Air Ticket: ಈ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ವಿಮಾನದ ಟಿಕೆಟ್ ಫ್ರೀ, ಈಗಲೇ ಟಿಕೆಟ್ ಬುಕ್ ಮಾಡಿ.

ಇಂತಹ ಕ್ರೆಡಿಟ್ ಕಾರ್ಡ್ ಗಳನ್ನೂ ಬಳಕೆ ಮಾಡುದರಿಂದ ಉಚಿತ ವಿಮಾನದ ಟಿಕೆಟ್ ಅನ್ನು ಪಡೆಯಬಹುದು.

Credit Card Free Air Ticket: ದೇಶದಲ್ಲಿ ಕ್ರೆಡಿಟ್ ಕಾರ್ಡ್ (Credit Card) ಬಳಕೆದಾರರ ಸಂಖ್ಯೆ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ. ಬಳಕೆದಾರರು ಹೆಚ್ಚಿನ ಸೌಲಭ್ಯವನ್ನು ಪಡೆಯಬಹುದಾಗಿದೆ. ಇನ್ನು ಬ್ಯಾಂಕ್ ಗಳು ತನ್ನ ಗ್ರಾಹಕರಿಗೆ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತದೆ. ಇತ್ತೀಚಿಗೆ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಿಯಮಗಳನ್ನು ಬದಲಾಯಿಸುತ್ತಿವೆ. ಕ್ರೆಡಿಟ್ ಕಾರ್ಡ್ ಬಳಕೆದಾರರು ಸಾಕಷ್ಟು ಸೌಲಭ್ಯವನ್ನು ಪಡೆಯಬಹುದಾಗಿದೆ.

ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ
ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಅನೇಕ ರೀತಿಯ ರಿಯಾಯಿತಿಗಳನ್ನು ನೀಡಲಾಗುತ್ತಾದೆ. ಇನ್ನು ಕ್ರೆಡಿಟ್ ಕಾರ್ಡ್ ಬಳಕೆ ಮಾಡುವಾಗ ಖರ್ಚಿನ ಮಿತಿಯ ಬಗ್ಗೆ ಗಮನ ಇರಬೇಕು. ಎಲೆಕ್ಟ್ರಾನಿಕ್ ವಸ್ತುಗಳು, ಆಹಾರ ವಿತರಣಾ ಕಂಪನಿಗಳು ಹಾಗೂ ಇನ್ನಿತರ ಬ್ರಾಂಡ್ ಗಳ ಬಳಕೆಯ ಮೇಲೆ ರಿಯಾಯಿತಿಯನ್ನು ನೀಡುತ್ತದೆ. ಇನ್ನು ಕೆಲವೊಮ್ಮೆ ನಕಲಿ ರಿಯಾಯಿತಿಗಳ ಸಂದೇಶ ಮೇರೆಗೆ ರಿಯಾಯಿತಿಯ ಆಯ್ಕೆ ಮಾಡಿದರೆ ನಷ್ಟ ಅನುಭವಿಸಬೇಕಾಗುತ್ತದೆ.

