Cash Withdrawal: ಕ್ರೆಡಿಟ್ ಕಾರ್ಡ್ ಬಳಸಿ ATM ನಲ್ಲಿ ಹಣ ಪಡೆಯುವವರಿಗೆ ಹೊಸ ನಿಯಮ, ಜಾರಿಗೆ ಬಂತು ಹೊಸ ರೂಲ್ಸ್.
ಸಿಬಿಲ್ ಸ್ಕೋರ್ ವಿಷಯವಾಗಿ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಹೊಸ ನಿಯಮ.
Credit Card Cash Withdrawal: ಸದ್ಯ ದೇಶದ ವಿವಿಧ ಬ್ಯಾಂಕ್ ಗಳು ಗ್ರಾಹಕರಿಗೆ ATM Card ಹಾಗೂ Credit Card ಸೌಲಭ್ಯವನ್ನು ನೀಡುತ್ತದೆ. ಬಹುತೇಕ ಗ್ರಾಹಕರು ಬ್ಯಾಂಕ್ ನೀಡುವ ಕಾರ್ಡ್ ಗಳ ಸೌಲಭ್ಯವನ್ನು ಪಡೆದುಕೊಳ್ಳುತ್ತಾರೆ. ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿದರೆ ಗ್ರಾಹಕರಿಗೆ ಹೆಚ್ಚಿನ ಪ್ರಯೋಜನವಿದೆ ಎನ್ನಬಹುದು. ಸಾಮಾನ್ಯವಾಗಿ Debit Card ಅನ್ನು ಬಳಸಿ ಹೆಚ್ಚಿನ ಜನರು ATM ನಿಂದ ಹಣವನ್ನು ಪಡೆಯುತ್ತಾರೆ.
ಅಷ್ಟೇ ಅಲ್ಲದೆ ATM ನಲ್ಲಿ ನೀವು Credit card ಅನ್ನು ಬಳಸಿ ಕೂಡ ಹಣವನ್ನು ಹಿಂಪಡೆಯಬಹುದು. ಇನ್ನು ಏಟಿಎಂ ನಲ್ಲಿ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ಹಣ ಪಡೆಯಲು ಇಷ್ಟು ಶುಲ್ಕ ಕಟ್ಟುವ ಅಗತ್ಯ ಇದ್ದು ಅದನ್ನ ತಿಳಿದುಕೊಂಡಿರುವುದು ಅಗತ್ಯ ಕೂಡ ಆಗಿದೆ. ಅದೇ ರೀತಿಯಲ್ಲಿ ನೀವು ಏಟಿಎಂ ನಲ್ಲಿ ಕ್ರೆಡಿಟ್ ಮೂಲಕ ಹಣವನ್ನ ಪಡೆದರೆ ಅದು ನೇರವಾಗಿ ನಿಮ್ಮ Cibil Score ಮೇಲೆ ಪರಿಣಾಮ ಬೀರುತ್ತದೆ.
ಕ್ರೆಡಿಟ್ ಕಾರ್ಡ್ ಮೂಲಕ ATM ನಲ್ಲಿ ಹಣ ಪಡೆಯುವವರಿಗೆ ಮಹತ್ವದ ಮಾಹಿತಿ
ಜನರು ಹೆಚ್ಚಾಗಿ ತಮಗೆ ಆರ್ಥಿಕ ತೊಂದರೆ ಎದುರಾದಾಗ ಮೊದಲುಲಿ Credit card ನತ್ತ ಮುಖ ಮಾಡುತ್ತಾರೆ. ಬ್ಯಾಂಕ್‌ಗಳು ನಿಮಗೆ ಕಾರ್ಡ್‌ಗಳ ಮೇಲೆ ಸಾಲವನ್ನು ನೀಡುವುದಿಲ್ಲ. ಆದರೆ ಡೆಬಿಟ್ ಕಾರ್ಡ್ ಗಳಂತೆ ಕ್ರೆಡಿಟ್ ಕಾರ್ಡ್ ಗಳಲ್ಲಿಯೂ ನಗದು ಮುಂಗಡ ಸೌಲಭ್ಯ ಲಭ್ಯವಿದೆ. ನೀವು ಡೆಬಿಟ್ ಕಾರ್ಡ್ ನಿಂದ ಹಣವನ್ನು ಹಿಂತೆಗೆದುಕೊಳ್ಳುವ ರೀತಿಯಲ್ಲಿಯೇ ATM ನಲ್ಲಿ ಹೋಗಿ ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಸುಲಭವಾಗಿ ಹಿಂಪಡೆಯಬಹುದು.
