Credit Card Overlimit: ಕ್ರೆಡಿಟ್ ಕಾರ್ಡಿನಲ್ಲಿ ಮಿತಿಗಿಂತ ಹೆಚ್ಚು ಖರ್ಚು ಮಾಡುವುದು ಹೇಗೆ…? ಇಲ್ಲಿದೆ ಟಿಪ್ಸ್.

ಕ್ರೆಡಿಟ್ ಕಾರ್ಡ್ ನಲ್ಲಿ ಮಿತಿಗಿಂತ ಹೆಚ್ಚು ಖರ್ಚು ಮಾಡುವುದು ಹೇಗೆ...?

Credit Card Overlimit Rule: ಉತ್ತಮ ಆರ್ಥಿಕ ಉತ್ಪನ್ನಗಳಲ್ಲಿ ಕ್ರೆಡಿಟ್ ಕಾರ್ಡ್ ಕೂಡ ಒಂದಾಗಿದೆ. ಕ್ರೆಡಿಟ್ ಕಾರ್ಡ್ ನಿಂದಾಗಿ ಬಳಕೆದಾರರು ತಮ್ಮ ವಹಿವಾಟನ್ನು ಸರಳಗೊಳಿಸಿಕೊಳ್ಳುತ್ತಿದ್ದಾರೆ. ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ಹಲವು ರೀತಿಯ ರಿಯಾಯಿತಿಯನ್ನು ಕೂಡ ಪಡೆಯಬಹುದಾಗಿದೆ.

ಇನ್ನು ಕ್ರೆಡಿಟ್ ಕಾರ್ಡ್ ಬಳಕೆಗೆ RBI ಸಾಕಷ್ಟು ನಿಯಮವನ್ನು ರೂಪಿಸಿದೆ. ನಿಮಗೆ ತಿಳಿದಿರುವ ಹಾಗೆ ಕ್ರೆಡಿಟ್ ಕಾರ್ಡ್ ಬಳಕೆಗೆ ಮಿತಿಯನ್ನು ಕೂಡ ಅಳವಡಿಸಲಾಗಿದೆ. ಇದೀಗ ನಾವು ಈ ಲೇಖನದಲ್ಲಿ ಕ್ರೆಡಿಟ್ ಕಾರ್ಡಿನಲ್ಲಿ ಮಿತಿಗಿಂತ ಹೆಚ್ಚು ಖರ್ಚು ಮಾಡಲು RBI ನಿಯಮ ಹೇಳುವುದೇನು ಅನ್ನುವ ಬಗ್ಗೆ ತಿಳಿಯೋಣ.

Credit Card Overlimit Rule
Image Credit: Informal Newz

ಕ್ರೆಡಿಟ್ ಕಾರ್ಡ್ ನಲ್ಲಿ ಮಿತಿಗಿಂತ ಹೆಚ್ಚು ಖರ್ಚು ಮಾಡುವುದು ಹೇಗೆ…?
ಕ್ರೆಡಿಟ್ ಕಾರ್ಡ್‌ಗಳೊಂದಿಗಿನ ಸಮಸ್ಯೆಯೆಂದರೆ ಪ್ರತಿ ಕಾರ್ಡ್‌ ನೊಂದಿಗೆ ಮಿತಿಯನ್ನು ನೀಡಲಾಗಿದೆ ಮತ್ತು ಕೆಲವೊಮ್ಮೆ ಈ ಮಿತಿಯು ಅಗತ್ಯವಿರುವ ಸಮಯದಲ್ಲಿ ಕಡಿಮೆಯಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಈ ಮಿತಿಯ ನಂತರವೂ ಕ್ರೆಡಿಟ್ ಕಾರ್ಡ್‌ ನಲ್ಲಿ ಹಣ ಖರ್ಚು ಮಾಡಬಹುದೇ..? ಎನ್ನುವ ಪ್ರಶ್ನೆ ನಿಮ್ಮಲ್ಲಿ ಮೂಡಿರಬಹುದು. RBI ನೀಡಿರುವ ಮಾಹಿತಿಯ ಪ್ರಕಾರ, ಬ್ಯಾಂಕ್ ನೀಡಿದ ಕ್ರೆಡಿಟ್ ಕಾರ್ಡ್ ಮಿತಿಯನ್ನು ಮೀರಿದ ಮೊತ್ತವನ್ನು ಖರ್ಚು ಮಾಡಬಹುದು.