Flight tickets are free for this credit card use
Image Credit: Paisabazaar

ಕ್ರೆಡಿಟ್ ಕಾರ್ಡ್ ಬಳಕೆಗೆ ವಾರ್ಷಿಕ ಶುಲ್ಕ ಇರುವುದಿಲ್ಲ. ಆದರೆ ಒಂದು ವರ್ಷದಲ್ಲಿ ಮಾಡಿದ ನಿರ್ಧಿಷ್ಟ ಖರೀದಿಗಳ ಮೇಲೆ ಪ್ರಯೋಜವನ್ನು ಪಡೆಯಲಾಗುತ್ತದೆ. ನಿಗದಿತ ಸಮಯದೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಹೆಚ್ಚಿನ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್ ಬಳಸಿ ಹಣವನ್ನು ತೆಗೆದುಕೊಂಡರೆ ಇದರ ಮೇಲಿನ ವಾರ್ಷಿಕ ಬಡ್ಡಿಯು 36 ರಿಂದ 40 ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಈ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ವಿಮಾನದ ಟಿಕೆಟ್ ಫ್ರೀ
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವಾಗ ಕೆಲವು ರಿಯಾಯಿತಿಯನ್ನು ನೀಡಲಾಗುತ್ತದೆ. ರಿಯಾಯಿತಿಗಳು ವೋಚರ್ ಅಥವಾ ಟಿಕೆಟ್ ರೂಪದಲ್ಲಿ ಇರುತ್ತದೆ. ಕೆಲವೊಂದು ಬಾರಿ ವಿಮಾನ ಟಿಕೆಟ್ ಅಥವಾ ಸಿನಿಮಾ ಟಿಕೆಟ್ ಆಯ್ಕೆ ಕೂಡ ಲಭ್ಯವಿರುತ್ತದೆ.

ಅಮೇರಿಕನ್ ಪ್ಲಾಟಿನಂ ಟ್ರಾವೆಲ್ ಕಾರ್ಡ್ ಒಂದು ವರ್ಷದಲ್ಲಿ 1.90 ಲಕ್ಷ ರೂಪಾಯಿ ವೆಚ್ಚದ ಮೇಲೆ 15,000 ಬೋನಸ್ ಅಂಕವನ್ನು ನೀಡುತ್ತದೆ. ಈ ಅಂಕಗಳೊಂದಿಗೆ ವಿಮಾನ ಟಿಕೆಟ್ ಗಳನ್ನೂ ಬುಕ್ ಮಾಡಬಹುದು. ಇನ್ನು 4 ಲಕ್ಷ ವಾರ್ಷಿಕ ವೆಚ್ಚದಲ್ಲಿ 25,000 ಬೋನಸ್ ಅಂಕಗಳು 6 ಲಕ್ಷ ಖರ್ಚು ಮಾಡಿದರೆ 3 ಬಿಸಿನೆಸ್ ಕ್ಲಾಸ್ ಟಿಕೆಟ್ ಗಳನ್ನೂ ಉಚಿತವಾಗಿ ಬುಕ್ ಮಾಡಬಹುದು.

Join Nadunudi News WhatsApp Group

Credit Card Free Air Ticket
Image Credit: NDTV

ಇನ್ನು ಇ ಕಾಮರ್ಸ್ ವೆಬ್ ಸೈಟ್ ಗಳು ವೋಚರ್ ಆಯ್ಕೆಯನ್ನು ನೀಡುತ್ತದೆ. ಈ ವೋಚರ್ ನ ಮೂಲಕ ಪ್ಲೈಟ್ ಟಿಕೆಟ್ ಅನ್ನು ಬುಕ್ ಮಾಡಬಹುದಾಗಿದೆ. ಇನ್ನು ಕೆಲ ಕ್ರೆಡಿಟ್ ಕಾರ್ಡ್ ಗಳು ರಿವಾರ್ಡ್ ಪಾಯಿಂಟ್ ಗಳೊಂದಿಗೆ ಆನ್ಲೈನ್ ವಹಿವಾಟುಗಳಿಗೆ ಪಾವತಿಸುವ ಅವಕಾಶವನ್ನು ನೀಡುತ್ತದೆ. ಏರ್ ಲೈನ್ ವೆಬ್ ಸೈಟ್ ಅಥವಾ OTA ವೆಬ್ ಸೈಟ್ ನಲ್ಲಿ ಪ್ಲೈಟ್ ಟಿಕೆಟ್ ಗಳನ್ನೂ ಬುಕ್ ಮಾಡಿ ಕ್ರೆಡಿಟ್ ಕಾರ್ಡ್ ರಿವಾರ್ಡ್ ಪಾಯಿಂಟ್ ಗಳ ಮೂಲಕ ಪಾವತಿ ಮಾಡಬಹುದು.

Join Nadunudi News WhatsApp Group