Court Regulations: ಸಾಮಾಜಿಕ ಜಾಲತಾಣ ಬಳಸುವವರಿಗೆ ಕೋರ್ಟ್ ಹೊಸ ತೀರ್ಪು, ಧಿಡೀರ್ ಆದೇಶ

ಸಾಮಾಜಿಕ ಜಾಲತಾಣಗಳು ಆಗಾಗ ವೈರಲ್ ಆಗುತ್ತಿದ್ದು ಇದೀಗ ಈ ಬಗ್ಗೆ ಒಂದು ಸ್ಪಷ್ಟ ನಿರ್ಣಯವನ್ನು ಮುಂಬೈಯಿ ಉಚ್ಛ ನ್ಯಾಯಾಲಯ ತಿಳಿಸಿದೆ.

Court Regulations Social Media: ಇಂದು ಸಾಮಾಜಿಕ ಜಾಲತಾಣದಲ್ಲಿ ಫೇಮಸ್ ಆಗಬೇಕು ಎಂಬ ಉದ್ದೇಶಕ್ಕಾಗಿ ಅನೇಕ ಪೋಸ್ಟ್(Post) ಅನ್ನು ಆಗಾಗ ಶೇರ್ ಮಾಡಿಕೊಳ್ಳುತ್ತಾ ಇರುತ್ತಾರೆ. ಕೆಲವೊಂದು ಧಾರ್ಮಿಕ ಭಾವನೆಗೆ ಧಕ್ಕೆ ಬಂದರೆ ಇನ್ನು ಕೆಲವೊಂದು ಅಶ್ಲಿಲ ಮತ್ತು ವ್ಯಕ್ತಿ ಮಾನಹಾನಿ ಮಾಡುವ ಅನೇಕ ಸಂಗತಿಗಳ ಪೋಸ್ಟ್ ಸಾಮಾಜಿಕ ಜಾಲತಾಣಗಳು ಆಗಾಗ ವೈರಲ್ ಆಗುತ್ತಿದ್ದು ಇದೀಗ ಈ ಬಗ್ಗೆ ಒಂದು ಸ್ಪಷ್ಟ ನಿರ್ಣಯವನ್ನು ಮುಂಬೈಯಿ ಉಚ್ಛ ನ್ಯಾಯಾಲಯ ತಿಳಿಸಿದೆ.

ಇತ್ತೀಚೆಗೆ ವಾಟ್ಸ್ ಆ್ಯಪ್(Whatsapp) , ಟ್ವಿಟ್ಟರ್ ಎಕ್ಸ್ ಸೇರಿದಂತೆ ಇನ್ನಿತರ ಆ್ಯಪ್ ಗಳಿಗೆ ಶಾಂತಿ ಸಂಬಂಧ ಅಭಿವೃದ್ಧಿ ಪಡಿಸಲು ಸತತ ಪ್ರಯತ್ನ ಪಡುತ್ತಲಿದ್ದು ಇದರ ಬೆನ್ನಲ್ಲೇ ಸಾಮಾಜಿಕ ಶಾಂತಿ ಹಾಳು ಗೆಡವುವ ಅನೇಕ ಪೋಸ್ಟ್ ಹಂಚಿಗೆ ಬಗ್ಗೆ ಮಾಹಿತಿ ವೈರಲ್ ಆಗಿದೆ. ಹಾಗಾಗಿ ಈ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್ ಆಗುವ ಬಗ್ಗೆ ಅನೇಕ ವಿರೋಧ ಸಹ ವ್ಯಕ್ತವಾಗಿದ್ದಕ್ಕೆ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.

