Couple Scheme: ಅಂಚೆ ಕಚೇರಿಯಲ್ಲಿ ಗಂಡ ಹೆಂಡತಿಗೆ ಸಿಗಲಿದೆ 25 ಲಕ್ಷ, ಉತ್ತಮ ಉಳಿತಾಯ ಯೋಜನೆ.
ಪೋಸ್ಟ್ ಆಫೀಸ್ ನಲ್ಲಿ ಗಂಡ ಹೆಂಡತಿ ಒಟ್ಟಾಗಿ ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ ರೂಪಾಯಿಯ ತನಕ ಲಾಭ ಸಿಗಲಿದೆ.
Post Office saving Scheme For Couples: ಅಂಚೆ ಕಚೇರಿಯು (Post Office) ಜನಸಾಮಾನ್ಯರಿಗಾಗಿ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತಲೇ ಇದೆ. ಸಾರ್ವಜನಿಕರು ಅಂಚೆ ಕಚೇರಿಯ ಸಾಕಷ್ಟು ಯೋಜನೆಗಳ ಲಾಭವನ್ನು ಪಡೆಯುತ್ತಾರೆ.
ಅಂಚೆ ಕಚೇರಿಯಲ್ಲಿನ ಹೂಡಿಕೆಯು ಲಾಭದಾಯಕ ಹಾಗೂ ಸುರಕ್ಷಿತವಾಗಿರುತ್ತದೆ. ಇದೀಗ ಅಂಚೆ ಕಚೇರಿ ಹಿರಿಯ ನಾಗರೀಕರಿಗಾಗಿ ಹೊಸ ಯೋಜನೆಯನ್ನು ಪರಿಚಯಿಸಿದೆ. ಈ ಬಗ್ಗೆ ಮಾಹಿತಿ ತಿಳಿಯೋಣ.
ಜ್ಯೇಷ್ಠ ನಾಗರಿಕ ಉಳಿತಾಯ ಯೋಜನೆ
ಅಂಚೆ ಕಚೇರಿಯಲ್ಲಿ ಸಾಕಷ್ಟು ಸಣ್ಣ ಉಳಿತಾಯ ಯೋಜನೆಗಳಿವೆ. ನೀವು ಅಂಚೆ ಕಚೇರಿಯ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸಿದ್ದಲ್ಲಿ, ಜ್ಯೇಷ್ಠ ನಾಗರಿಕ ಉಳಿತಾಯ ಯೋಜನೆಯು ನಿಮಗೆ ಸಾಕಷ್ಟು ಲಾಭವನ್ನು ತಂದುಕೊಡಲಿದೆ. ಹೆಚ್ಚಿನ ಬಡ್ಡಿದರವನ್ನು ಈ ಯೋಜನೆಯಲ್ಲಿ ಪಡೆಯಬಹುದು.
ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಬಡ್ಡಿದರವು ಏಪ್ರಿಲ್ 1 ರಿಂದ ಏರಿಕೆಯಾಗಿದೆ. ಈ ಯೋಜನೆಯ ಮುಕ್ತಾಯದ ಅವಧಿಯು ಐದು ವರ್ಷದ್ದಾಗಿದೆ. ಈ ಯೋಜನೆಯಡಿಯಲ್ಲಿ ಶೇ. 8.2 ರಷ್ಟು ಬಡ್ಡಿಯನ್ನು ಪಡೆಯಬಹುದು. ಈ ಯೋಜನೆಯಲ್ಲಿ ಹಿರಿಯ ನಾಗರಿಕರು 30 ಲಕ್ಷದ ವರೆಗೆ ಹಣವನ್ನು ಹೂಡಿಕೆ ಮಾಡಬಹುದು.
ದಂಪತಿಗಳು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಸಿಗಲಿದೆ 25 ಲಕ್ಷ
ಒಂದೇ ಮನೆ ಪತಿ -ಪತ್ನಿ ಇಬ್ಬರು ಕೂಡ ಈ ಜ್ಯೇಷ್ಠ ನಾಗರೀಕ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ತಲಾ ಇಬ್ಬರು 12.3 ಲಕ್ಷ ರೂಪಾಯಿಯನ್ನು ಪಡೆಯಬಹುದು. ಅಂದರೆ ದಂಪತಿಗಳು ಇಬ್ಬರು 25 ಲಕ್ಷ ಹಣವನ್ನು ಪಡೆಯಬಹುದು.
ಹೂಡಿಕೆಯ ಮೊತ್ತದ ಮೇಲೆ ಬಡ್ಡಿದರವು ಅವಲಂಭಿಸಿರುತ್ತದೆ. ಒಂದು ವೇಳೆ ನೀವು ಈ ಯೋಜನೆಯಲ್ಲಿ 30 ಲಕ್ಷ ರೂ ಹೂಡಿಕೆ ಮಾಡಿದರೆ, ಐದು ವರ್ಷದಲ್ಲಿ ಶೇ. 8.2 ದರದಲ್ಲಿ ಮೆಚ್ಯುರಿಟಿ ಪಡೆಯಬಹುದು. ನೀವು ಐದು ವರ್ಷದ ನಂತರ 12 ಲಕ್ಷಕ್ಕೂ ಹೆಚ್ಚಿನ ಮೊತ್ತವನ್ನು ಬಡ್ಡಿ ರೂಪದಲ್ಲಿ ಪಡೆಯಬಹುದು.