ಆದರೆ ಇದಕ್ಕಾಗಿ ಕಾರ್ಡ್ ಹೊಂದಿರುವವರು ಮುಂಚಿತವಾಗಿ ಕ್ರೆಡಿಟ್ ಕಾರ್ಡ್ ಕಂಪನಿಗೆ ಹೋಗಿ ಓವರ್‌ ಲಿಮಿಟ್‌ಗೆ ಒಪ್ಪಿಗೆ ನೀಡಬೇಕು. ಇದರ ನಂತರ ಕಾರ್ಡ್ ಕಂಪನಿಯು ನಿಮಗೆ ಕ್ರೆಡಿಟ್ ಕಾರ್ಡ್ ಮಿತಿಮೀರಿದ (Over Limit) ಆಯ್ಕೆಯನ್ನು ನೀಡಬಹುದು. ಕಾರ್ಡ್ ಕಂಪನಿ ಅಥವಾ ಬ್ಯಾಂಕ್ ಬಳಕೆದಾರರಿಗೆ ತಮ್ಮ ವೆಬ್‌ ಸೈಟ್, ಮೊಬೈಲ್ ಅಪ್ಲಿಕೇಶನ್ ಮತ್ತು ಇತರ ಪ್ಲಾಟ್‌ ಫಾರ್ಮ್‌ ಗಳಲ್ಲಿ ಈ ಮಿತಿಮೀರಿದ ಮಿತಿಯನ್ನು ಪ್ರಾರಂಭಿಸಲು ಮತ್ತು ನಿಲ್ಲಿಸಲು ಆಯ್ಕೆಯನ್ನು ನೀಡಬೇಕಾಗುತ್ತದೆ.

Credit Card Overlimit
Image Credit: India Tv

ಮಿತಿಮೀರಿದ ಬಳಕೆಗೆ ಶುಲ್ಕ ವಿಧಿಸಲಾಗುತ್ತದೆಯೇ..?
ಸೆಂಟ್ರಲ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಕ್ರೆಡಿಟ್ ಕಾರ್ಡ್ ಓವರ್‌ಲಿಮಿಟ್ ಸೌಲಭ್ಯವನ್ನು ಬ್ಯಾಂಕ್ ಅಥವಾ ಕಾರ್ಡ್ ಕಂಪನಿಯು ಕಾರ್ಡ್ ಹೋಲ್ಡರ್‌ ನ ಒಪ್ಪಿಗೆಯ ನಂತರ ಮಾತ್ರ ಒದಗಿಸಬಹುದು.ನಿಯಮ ಪ್ರಕಾರ ನಡೆಯದಿದ್ದರೆ ಮಿತಿಮೀರಿದ ಶುಲ್ಕವನ್ನು ವಿಧಿಸಲಾಗುತ್ತದೆ. ನಿಮ್ಮ ಕ್ರೆಡಿಟ್ ಕಾರ್ಡ್ ಮಿತಿಯನ್ನು ನೀವು ಬಳಸಿದರೆ, ಅದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಕ್ರೆಡಿಟ್ ಕಾರ್ಡ್ ಮಿತಿಯ 30 ಪ್ರತಿಶತದವರೆಗೆ ಇರುತ್ತದೆ ಎನ್ನುವುದು ನಿಮಗೆ ತಿಳಿದಿರಲಿ.

Join Nadunudi News WhatsApp Group

Credit Card latest Update
Image Credit: News 18

Join Nadunudi News WhatsApp Group