Credit Card: ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಬೇಸರದ ಸುದ್ದಿ, ಈ ತಪ್ಪು ಮಾಡಿದರೆ ಇನ್ನುಮುಂದೆ ದುಬಾರಿ ದಂಡ.
ಕ್ರೆಡಿಟ್ ಕಾರ್ಡ್ ಬಳಕೆದಾರರು ಇನ್ನುಮುಂದೆ ಕಟ್ಟಬೇಕು ಹೆಚ್ಚಿನ ದಂಡ.
Credit Card Fine: ಕ್ರೆಡಿಟ್ ಕಾರ್ಡ್ ಬಳಕೆದಾರರು ವಿವಿಧ ಪಾವತಿಯ ಸೌಲಭ್ಯವನ್ನು ಪಡೆಯುತ್ತಾರೆ. ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ (Credit Card) ನಿಯಮಗಳನ್ನು ಬದಲಾಯಿಸುತ್ತಿವೆ. ಕ್ರೆಡಿಟ್ ಕಾರ್ಡ್ ಬಳಕೆಯಲ್ಲಿ ಯಾವುದೇ ರೀತಿಯಲ್ಲಿ ತಪ್ಪು ಕಂಡು ಬಂದರು ಕೂಡ ಹೆಚ್ಚಿನ ದಂಡವನ್ನು ವಿಧಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಶುಲ್ಕ
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಾದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಖರ್ಚಿನ ಮಿತಿಯ ಬಗ್ಗೆ ಗಮನ ಇರಬೇಕು. ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ವಿತರಣಾ ಕಂಪನಿಗಳು ಹಾಗೂ ಇನ್ನಿತರ ಬ್ರಾಂಡ್ ಗಳ ಬಳಕೆಯ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಇನ್ನು ಕೆಲವೊಮ್ಮೆ ನಕಲಿ ರಿಯಾಯಿತಿಗಳ ಸಂದೇಶ ಮೇರೆಗೆ ರಿಯಾಯಿತಿಯ ಆಯ್ಕೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆಗೆ ವಾರ್ಷಿಕ ಶುಲ್ಕ ಇರುವುದಿಲ್ಲ. ಆದರೆ ಒಂದು ವರ್ಷದಲ್ಲಿ ಮಾಡಿದ ನಿರ್ಧಿಷ್ಟ ಖರೀದಿಗಳ ಮೇಲೆ ಪ್ರಯೋಜವನ್ನು ಪಡೆಯಲಾಗುತ್ತದೆ. ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ತೆಗೆದುಕೊಂಡರೆ ಇದರ ಮೇಲಿನ ವಾರ್ಷಿಕ ಬಡ್ಡಿಯು 36 ರಿಂದ 40 ಶೇಕಡಾ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಕ್ರೆಡಿಟ್ ಕಾರ್ಡ್ ಬ್ಯಾಲೆನ್ಸ್ ವರ್ಗಾವಣೆ ವರ್ಗಾವಣೆಯ ಮೇಲೆ ಶುಲ್ಕ ಮತ್ತು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಕ್ರೆಡಿಟ್ ಕಾರ್ಡ್ ಬಳಕೆದಾರರು ಇನ್ನುಮುಂದೆ ಕಟ್ಟಬೇಕು ಹೆಚ್ಚಿನ ದಂಡ
ಕ್ರೆಡಿಟ್ ಕಾರ್ಡ್ ಸೌಲಭ್ಯ ನೀಡುವ ವಿವಿಧ ಬ್ಯಾಂಕ್ ಗಳು ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸಲು 20 ರಿಂದ 50 ದಿನಗಳ ಕಾಲಾವಕಾಶವನ್ನು ನೀಡುತ್ತವೆ. ನಿಗದಿತ ಸಮಯದೊಳಗೆ ಕಾರ್ಡ್ ಬಿಲ್ ಪಾವತಿಸದಿದ್ದರೆ ಹೆಚ್ಚಿನ ಶುಲ್ಕ ಹಾಗು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ.
ಬಾಕಿ ಇರುವ ಕ್ರೆಡಿಟ್ ಕಾರ್ಡ್ ಬಡ್ಡಿದರವನ್ನು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ. ಬಡ್ಡಿದರವು 14 % ರಿಂದ 40 % ರ ನಡುವೆ ಇರಬಹುದು. ಬಿಲ್ ಪಾವತಿ ತಡವಾದರೆ ಬಾಕಿ ಉಳಿದಿರುವ ಖಾತೆಯ ಬ್ಯಾಲೆನ್ಸ್ ಗೆ ಬಡ್ಡಿ ಬರುತ್ತದೆ.