Finance: ಪತಿ ಪತ್ನಿ ಇಬ್ಬರಿಗೂ ಗ್ರಹಲಕ್ಷ್ಮಿಗಿಂತ ಹೆಚ್ಚಿಗೆ ಹಣ ಸಿಗುವ ಇನ್ನೊಂದು ಯೋಜನೆ, ಕೇಂದ್ರದ ಘೋಷಣೆ

ಗಾಂಡ ಹೆಂಡತಿಗೆ ಈ ಯೋಜನೆಯಲ್ಲಿ ಸಿಗಲಿದೆ ಪ್ರತಿ ತಿಂಗಳು 10 ಸಾವಿರ ಪಿಂಚಣಿ.

Couple Pension Scheme: ಕೇಂದ್ರದ ಮೋದಿ ಸರ್ಕಾರ ದೇಶದಲ್ಲಿ ಜನಸಮಾನ್ಯರ ಆರ್ಥಿಕ ನೆರವಿಗಾಗಿ ವಿವಿಧ ಯೋಜನೆಯನ್ನು ಪರಿಚಯಿಸುತ್ತಿದೆ. ಕೇಂದ್ರ ಸರ್ಕಾರದ ಯೋಜನೆಗಳನ್ನು ದೇಶದ ಲಕ್ಷಾಂತರದ ಜನರು ಸದುಪಯೋಗ ಪಡಿಸಿಕೊಳ್ಳುತ್ತಿದ್ದಾರೆ.

ಭಾರತ ಸರ್ಕಾರ ಜನರ ಆರ್ಥಿಕ ಸ್ಥಿರತೆ ಕಾಪಾಡಲು ಸಾಕಷ್ಟು ಯೋಜನೆಯನ್ನು ರೂಪಿಸಿದೆ. ಕೇಂದ್ರ ಸರ್ಕಾರ ವಿವಿಧ ರೀತಿಯ ಪಿಂಚಣಿ ಯೋಜನೆನ್ನು ಪರಿಚಯಿಸುವ ಮೂಲಕ ಹಿರಿಯ ನಾಗರಿಕರಿಗೂ ಕೂಡ ಆರ್ಥಿಕವಾಗಿ ನೆರವಾಗುತ್ತಿದೆ. ಕೇಂದ್ರ ಈ ಯೋಜನೆಯಡಿಯಲ್ಲಿ ದಂಪತಿಗಳು ಮಾಸಿಕ ಪಿಂಚಣಿಯ ಲಾಭವನ್ನು ಪಡೆಯಬಹುದು.

 

Atal Pension Scheme
ಕೇಂದ್ರ ಸರ್ಕಾರದ Atal Pension Scheme ಅಡಿಯಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಮಾಸಿಕ ಪಿಂಚಣಿ ಲಭ್ಯವಾಗಲಿದೆ. ಈ ಯೋಜನೆಯಲ್ಲಿ ಹೂಡಿಕೆದಾರರು 60 ವರ್ಷ ವಯಸ್ಸಿನವರಾದಾಗ ಪ್ರತಿ ತಿಂಗಳು 1,000 ರೂ. ನಿಂದ 5,000 ರೂ.ವರೆಗೆ ಪಿಂಚಣಿ ಪಡೆಯಬಹುದು.

ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ಇನ್ನು 18 ವರ್ಷದಿಂದ 40 ವರ್ಷದೊಳಗಿನ ಯಾವುದೇ ವ್ಯಕ್ತಿ ಈ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. 1,000 ರೂ.ನಿಂದ 5,000 ರೂ.ವರೆಗಿನ ಪಿಂಚಣಿ ಪಡೆಯಲು ಪ್ರತಿ ತಿಂಗಳು 42 ರಿಂದ 210 ರೂ. ಹೂಡಿಕೆ ಅಗತ್ಯವಾಗಿದೆ.

Join Nadunudi News WhatsApp Group

couples scheme new india
Image Credit: thehindubusinessline

 

ಕೇವಲ 210 ರೂ. ಹೂಡಿಕೆಯಲ್ಲಿ ಪ್ರತಿ ತಿಂಗಳು 10 ಸಾವಿರ ರೂ ಪಿಂಚಣಿ
ಅಟಲ್ ಪಿಂಚಣಿ ಯೋಜನೆಯಲ್ಲಿ ನೀವು ಪ್ರತಿ ತಿಂಗಳು 210 ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ನಿವೃತ್ತಿಯ ನಂತರ ನಿಮಗೆ ಪ್ರತಿ ತಿಂಗಳು 5 ಸಾವಿರ ರೂಪಾಯಿ ಪಿಂಚಣಿ ಸಿಗುತ್ತದೆ. ದಂಪತಿಗಳಿಬ್ಬರು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಮಾಸಿಕ 10,000 ಹಣವನ್ನು ಪಡೆಯಬಹುದು. ಈ ಯೋಜನೆಗಳಲ್ಲಿ 210 ರೂ.ಗಿಂತ ಕಡಿಮೆ ಹೂಡಿಕೆ ಮಾಡಬಹುದು.

ನಿಮ್ಮ ಹೂಡಿಕೆಗೆ ಅನುಗುಣವಾಗಿ ನೀವು ಪ್ರತಿ ತಿಂಗಳು ಪಡೆಯುವ ಪಿಂಚಣಿಯ ಹಣ ನಿರ್ಧಾರವಾಗುತ್ತದೆ. ಕನಿಷ್ಠ 20 ವರ್ಷಗಳವರೆಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕು. ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಮೊಬೈಲ್ ಸಂಖ್ಯೆ ಮತ್ತು ಉಳಿತಾಯ ಖಾತೆ ಇತ್ಯಾದಿಗಳು ಅವಶ್ಯಕ. ಬ್ಯಾಂಕ್ ಖಾತೆಯಿಂದ ಸ್ವಯಂ ಡೆಬಿಟ್ ನ ಮೂಲಕ ನೀವು ನೇರವಾಗಿ ಹಣವನ್ನು ಪಡೆಯಬಹುದು.

Join Nadunudi News WhatsApp Group