Ads By Google

Cr Card Facility: ಕ್ರೆಡಿಟ್ ಕಾರ್ಡ್ ಬಳಸುವ ಎಲ್ಲರಿಗೂ ಕೇಂದ್ರದಿಂದ ಹೊಸ ನಿಯಮ, ಇನ್ನುಮುಂದೆ ಸಿಗಲ್ಲ ಈ ಸೌಲಭ್ಯ.

Credit card rules have changed in the country

Image Credit: sundayguardianlive

Ads By Google

Credit Card Latest Update: ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ Credit Card ಹಾಗೂ Debit Card ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಬ್ಯಾಂಕ್ ಗಳು Credit Card ನಿಯಮಗಳನ್ನು ಬದಲಾಯಿಸುತ್ತಿವೆ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಯಾವುದೇ ರೀತಿಯಲ್ಲಿ ತಪ್ಪು ಕಂಡು ಬಂದರು ಕೂಡ ಹೆಚ್ಚಿನ ದಂಡವನ್ನು ವಿಧಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಬಳಕೆದಾರರು ವಿವಿಧ ಪಾವತಿಯ ಸೌಲಭ್ಯವನ್ನು ಪಡೆಯುತ್ತಾರೆ. ಇದೀಗ Credit Card ಬಳಕೆದಾರರಿಗೆ ಮಹತ್ವದ ಮಾಹಿತಿಯೊಂದು ಹೊರಬಿದ್ದಿದೆ. ಇನ್ನುಮುಂದೆ Credit Card ಬಳಕೆದಾರರಿಗೆ ಈ ಸೌಲಭ್ಯ ಸಿಗುವುದಿಲ್ಲ.

Image Credit: cred

Credit Card ಬಳಕೆದಾರರೆ ಎಚ್ಚರ
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಾದೆ. ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ವಿತರಣಾ ಕಂಪನಿಗಳು ಹಾಗೂ ಇನ್ನಿತರ ಬ್ರಾಂಡ್ ಗಳ ಬಳಕೆಯ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಇನ್ನು ಕೆಲವೊಮ್ಮೆ ನಕಲಿ ರಿಯಾಯಿತಿಗಳ ಸಂದೇಶ ಮೇರೆಗೆ ರಿಯಾಯಿತಿಯ ಆಯ್ಕೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಖರ್ಚಿನ ಮಿತಿಯ ಬಗ್ಗೆ ಗಮನ ಇರಬೇಕು.

ಇನ್ನುಮುಂದೆ Credit Card ಬಳಕೆದಾರರಿಗೆ ಈ ಸೌಲಭ್ಯ ಸಿಗುವುದಿಲ್ಲ
ಒಟ್ಟು ಬಾಕಿ ಅಥವಾ ಕನಿಷ್ಠ ಬಾಕಿಯನ್ನು ಬಿಲ್ಲಿಂಗ್ ದಿನಾಂಕದ ನಂತರ ಪಾವತಿಸುವುದು, ಹಾಗೆಯೇ ಕಾರ್ಡ್ ಮಿತಿಯನ್ನು ಮೀರುವುದನ್ನು ತಪ್ಪಿಸಲು ಹೆಚ್ಚು ಪಾವತಿ ಮಾಡುವುದು, ಇನ್ನುಮುಂದೆ ಬಳಕೆದಾರರು ಈ ರೀತಿ ಮಾಡಲು ಸಾಧ್ಯವಾಗುವುದಿಲ್ಲ.

ಕ್ರೆಡಿಟ್ ಕಾರ್ಡ್ ಬಳಕೆಗೆ ವಾರ್ಷಿಕ ಶುಲ್ಕ ಇರುವುದಿಲ್ಲ. ಆದರೆ ಒಂದು ವರ್ಷದಲ್ಲಿ ಮಾಡಿದ ನಿರ್ಧಿಷ್ಟ ಖರೀದಿಗಳ ಮೇಲೆ ಪ್ರಯೋಜವನ್ನು ಪಡೆಯಲಾಗುತ್ತದೆ. ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

Image credit: comparehero

Credit Card Bill ಪಾವತಿಗೆ ಎಷ್ಟು ಸಮಯವಿರುತ್ತದೆ….?
ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ತೆಗೆದುಕೊಂಡರೆ ಇದರ ಮೇಲಿನ ವಾರ್ಷಿಕ ಬಡ್ಡಿಯು 36 ರಿಂದ 40 ಶೇಕಡಾ  ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ವರ್ಗಾವಣೆಯ ಮೇಲೆ ಶುಲ್ಕ ಮತ್ತು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.

ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುವ ವಿವಿಧ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು 20 ರಿಂದ 50 ದಿನಗಳ ಕಾಲಾವಕಾಶವನ್ನು ನೀಡುತ್ತವೆ. ನಿಗದಿತ ಸಮಯದೊಳಗೆ ಕಾರ್ಡ್ ಬಿಲ್ ಪಾವತಿಸದಿದ್ದರೆ ಹೆಚ್ಚಿನ ಶುಲ್ಕ ಹಾಗು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಬಾಕಿ ಇರುವ ಕ್ರೆಡಿಟ್ ಕಾರ್ಡ್ ಬಡ್ಡಿದರವನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ.

ಬಡ್ಡಿದರವು 14 % ರಿಂದ 40 % ರ ನಡುವೆ ಇರಬಹುದು. ಬಿಲ್ ಪಾವತಿ ತಡವಾದರೆ ಬಾಕಿ ಉಳಿದಿರುವ ಖಾತೆಯ ಬ್ಯಾಲೆನ್ಸ್ ಗೆ ಬಡ್ಡಿ ಬರುತ್ತದೆ. ಇನ್ನುಮುಂದೆ ಬ್ಯಾಂಕುಗಳು Credit Card ಬಳಕೆದಾರರಿಗೆ ತಮ್ಮ ಬಾಕಿಗಿಂತಾ ಹೆಚ್ಚಿನ ಹಣವನ್ನು ಪಾವತಿಸಲಿ ಅನುಮತಿಸುವುದಿಲ್ಲ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.