Court New Rules
Image Courtesy: Mint

ಪ್ರಕರಣ ಬಯಲು

ಇತ್ತೀಚೆಗೆ ಅನುಮತಿ ಇಲ್ಲದೆ 500 ಅಧಿಕ ಮಂದಿ ಮುಸ್ಲಿಂ ಮರು ಸಮಾವೇಶ ಮಾಡಿದ್ದಾರೆ. ಸಮಾವೇಶಕ್ಕೆ ಸಂಬಂಧಿಸಿದ್ದ ವೀಡಿಯೋ ಒಂದನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿಕೊಂಡಿದ್ದು ಅದಕ್ಕೆ ಶೇರ್ ಮಾಡಿದ್ದ ಮುಹಮ್ಮದ್ ಇಮ್ರಾನ್ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ. ತನ್ನ ವಿರುದ್ಧ ಮಾಡಿದ್ದ ಆರೋಪಗಳನ್ನು ರದ್ದುಗೊಳಿಸುವಂತೆ ಮುಹಮ್ಮದ್ ಇಮ್ರಾನ್ ಅವರು ಮೇಲ್ಮನವಿ ಅರ್ಜಿ ಸಲ್ಲಿಸಿ ಅದರಲ್ಲಿ ಆತ ಅಪರಾಧ ಮಾಡಿದ್ದಾನೆ ಎಂದು ತೋರಿಸಲು ಸಾಕ್ಷಿ ಇಲ್ಲ ಇದು ಅಪರಾಧ ಅಲ್ಲ ಎಂದು ಇತನ ಪರ ವಕಿಲರು ವಾದಿಸಿದ್ದು ಸದ್ಯ ಅಕ್ಟೋಬರ್ 18ರಂದು ಆದೇಶ ಹೊರಡಿಸಿದೆ.

ಆದರೆ ಕೇಸ್ ದಾಖಲಿಸಿದ್ದ ಪೊಲೀಸರು ಸಮಾಜದ ಶಾಂತಿ ಧಕ್ಕೆ ಆಗಿದೆ ಎಂದು ಆತನ ವಿರುದ್ಧ ಆರೋಪ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ಪೋಸ್ಟ್ ಅನ್ನು ಅನೇಕರು ಲೈಕ್ ಮಾಡಿದ್ದಾರೆ ಎಂದು ಸಹ ದೂರಿದ್ದಾರೆ. ಆದರೆ ಮುಹಮ್ಮದ್ ಅವರು ಇದನ್ನು ಹಂಚಿಕೊಂಡಿದ್ದಕ್ಕೆ ಯಾವುದೇ ನಿಖರ ಸಾಕ್ಷಿ ಲಭ್ಯ ಆಗಿಲ್ಲ‌. ಮೇಲ್ನೋಟಕ್ಕೆ ಆತ ಬೇರೆ ಅವರ ಪೋಸ್ಟ್ ಗೆ ಲೈಕ್ ಮಾಡಿದ್ದು ಮಾತ್ರ ತಿಳಿದಿದ್ದು ಈ ಬಗ್ಗೆ ಮುಂಬೈ ಹೈ ಕೋರ್ಟ್ ತೀರ್ಪು ನೀಡಿದೆ.

Join Nadunudi News WhatsApp Group

Court New Rules
Image Source: India Today

ತೀರ್ಪು ಏನಿದೆ?

ಈ ಬಗ್ಗೆ ತೀರ್ಪುನೀಡಿದ್ದ ಮುಂಬೈ ಉಚ್ಚ ನ್ಯಾಯಾಲಯವು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದ ಪೋಸ್ಟ್ ಗೆ ಲೈಕ್ ನೀಡುವುದು ಅಪರಾಧ ಅಲ್ಲ. ಈ ಬಗ್ಗೆ IT ಕಾಲಂ 67 ರ ಅಡಿಯಲ್ಲಿ ಸಹ ಉಲ್ಲೇಖಿಸಿದ್ದನ್ನು ಈ ಸಂದರ್ಭದಲ್ಲಿ ಎತ್ತಿ ಹಿಡಿಯಲಾಗಿದೆ. ಇಲ್ಲಿ ಅಶ್ಲಿಲ್ಲ ಕಮೆಂಟ್ ಇತ್ಯಾದಿ ಅಪರಾಧ ಎಂದು ಪರಿಗಷಿತವಾಗಿದೆಯೇ ಹೊರತು ಯಾವುದೇ ಪ್ರಚೋದನ ಕಾರಿ ವಿಷಯಗಳಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ. ಹಾಗಾಗಿ ಇದು ಅಪರಾಧ ಅಲ್ಲ ಎಂದು ತೀರ್ಪು ಹೊರಡಿಸಿದೆ.

Join Nadunudi News WhatsApp Group