ATM ನ ಮೂಲಕ ಹಣ ಹಿಂಪಡೆಯುವ ಮುನ್ನ ಈ ವಿಚಾರಗಳ ಬಗ್ಗೆ ಗಮನವಿರಲಿ
ನೀವು ATM ನ ಮೂಲಕ Credit Card ಅನ್ನು ಬಳಸಿ ಹಣವನ್ನು ತೆಗೆಯುವ ಮುನ್ನ ನಿಮ್ಮ Credit Score ನ ಬಗ್ಗೆ ಗಮನ ಹರಿಸಿ. ಏಕೆಂದರೆ ಕ್ರೆಡಿಟ್ ಕಾರ್ಡ್ ಮೂಲಕ ಎಟಿಎಂನಿಂದ ಹಣವನ್ನು ಹಿಂಪಡೆಯುವುದು ನಿಮ್ಮ ಕ್ರೆಡಿಟ್ ಸ್ಕೋರ್ ಕಡಿಮೆಯಾಗುತ್ತದೆ ಎನ್ನುವುದು ನಿಮ್ಮ ಗಮನದಲ್ಲಿ ಇರಬೇಕು. ಹೌದು ಏಟಿಎಂ ನಲ್ಲಿ ಕ್ರೆಡಿಟ್ ಮೂಲಕ ಹಣವನ್ನ ಪಡೆದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗುವ ಸಾಧ್ಯತೆ ಇದೆ. ನಿಮ್ಮ ಕ್ರೆಡಿಟ್ ಸ್ಕೊರ್ ಕಡಿಮೆಯಾದರೆ ಹೆಚ್ಚಿನ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಪಡೆದರೆ ಶುಲ್ಕ ಪಾವತಿಸಬೇಕು
ನೀವು ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂತೆಗೆದುಕೊಂಡಾಗ ಸಾಲದ ಮೇಲೆ ಹೆಚ್ಚಿನ ಬಡ್ಡಿ ದರಗಳನ್ನು ವಿಧಿಸಲಾಗುತ್ತದೆ. ಹೀಗಾಗಿ ನೀವು ಇದರ ಮೇಲೆ ಯಾವುದೇ ಗ್ರೇಸ್ ಅವಧಿಯನ್ನು ಪಡೆಯುವುದಿಲ್ಲ, ಅಂದರೆ ಬಡ್ಡಿದರಗಳು ತಕ್ಷಣವೇ ಏರಲು ಪ್ರಾರಂಭಿಸುತ್ತವೆ. ಇದರ ಜೊತೆಗೆ ನೀವು ಶುಲ್ಕವನ್ನು ಸಹ ಪಾವತಿಸಬೇಕಾಗುತ್ತದೆ.
ನೀವು ಎಟಿಎಂನಿಂದ ಹಣವನ್ನು ಹಿಂಪಡೆಯುತ್ತಿದ್ದರೆ, ನೀವು ಸಣ್ಣ ಬಳಕೆಯ ಶುಲ್ಕವನ್ನು ಸಹ ಪಾವತಿಸಬೇಕಾಗಬಹುದು. ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂತೆಗೆದುಕೊಳ್ಳುವುದು ನಿಮ್ಮ ಸ್ಕೋರ್ ಗೆ ಪರಿಣಾಮ ಬೀರುವುದಿಲ್ಲ, ಆದರೆ ನೀವು ತಕ್ಷಣ ಬಡ್ಡಿಯನ್ನು ಮರುಪಾವತಿಸದಿದ್ದರೆ ನಿಮ್ಮ ಸಾಲವು ಹೆಚ್ಚಾಗುತ್ತದೆ ಎನ್ನುವುದರ ಬಗ್ಗೆ ನಿಮಗೆ ಅರಿವಿರಲಿ.