Cricket Umpire: ಕ್ರಿಕೆಟ್ ಅಂಪೈರ್ ಗೆ ಸಿಗುವ ಸಂಬಳ ಎಷ್ಟು…? ಅವರ ಆಯ್ಕೆ ಹೇಗೆ…? ಇಲ್ಲಿದೆ ಡೀಟೇಲ್ಸ್
ಕ್ರಿಕೆಟ್ ಅಂಪೈರ್ ಗಳನ್ನ ಹೇಗೆ ಸೆಲೆಕ್ಟ್ ಮಾಡಲಾಗುತ್ತದೆ ಅವರ ಸಂಬಳ ಎಷ್ಟು.
Cricket Umpire Appointment And Salary: ಕ್ರಿಕೆಟ್ ಬಹುತೇಕರ ನೆಚ್ಚಿನ ಆಟವಾಗಿದ್ದು ಕ್ರಿಕೆಟ್ ಅಂಗಳ ಅನೇಕ ಕೌತುಕ ಕ್ಷಣಗಳಿಗೆ ಸಹ ಸಾಕ್ಷಿಯಾಗಿತ್ತು. ವೈಡ್ ಬಾಲ್, ಸಿಕ್ಸ್ , ಫೋರ್ ಎಲ್ಲ ಕಣ್ಣಾರೆ ಪ್ರೇಕ್ಷಕರು ಕಂಡರು ಅದನ್ನು ಸಮ್ಮತಿ ಮುಖೇನ ಸೂಚಿಸುವುದು ಮಾತ್ರ ಅಂಪೈರ್ ಎನ್ನಬಹುದು.
ಕ್ರಿಕೆಟ್ ನಲ್ಲಿ ಬ್ಯಾಟಿಂಗ್ , ಬೌಲಿಂಗ್ ಈ ಎಲ್ಲ ಪ್ರಕ್ರಿಯೆ ಇದ್ದರೂ ಅದನ್ನು ನಿಖರವಾಗಿ ತೀರ್ಪು ನೀಡಲು ಮಾತ್ರ ಅಂಪೈರ್ ಬೇಕೆ ಬೇಕು. ಇತ್ತೀಚೆಗೆ ಸರಣಿ ಆಟ ತೋರ್ಪಡಿಸುವ ವಿಶ್ವಕಪ್ ನಲ್ಲಿ ಸಹ ಅಂಪೈರ್ ಸ್ಥಾನ ಮಾನ ಮತ್ತಷ್ಟು ಹೆಚ್ಚಾಗುತ್ತಿದೆ. ಹಾಗಾದರೆ ಅಂಪೈರ್ ಹೇಗಿರಬೇಕು ಇನ್ನಿತರ ವಿಚಾರದ ಬಗ್ಗೆ ಇಂದಿನ ಈ ಲೇಖನದಲ್ಲಿ ನಾವು ತಿಳಿಸಲಿದ್ದೇವೆ.
ಬ್ಯಾಟ್ಸ್ ಮ್ಯಾನ್ , ಬೌಲರ್ , ಬೌಂಡ್ರಿ ಲೈನ್ ಇತ್ಯಾದಿ ಸೂಕ್ಷ್ಮ ವಿಚಾರವನ್ನು ಕೂಲಂಕುಷವಾಗಿ ಪರಿಶೀಲನೆ ಮಾಡುವ ಅಂಪೈರ್ ಗಳು ಕೆಲ ಕ್ಷುಲ್ಲಕ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದು ಇದೆ. ಇವರ ಒಂದು ತೀರ್ಮಾನ ಪಂದ್ಯದ ಗೆಲುವು ಸೋಲಿನ ಲೆಕ್ಕಾಚಾರದ ಮೇಲೆ ನಿಂತಿರಲಿದೆ. ಎಷ್ಟೋ ಬಾರಿ ತಮ್ಮ ನೆಚ್ಚಿನ ಆಟಗಾರ ಔಟ್ ಆಗಿದ್ದಕ್ಕೆ ತೀರ್ಪುನೀಡಿದ್ದ ಅಂಪೈರ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದದ್ದು ಇದೆ.
ಅರ್ಹತೆ ಏನು?
*ಅಂಪೈರ್ ಗೆ ಇಂತಿಷ್ಟೇ ವಿದ್ಯಾರ್ಹತೆ ಕಡ್ಡಾಯವಲ್ಲವಾದರೂ ಬರೆಯಲು ಮತ್ತು ಮಾತನಾಡಲು ಮತ್ತು ನಿರ್ದಿಷ್ಟ ಸೂಚನೆ ನೀಡಲು ಬರಬೇಕು.
*ಫಿಟ್ ಆ್ಯಂಡ್ ಫೈನ್ ಆಗಿರಬೇಕು. ಉತ್ತಮ ಕಣ್ಣಿನ ದೃಷ್ಟಿ ಉತ್ತಮವಾಗಿರಬೇಕು. ಕಿವಿಯ ಗ್ರಹಣ ಶಕ್ತಿ ಉತ್ತಮವಾಗಿರಬೇಕು.
*ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅಂಪೈರ್ ಆಗುವವರಿಗೆ ಇಂಗ್ಲಿಷ್ ಭಾಷೆ ಬರೆಯಲು, ಓದಲು ಬರೆಯಬೇಕು.
*ಮೈದಾನದಲ್ಲಿ ಗಂಟೆಗಟ್ಟಲೆ ನಿಲ್ಲಲು ಸದೃಢರಾಗಿರಬೇಕು.
ಪರೀಕ್ಷೆ ಕಡ್ಡಾಯ
ಅಂಪೈರ್ ಆಗಲು ದೈಹಿಕ ಮತ್ತು ಪ್ರಾಯೋಗಿಕ ಪರೀಕ್ಷೆ ಕಡ್ಡಾಯವಾಗಿದೆ. ಕ್ರಿಕೆಟ್ ಒಕ್ಕೂಟ ಈ ಪರೀಕ್ಷೆ ಆಯೋಜನೆ ಮಾಡಲಿದೆ. ಈ ಪರೀಕ್ಷೆ ಮಾಡುವ ಮೊದಲು 4 ದಿನದ ವಿಶೇಷ ತರಬೇತಿ ಪಡೆಯುತ್ತದೆ. ಮೊದಲ ಮೂರು ದಿನ 42 ಕೆಲ ನಿಯಮದ ಕುರಿತು ತರಬೇತಿ ನೀಡಲಿದೆ. ನಾಲ್ಕನೇ ದಿನಕ್ಕೆ ಈ ಪರೀಕ್ಷೆ ನಿಮಗೆ ಸಿಗಲಿದೆ. ಮೊದಲ ಸುತ್ತಿನ ಬರವಣಿಗೆ ಪರೀಕ್ಷೆಯಲ್ಲಿ ಪಾಸ್ ಆದರೆ ಪ್ರಾಯೋಗಿಕ ಪರೀಕ್ಷೆ ಅರ್ಹರಾಗಿರುತ್ತಾರೆ.
ಬಿಸಿಸಿಐ ಅಂಪೈರ್ ಆಗಲು
BCCI ಅಂಪೈರ್ ಆಗಲು ಲೆವಲ್ 1ಪ್ರೋಗ್ರಾಮ್ ರಿಫ್ರೆಶರ್ ಕೋರ್ಸ್ ಆಗಬೇಕು. ಇದಾಗಿ ಒಂದು ವರ್ಷದ ಒಳಗೆ ರಿಫ್ರೆಶರ್ ಕೋರ್ಸ್ ಮುಗಿಸಬೇಕು. ಬಳಿಕ ಅಂತಿಮವಾಗಿ ಲೆವಲ್ 2 ಪ್ರೋಗಾಂ ಮುಗಿಸಬೇಕು. ಇದೆಲ್ಲ ಆದ ಬಳಿಕ ಬಿಸಿಸಿಐ ಅಂಪೈರ್ ಆಗಲಿದ್ದಾರೆ. ಇದರ ಅನುಭವದ ಮೇಲೆ ಐಸಿಸಿಗೂ ಆಯ್ಕೆ ಮಾಡಲಿದ್ದಾರೆ.
ವೇತನ ಎಷ್ಟು ಸಿಗಲಿದೆ?
BCCI ಅಂಪೈರ್ ಅವರಿಗೆ ಟೆಸ್ಟ್ ಪಂದ್ಯ ಒಂದಕ್ಕೆ 40 ಸಾವಿರ ವೇತನ ಪಡೆಯುತ್ತಾರೆ. ಟಿ 20 ಪಂದ್ಯದಲ್ಲಿ 20-30 ಸಾವಿರ ಪಡೆಯಲಿದ್ದಾರೆ. ಟೆಸ್ಟ್ ಪಂದ್ಯಕ್ಕೆ 30 ಸಾವಿರ ಸಿಗಲಿದೆ. ಇನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಶ್ರೇಷ್ಠರಿಗೆ ವಾರ್ಷಿಕ 45 ಸಾವಿರ ಡಾಲರ್ (35ಲಕ್ಷ ರೂ. ವೇತನ) ಸಿಗಲಿದೆ. ಅನುಭವ ಇಲ್ಲದವರಿಗೆ 35 ಸಾವಿರ ಡಾಲರ್(25ಲಕ್ಷ ರೂ.) ವೇತನ ಸಿಗಲಿದೆ. ವಿಶ್ವಕಪ್ ಟೋರ್ನಿ ಯಲ್ಲಿ 3000 ಸಾವಿರ ಡಾಲರ್ ಪಂದ್ಯ ವೊಂದಕ್ಕೆ ಸಿಗಲಿದೆ. ಪ್ರವಾಸ ವೆಚ್ಚ ಸಹ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ನೋಡಿಕೊಳ್ಳಲಿದೆ.