Ads By Google

Credit Card: ಕ್ರೆಡಿಟ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್, ಕ್ರೆಡಿಟ್ ಕಾರ್ಡ್ ನಿಯಮದಲ್ಲಿ ದೊಡ್ಡ ಬದಲಾವಣೆ ಮಾಡಿದ RBI.

credit cards rules changes in india

Image Credit: Original Source

Ads By Google

Credit Card Latest Update: ಗ್ರಾಹಕರ ಹಣಕಾಸಿನ ವ್ಯವಹಾರಗಳು ಸುಲಭವಾಗಲು ದೇಶದ ಪ್ರತಿಷ್ಠಿತ ಬ್ಯಾಂಕ್ ಗಳು  ಕ್ರೆಡಿಟ್ ಕಾರ್ಡ್ ಸೌಲಭ್ಯವನ್ನು ನೀಡುತ್ತವೆ. ಆಗಾಗ ಬ್ಯಾಂಕುಗಳು ಈ ಕ್ರೆಡಿಟ್ ಕಾರ್ಡ್ ಗೆ ಸಂಬಂಧಿಸಿದಂತೆ ಹೊಸ ಹೊಸ ನಿಯಮಗಳನ್ನು ಜಾರಿಗೊಳಿಸುತ್ತಿರುತ್ತದೆ.

ಸದ್ಯ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರು ಮತ್ತು ಹೊಸ ಕ್ರೆಡಿಟ್ ಕಾರ್ಡ್ ಗಳನು ಪಡೆಯುವ ಯೋಜನೆಯಲ್ಲಿರುವವರಿಗೆ ಹೊಸ ನಿಯಮ ಪರಿಚಯವಾಗಿದೆ. ಹಾಗಾದರೆ ಬದಲಾದ ಕ್ರೆಡಿಟ್ ಕಾರ್ಡ್ ನಿಯಮ ಏನು ಅನ್ನುವುದರ ಬಗ್ಗೆ ತಿಳಿಯೋಣ.

Image Credit: Informalnewz

ಕ್ರೆಡಿಟ್ ಕಾರ್ಡ್ ಇದ್ದವರಿಗೆ ಬಿಗ್ ಅಪ್ಡೇಟ್
Reserve Bank of India (RBI) ಬ್ಯಾಂಕ್‌ ಗಳು ಮತ್ತು NBFC ಗಳಿಂದ ಕ್ರೆಡಿಟ್ ಕಾರ್ಡ್‌ ಗಳನ್ನು ವಿತರಿಸಲು ಹೊಸ ಮಾರ್ಗಸೂಚಿಗಳನ್ನು ಮಾಡಿದೆ. ಆರ್ ಬಿಐ ನ ಹೊಸ ನಿಯಮ ಗ್ರಾಹಕರ ಮೇಲೆ ನೇರ ಪರಿಣಾಮ ಬೀರುತ್ತಿದ್ದು ಇದರಿಂದ ಗ್ರಾಹಕರು ಸಾಕಷ್ಟು ಲಾಭ ಪಡೆಯಲಿದ್ದಾರೆ ಎನ್ನಲಾಗಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (RBI) ಯ ಹೊಸ ಮಾರ್ಗಸೂಚಿಗಳ ಪ್ರಕಾರ, ಬ್ಯಾಂಕ್‌ ಗಳು ಅಥವಾ NBFC ಗಳು ಅಮೇರಿಕನ್ ಎಕ್ಸ್‌ ಪ್ರೆಸ್, ಮಾಸ್ಟರ್‌ ಕಾರ್ಡ್ ಏಷ್ಯಾ, ಡೈನರ್ಸ್ ಕ್ಲಬ್ ಮತ್ತು ರುಪೇಯಂತಹ ಯಾವುದೇ ಕಾರ್ಡ್ ನೆಟ್‌ ವರ್ಕ್‌ ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳಬಾರದು ಎಂದು RBI ಸ್ಪಷ್ಟಪಡಿಸಿದೆ.

