Crop Compensation: ಬರ ಪರಿಹಾರದ 3 ನೇ ಕಂತಿನ ಹಣ ಬಿಡುಗಡೆ, ನಿಮ್ಮ ಖಾತೆಗೆ ಬಂದಿದೆಯಾ ಈ ರೀತಿ ಚೆಕ್ ಮಾಡಿ.

ಬರ ಪರಿಹಾರದ 3 ನೇ ಕಂತಿನ ಹಣ ಬಿಡುಗಡೆ

Crop Compensation 3rd Installment: ಕಳೆದ ವರ್ಷ ಬೆಳೆ ಹಾನಿಗೊಳಗಾದ ರೈತರಿಗೆ ರಾಜ್ಯ ಸರ್ಕಾರ ಬೆಲೆ ಪರಿಹಾರ ಮೊತ್ತವನ್ನು ನೀಡುತ್ತಿದೆ . ಈಗಾಗಲೇ ಎರಡು ಕಂತಿನ ಬೆಲೆ ಪರಿಹಾರ ಮೊತ್ತ ಜಮಾ ಆಗಿದೆ. ಈಗಾಗಲೇ ಎರಡು ಹಂತದಲ್ಲಿ ಅರ್ಹ ರೈತರಿಗೆ ಅರ್ಹವಾಗಿ ಪಾವತಿಸಿದ ಬೆಳೆ ನಷ್ಟ ಪರಿಹಾರದ ಮೊತ್ತವನ್ನು ಪರಿಗಣಿಸಿ, ಉಳಿದ ಬೆಳೆ ನಷ್ಟ ಪರಿಹಾರ ಮೊತ್ತವನ್ನು ಅರ್ಹರಿಗೆ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡಲು ಸರ್ಕಾರ ಆದೇಶಿಸಿದೆ.

ರಾಜ್ಯ ಸರ್ಕಾರ ಮೂರನೇ ಕಂತಿನ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿರುವುದಾಗಿ ಘೋಷಿಸಿದೆ. ಬೆಳೆ ನಷ್ಟದಿಂದ ಸಮಸ್ಯೆಗೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತ ನೆರವಾಗುತ್ತಿದೆ. ಶೀಘ್ರದಲ್ಲೇ ರೈತರು ಸರ್ಕಾರದ ಪರಿಹಾರ ಮೊತ್ತವನ್ನು ಪಡೆಯಬಹುದು.

Crop Compensation 3rd Installment
Image Credit: Indian Express

ಬರ ಪರಿಹಾರದ 3 ನೇ ಕಂತಿನ ಹಣ ಬಿಡುಗಡೆ
ಸದ್ಯ ರಾಜ್ಯ ಸರ್ಕಾರ ರೈತರಿಗೆ ಮೂರನೇ ಕಂತಿನ ಬೆಳೆ ಪರಿಹಾರ ಮೊತ್ತವನ್ನು ಬಿಡುಗಡೆ ಮಾಡಿದೆ. ರೈತರು ತಮ್ಮ ಬೆಳೆ ಹಾನಿಯಿಂದಾಗಿ ಚಿಂತಿಸುವತ್ತಾಗಿದ್ದು, ರೈತರ ಸಮಸ್ಯೆಗೆ ನೆರವಾಗಲು ರಾಜ್ಯ ಸರ್ಕಾರ ಬೆಳೆ ಪರಿಹಾರ ಮೊತ್ತವನ್ನು ಜಾರಿಗೊಳಿಸಿತ್ತು. ಈವರೆಗೆ ರಾಜ್ಯ ಸರ್ಕಾರ ಎರಡು ಕಂತಿನ ಬೆಳೆ ಪರಿಹಾರ ಮೊತ್ತವನ್ನು ಜಾರಿ ಮಾಡಿದ್ದೂ, ಇದೀಗ ಮೂರನೇ ಕಂತಿನ ಹಣದ ಬಿಡುಗಡೆಗೆ ಮುಂದಾಗಿದೆ.

