ಸ್ನೇಹಿತರೆ ಸಾಮಾನ್ಯವಾಗಿ ಈ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮಾನವನಿಗೆ ಕ್ರಿಕೆಟ್ ಅಂದರೆ ಇಷ್ಟವಿರುತ್ತದೆ ಎಂದು ಹೇಳಬಹುದು. ಹಲವು ದೇಶಗಳು ಕ್ರಿಕೆಟ್ ತಂಡವನ್ನ ಹೊಂದಿದ್ದು ಜನರ ಹಲವು ಆಟಗಾರರನ್ನ ಮೆಚ್ಚಿಕೊಳ್ಳುತ್ತಾರೆ ಎಂದು ಹೇಳಬಹುದು. ಈ ಭೂಮಿಯ ಮೇಲೆ ಹೆಚ್ಚು ಅಭಿಮಾನಿಗಳು ಇರುವುದು ಅಂದರೆ ಅದೂ ಕ್ರಿಕೆಟ್ ಗೆ ಎಂದು ಹೇಳಬಹುದು. ಮೊನ್ನೆ ಮೊನ್ನೆತಾ ಐಪಿಎಲ್ ಮುಗಿದಿದ್ದು ನಿನ್ನೇನು ಕೆಲವೇ ದಿನಗಳಲ್ಲಿ 20 ಓವರ್ ಪಂದ್ಯದ ವಿಶ್ವಕಪ್ ಆರಂಭ ಆಗಲಿದೆ. ಇನ್ನು ಕ್ರಿಕೆಟ್ ಮೈದಾನದಲ್ಲಿ ನಿಮಗೆ ಗಮನಕ್ಕೆ ಬಂದಿರುವ ಹಾಗೆ ಕೆಲವು ಆಟಗಾರರು ಎರಡು ಟೋಪಿಯನ್ನ ಒಮ್ಮೆಲೇ ಧರಿಸುತ್ತಾರೆ. ಹೌದು ಒಬ್ಬ ಆಟಗಾರ ಎರಡು ಟೋಪಿಯನ್ನ ಒಂದೇಬಾರಿ ಧರಿಸಿರುವುದನ್ನ ನಾವು ನೀವೆಲ್ಲ ನೋಡಿರುತ್ತೇವೆ.
ಹಾಗಾದರೆ ಒಬ್ಬ ಆಟಗಾರ ಎರಡು ಟೋಪಿಯನ್ನ ಒಂದೇಬಾರಿ ಧರಿಸಲು ಕಾರಣ ಏನು ಅನ್ನುವುದು ಸಾಮಾನ್ಯವಾಗಿ ಹೆಚ್ಚಿನ ಜನರ ತಲೆಯಲ್ಲಿ ಕಾಡುತ್ತಿದೆ ಎಂದು ಹೇಳಬಹುದು. ಹಾಗಾದರೆ ಒಬ್ಬ ಆಟಗಾರ ಎರಡು ಟೋಪಿಯನ್ನ ಒಂದೇಬಾರಿ ಧರಿಸಲು ಕಾರಣ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಬಹುತೇಕ ಐಪಿಎಲ್‌ನಲ್ಲೂ ಇದೇ ರೀತಿಯ ದೃಶ್ಯ ಕಂಡುಬರುತ್ತದೆ. ಬಹುತೇಕ ಎಲ್ಲಾ ಆಟಗಳಲ್ಲಿ, ಆಟಗಾರರು ನಿರ್ದಿಷ್ಟವಾಗಿ ತಂಡದ ನಾಯಕ ಏಕಕಾಲದಲ್ಲಿ ಎರಡು ಕ್ಯಾಪ್ ಧರಿಸಿರುವುದು ಕಂಡುಬರುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಪ್ರತಿಕ್ರಿಯೆಗಳಿಗೆ ಹೋಗುವಾಗ ಆಟಗಾರರು ಒಂದಕ್ಕಿಂತ ಹೆಚ್ಚು ಕ್ಯಾಪ್ ಧರಿಸಿರುವುದು ಖಂಡಿತವಾಗಿಯೂ ಅಭಿಮಾನಿಗಳನ್ನು ಅಚ್ಚರಿಗೊಳಿಸಿದೆ ಎಂದು ಸುಲಭವಾಗಿ ಹೇಳಬಹುದು. ಸ್ನೇಹಿತರೆ ಕರೋನ ವೈರಸ್ ಸಾಂಕ್ರಾಮಿಕದ ಈ ಪರೀಕ್ಷಾ ಸಮಯದಲ್ಲಿ ವ್ಯಕ್ತಿಗಳು ಕ್ರಿಕೆಟ್ ಮೈದಾನದಲ್ಲಿ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಂಡ ಹಲವಾರು ಕ್ರಮಗಳಲ್ಲಿ ಇದೂ ಒಂದು ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಕಾರಣ ಆಟಗಾರರು ಸಾಮಾನ್ಯವಾಗಿ ಕ್ಯಾಪ್‌ಗಳು ಮತ್ತು ಸನ್ಗ್ಲಾಸ್ ಸೇರಿದಂತೆ ವಸ್ತುಗಳನ್ನು ಅಂಪೈರ್‌ಗಳಿಗೆ ನೀಡುವುದನ್ನು ಐಸಿಸಿ ನಿಷೇಧಿಸಿದೆ.
ಇನ್ನು ಆಟಗಾರರು ತಮ್ಮ ವಸ್ತುಗಳನ್ನು ತಮ್ಮ ಸಹ ಆಟಗಾರರಿಗೆ ನೀಡುವುದನ್ನು ಆಡಳಿತ ಮಂಡಳಿಯು ನಿಷೇಧಿಸಿದೆ. ಕರೋನ ಕಾರಣ ತೀರ್ಪುಗಾರರು ಆಟಗಾರರು ತನ್ನ ವಸ್ತುಗಳನ್ನ ನೀಡುವುದನ್ನ ನಿಷೇದ ಮಾಡಿದ ಕಾರಣ ಬೌಲರ್ ಗಳು ಬೌಲಿಂಗ್ ಮಾಡುವ ಸಮಯದಲ್ಲಿ ತಮ್ಮ ಕ್ಯಾಪ್ ಅನ್ನು ನಾಯಕನಿಗೆ ಕೊಟ್ಟು ಬೌಲಿಂಗ್ ಮಾಡಲು ಹೋಗುತ್ತಾರೆ ಮತ್ತು ನಾಯಕ ಅವರ ಕ್ಯಾಪ್ ತೆಗೆದುಕೊಳ್ಳುವ ಕಾರಣ ಆ ಟೋಪಿಯನ್ನ ತನ್ನ ಟೋಪಿಯ ಮೇಲೆ ಇಟ್ಟುಕೊಳ್ಳುತ್ತಾನೆ. ಸ್ನೇಹಿತರೆ ನಿಮ್ಮ ಪ್ರಕಾರ ಈ ಬಾರಿ ವಿಶ್ವಕಪ್ ಯಾರು ವಿನ್ ಆಗಬಹುದು ಅನ್ನುವುದರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.