RBI Rule: ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ಮಾರ್ಗಸೂಚಿ, ನಿಯಮ ಬದಲಾವಣೆ.
ನೀವು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ RBI ನ ಈ ಮಾರ್ಗಸೂಚಿ ಬಗ್ಗೆ ತಿಳಿದುಕೊಳ್ಳಿ.
Credit Card Update: ದೇಶದಲ್ಲಿ ಇತ್ತೀಚಿಗೆ ಡೆಬಿಟ್ ಕಾರ್ಡ್ (Debit Card) ಹಾಗೂ ಕ್ರೆಡಿಟ್ ಕಾರ್ಡ್ (Credit Card)
ಹೆಚ್ಚುತ್ತಿದೆ. ಕಾರ್ಡ್ ಗಳಿಗೆ ಸಂಬಂಧಿಸಿದಂತೆ ಅನೇಕ ನಿಯಮಗಳು ಬದಲಾಗುತ್ತಿದೆ. ಸಾಮಾನ್ಯವಾಗಿ ಹೆಚ್ಚಿನ ಜನರು ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನೂ ಬಳಸುತ್ತಾರೆ.
ಇನ್ನು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತಮ್ಮ ಗ್ರಾಹಕರಿಗೆ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ನ ಸೌಲಭ್ಯವನ್ನು ನೀಡುತ್ತದೆ. ಇದೀಗ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ನೀವು ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಾಗಿದ್ದರೆ ಈ ನಿಯಮದ ಬಗ್ಗೆ ತಿಳಿಯುವುದು ಉತ್ತಮ.
ಡೆಬಿಟ್ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ನಿಯಮ
ಭಾರತೀಯ ರಿಸರ್ವ್ ಬ್ಯಾಂಕ್ ಇದೀಗ ಡೆಬಿಟ್ ಕಾರ್ಡ್ ಹಾಗೂ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಹೆಚ್ಚುತ್ತಿರುವ ವಂಚನೆಗಳಿಂದಾಗಿ ಗ್ರಾಹಕರನ್ನು ರಕ್ಷಿಸಲು ರಿಸರ್ವ್ ಬ್ಯಾಂಕ್ ಈ ನಿರ್ಧಾರವನ್ನು ಕೈಗೊಂಡಿದೆ. ಕಾರ್ಡುಗಳ ಮೂಲಕ ಎಲೆಕ್ಟ್ರಾನಿಕ್ ವಹಿವಾಟುಗಳ ಸುರಕ್ಷತೆಯನ್ನು ಬಲಪಡಿಸಲು ಆರ್ ಬಿಐ ಎರಡು ಹಂತದ ಪರಿಶೀಲನೆಯನ್ನು ಕಡ್ಡಾಯಗೊಳಿಸಿದೆ.
ATM ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಬಳಸುವವರಿಗೆ RBI ನಿಂದ ಹೊಸ ಮಾರ್ಗಸೂಚಿ
ಎರಡು ಹಂತದ ಪರಿಶೀಲನೆಯು ಕಾರ್ಡ್ ವಹಿವಾಟುಗಳನ್ನು ಪೂರ್ಣಗೊಳಿಸಲು PIN ಸಂಖ್ಯೆ ಅಥವಾ ಒಂದು ಬಾರಿಯ ಪಾಸ್ ವರ್ಡ್ ಅಂದರೆ OTP ಅನ್ನು ಒಳಗೊಂಡಿರುತ್ತದೆ. ಈ ಭದ್ರೆತೆಯು ವಂಚನೆಯನ್ನು ತಡೆಯಲು ಸಹಾಯವಾಗುತ್ತದೆ. ಇನ್ನು ಸಂಪರ್ಕ ರಹಿತ ವಹಿವಾಟುಗಳ ಮಿತಿಯನ್ನು RBI ಪರಿಷ್ಕರಿಸಿದೆ. ಇನ್ನುಮುಂದೆ ಕಾರ್ಡುದಾರರು ಪಿನ್ ನಮೂದಿಸದೆಯೇ ಪ್ರತಿ ವಹಿವಾಟಿಗೆ ರೂ. 5000 ವರೆಗೆ ಸಂಪರ್ಕರಹಿತ ವಹಿವಾಟುಗಳನ್ನು ಮಾಡಬಹುದು.
ಕಾರ್ಡುಗಳ ವಹಿವಾಟಿಗೆ ಸಂದೇಶ ಕಳುಹಿಸುವುದು ಕಡ್ಡಾಯ
ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಅಂತರರಾಷ್ಟ್ರೀಯ ಬಳಕೆಯ ಮೇಲೆ ನಿರ್ಬಂಧಗಳನ್ನು ವಿಧಿಸಲಾಗಿದೆ. ಕಾರ್ಡ್‌ದಾರರು ತಮ್ಮ ಆದ್ಯತೆಗಳ ಆಧಾರದ ಮೇಲೆ ಅಂತಾರಾಷ್ಟ್ರೀಯ ವಹಿವಾಟುಗಳಿಗಾಗಿ ತಮ್ಮ ಕಾರ್ಡ್‌ಗಳನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸುವುದು ಇನ್ನುಮುಂದೆ ಅಗತ್ಯವಾಗಿದೆ.
ಎಲ್ಲಾ ಕಾರ್ಡ್ ವಹಿವಾಟುಗಳಿಗೆ SMS ಮತ್ತು ಇಮೇಲ್ ಎಚ್ಚರಿಕೆಗಳನ್ನು ಕಳುಹಿಸಲು RBI ಬ್ಯಾಂಕ್‌ಗಳನ್ನು ಕಡ್ಡಾಯಗೊಳಿಸಿದೆ. ಇನ್ನು ಆರ್ ಬಿಐ ವಿಫಲವಾದ ವಹಿವಾಟುಗಳಿಗೆ ಮಿತಿಯನ್ನು ಅಳವಡಿಸಿದರೆ. ಕಾರ್ಡ್ ವಹಿವಾಟು ವಿಫಲವಾದರೆ ಬ್ಯಾಂಕ್ ಅಥವಾ ಹಣಕಾಸು ಸಂಸ್ಥೆ ನಿಗಧಿಪಡಿಸಿರುವ ಶುಲ್ಕವನ್ನು ಪಾವತಿಸಬೇಕಾಗುತ್ತದೆ.