Image Credit: Bizzbuzz

ಕ್ರೆಡಿಟ್ ಕಾರ್ಡ್ ನಿಯದಲ್ಲಿ ದೊಡ್ಡ ಬದಲಾವಣೆ ಮಾಡಿದ RBI
ಗ್ರಾಹಕರು ಯಾವ ನೆಟ್‌ ವರ್ಕ್ ಕಾರ್ಡ್ ಪಡೆಯಲು ಬಯಸುತ್ತಾರೆ ಎಂಬುದರ ಆಯ್ಕೆಯನ್ನು ನೀಡುವಂತೆ ಕಾರ್ಡ್ ನೀಡುವ ಬ್ಯಾಂಕ್‌ ಗಳು ಮತ್ತು ಎನ್‌ ಬಿಎಫ್‌ ಸಿಗಳಿಗೆ ಸೂಚನೆ ನೀಡಿದೆ. ಬ್ಯಾಂಕ್ ನ ಬದಲಾಗಿ ಇನ್ನುಮುಂದೆ ಗ್ರಾಹಕರು ಈಗ ತಮ್ಮ ನೆಚ್ಚಿನ ಕಾರ್ಡ್ ಅನ್ನು ಆಯ್ಕೆ ಮಾಡಬಹುದು. ಭಾರತದಲ್ಲಿ ವೀಸಾ, ಮಾಸ್ಟರ್‌ ಕಾರ್ಡ್, ಅಮೇರಿಕನ್ ಎಕ್ಸ್‌ ಪ್ರೆಸ್, ಡೈನರ್ಸ್ ಕ್ಲಬ್, ರುಪೇ ಮುಂತಾದ ಕಾರ್ಡ್ ನೆಟ್‌ ವರ್ಕ್‌ ಗಳು ಅನೇಕ ಪ್ರಮುಖ ಬ್ಯಾಂಕ್‌ ಗಳು ಮತ್ತು NBFC ಗಳೊಂದಿಗೆ ಟೈ ಅಪ್‌ ಗಳನ್ನು ಹೊಂದಿವೆ.

ಹೊಸ RBI ನಿಯಮದ ಪ್ರಕಾರ, ಬ್ಯಾಂಕ್‌ಗಳು ಅಥವಾ ಎನ್‌ಬಿಎಫ್‌ಸಿ ಗಳು ಯಾವುದೇ ಕಾರ್ಡ್ ನೆಟ್‌ವರ್ಕ್‌ಗಳೊಂದಿಗೆ ವಿಶೇಷ ವ್ಯವಸ್ಥೆಗಳು ಅಥವಾ ಒಪ್ಪಂದಗಳನ್ನು ಮಾಡಿಕೊಳ್ಳುವಂತಿಲ್ಲ. ಬ್ಯಾಂಕ್‌ ಗಳು ಅಥವಾ ಎನ್‌ ಬಿಎಫ್‌ ಸಿ ಗಳು ತಮ್ಮ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ನವೀಕರಣದ ಸಮಯದಲ್ಲಿಯೂ ಕಾರ್ಡ್ ನೆಟ್‌ ವರ್ಕ್ ಅನ್ನು ಆಯ್ಕೆ ಮಾಡುವ ಆಯ್ಕೆಯನ್ನು ನೀಡಬೇಕು.

Image Credit: Jagran

ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕಲ್
ತಮ್ಮ ಆಯ್ಕೆಯ ಕ್ರೆಡಿಟ್ ಕಾರ್ಡ್ ಆಯ್ಕೆಯ ಜೊತೆಗೆ, ಆರ್‌ಬಿಐ ಗ್ರಾಹಕರಿಗೆ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್ ಸೈಕ್ಲ ನಲ್ಲಿಯೂ  ದೊಡ್ಡ ಪರಿಹಾರವನ್ನು ನೀಡುತ್ತದೆ. ಈ ನಿಟ್ಟಿನಲ್ಲಿ, ಆರ್‌ಬಿಐ ಕ್ರೆಡಿಟ್ ಕಾರ್ಡ್ ಬಿಲ್ಲಿಂಗ್‌ ಗೆ ಸಂಬಂಧಿಸಿದ ನಿಯಮಗಳನ್ನು ಬದಲಾಯಿಸಿದೆ ಮತ್ತು ಈಗ ಕ್ರೆಡಿಟ್ ಕಾರ್ಡ್ ಹೊಂದಿರುವವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ಕಾರ್ಡ್‌ ನ ಬಿಲ್ಲಿಂಗ್ ಸೈಕಲ್ ಅನ್ನು ಒಂದಕ್ಕಿಂತ ಹೆಚ್ಚು ಬಾರಿ ಬದಲಾಯಿಸಬಹುದು.

Image Credit: Business-standard
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in