರತದಲ್ಲಿ ಮಂಚೂರಿ ಬಾರಿ ಫೇಮಸ್ ಆಗಿದೆ. ಹೆಚ್ಚು ಫೇಮಸ್ ಇರುವ ಈ ಗೋಬಿ ಮಂಚೂರಿ ಇನ್ನುಮುಂದೆ ತಿನ್ನಲು ಸಿಗಲ್ಲ ಎಂದರೆ ನೀವು ನಂಬುತ್ತೀರಾ…? ಸದ್ಯ ರಾಜ್ಯದಲ್ಲಿ ಈ ಎರಡು ಜನಪ್ರಿಯ ಖಾದ್ಯಗಳನ್ನು ನಿಷೇಧಿಸುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

Cotton Candy And Gobi Manchurian Ban
Image Credit: Publictv

ರಾಜ್ಯದಲ್ಲಿ ಇನ್ನಮುಂದೆ ಸಿಗಲ್ಲ ಗೋಬಿ ಮಂಚೂರಿ ಮತ್ತು ಬೋಂಬೆ ಮಿಠಾಯಿ
ಭಾರತದ ಜನಪ್ರಿಯ ಖಾದ್ಯಗಳಾದ ಗೋಬಿ ಮಂಚೂರಿ ಹಾಗೂ ಕಾಟನ್ ಕ್ಯಾಂಡಿಯನ್ನು ನಿಷೇದಿಸಲಾಗಿದೆ ಎನ್ನುವ ಬಗ್ಗೆ ವರದಿಯಾಗಿದೆ. ನೆರೆಯ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ನು ನಿಷೇದಿಸಲಾಗಿದೆ. ನಿಷೇಧಿತ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿಯನ್ ಈಗ ರಾಜ್ಯದಲ್ಲೂ ನಿಷೇಧವಾಗುವ ಸಾಧ್ಯತೆ ಇದೆ.

ಈ ನಿಟ್ಟಿನಲ್ಲಿ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಕಾಟನ್ ಕ್ಯಾಂಡಿ ಮತ್ತು ಗೋಬಿ ಮಂಚೂರಿ ಮಾದರಿಗಳನ್ನು ಸಂಗ್ರಹಿಸಿದ್ದು, ಅದರಲ್ಲಿ ಬಳಸಿದ ಕೃತಕ ಬಣ್ಣಗಳಲ್ಲಿ ಹಾನಿಕಾರಕ ರಾಸಾಯನಿಕಗಳಿರುವುದು ಪತ್ತೆಯಾಗಿದೆ. ಈ ವರದಿ ಆರೋಗ್ಯ ಇಲಾಖೆಗೆ ತಲುಪಿದ್ದು, ಇದನ್ನು ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ.

Cotton Candy Ban In karnataka
Image Credit: The Hindu

ಗೋಬಿ ಮಂಚೂರಿ ಮತ್ತು ಕಾಟನ್ ಕ್ಯಾಂಡಿಯನ್ನು ಬ್ಯಾನ್ ಮಾಡಲು ಕಾರಣವೇನು…?
ಕಾಟನ್ ಕ್ಯಾಂಡಿಯಲ್ಲಿ ಹಾನಿಕಾರಕ ‘ರೋಡಮೈನ್-ಬಿ’ ಮತ್ತು ಗೋಬಿ ಮಂಚೂರಿಯಲ್ಲಿ ‘ಸನ್‌ ಸೆಟ್ ಯೆಲ್ಲೋ’ ಮತ್ತು ‘ಟಟ್ರಾಜಿನ್’ ಪತ್ತೆಯಾದ ನಂತರ ಪ್ರಸಿದ್ಧ ಆಹಾರಗಳೆರಡನ್ನೂ ನಿಷೇಧಿಸಲು ಆರೋಗ್ಯ ಇಲಾಖೆ ನಿರ್ಧರಿಸಿದೆ. ಆಹಾರ ಮತ್ತು ಸುರಕ್ಷತಾ ಇಲಾಖೆಯ ವರದಿ ಆಧರಿಸಿ ರಾಜ್ಯ ಸರ್ಕಾರ ಈ ಎರಡು ಖಾದ್ಯಗಳನ್ನು ನಿಷೇಧಿಸಿ ಆದೇಶ ಹೊರಡಿಸುವ ಸಾಧ್ಯತೆ ಇದೆ. ಕಾಟನ್ ಕ್ಯಾಂಡಿಯಲ್ಲಿ ರೋಡಮೈನ್-ಬಿ ಇರುವುದು ದೃಢಪಟ್ಟಿದೆ. ಹಾಗಾಗಿ ನಿಷೇಧ ಹೇರಲಾಗಿದೆ. ನಿತ್ಯ ಸೇವಿಸುವುದರಿಂದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

Join Nadunudi News WhatsApp Group

Gobi Manchurian Ban
Image Credit: Slurrp

Join Nadunudi News WhatsApp Group