ರೈತರು ಶೀಘ್ರದಲ್ಲೇ ಮೂರನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಇನ್ನು 3 ನೇ ಕಂತಿನ ಹಣದ ಬಿಡುಗಡೆಯ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾಹಿತಿ ಹೊರಬಿದ್ದಿದೆ. ಶೀಘ್ರದಲ್ಲೇ ಎಲ್ಲ ಅರ್ಹರ ಖಾತೆಗೆ ಮೂರನೇ ಕಂತಿನ ಹಣವನ್ನು ಜಮಾ ಮಾಡುವುದಾಗಿ ಸರ್ಕಾರ ಹೇಳಿದೆ. ರೈತರು ತಮ್ಮ ಖಾತೆಗೆ ಮೂರನೇ ಕಂತಿನ ಹಣವನ್ನು ಜಮಾ ಮಾಡಿಕೊಳ್ಳಲು ಕೆಲ ಅಗತ್ಯ ಕೆಲಸಗಳನ್ನು ಮಾಡಿಕೊಳಬೇಕಿದೆ. ರೈತರು ಈ ಎಲ್ಲ ಕೆಲಸವನ್ನು ಪೂರ್ಣಗೊಳಿಸಿಕೊಂಡಿದ್ದರೆ ಯಾವುದೇ ಸಮಸ್ಯೆ ಇಲ್ಲದೆ ಮೂರನೇ ಕಂತಿನ ಬೆಳೆ ಪರಿಹಾರ ಮೊತ್ತ ರೈತರ ಖಾತೆಗೆ ಜಮಾ ಆಗುತ್ತದೆ.

Join Nadunudi News WhatsApp Group

Crop Compensation Money Release
Image Credit; Live Mint

ನಿಮ್ಮ ಖಾತೆಗೆ ಬಂದಿದೆಯಾ ಈ ರೀತಿ ಚೆಕ್ ಮಾಡಿ
ರೈತರು  ಬೆಳೆ ಪರಿಹಾರ ಮೊತ್ತವನ್ನು ಪಡೆಯಲು ಮುಖ್ಯವಾಗಿ FRUITS ಸಾಫ್ಟ್‌ ವೇರ್‌ ನಲ್ಲಿ ಹೆಸರನ್ನು ನವೀಕರಿಸಬೇಕು. ರೈತರು ಬ್ಯಾಂಕ್‌ ಗೆ ಹೋಗಿ ಎನ್‌ಪಿಸಿಐ ಮಾಡಬೇಕು. ಖಾತೆಯನ್ನು ನಿರ್ಬಂಧಿಸಿದರೆ ಅಥವಾ ಮುಚ್ಚಿದ್ದರೆ, ಅದನ್ನು ಮರು-ತೆರೆಯಬೇಕು. ರೈತರು ಬ್ಯಾಂಕ್ ಖಾತೆಗೆ ಹೋಗಿ IFSC, N.P.C.I ಅನ್ನು ನವೀಕರಿಸಬೇಕು. ಇಷ್ಟೆಲ್ಲ ಪ್ರಕ್ರಿಯೆ ಪೂರ್ಣಗೊಂಡಿದ್ದರೆ ಮಾತ್ರ ನಿಮ್ಮ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮಾ ಆಗುತ್ತದೆ. ಈ ಕೆಲಸಗಳನ್ನು ನೀವು ಮಾಡುವಲ್ಲಿ ವಿಫಲವಾದರೆ ನೀವು ಪರಿಹಾರ ಮೊತ್ತದಿಂದ ವಂಚಿತಾಗಾರಬೇಕಾಗುತ್ತದೆ.  ರೈತರು https://parihara.karnataka.gov.in/service92/ ಈ ವೆಬ್‌ ಸೈಟ್‌ ನಲ್ಲಿ ಬರ ಪರಿಹಾರ ಮೊತ್ತ ಜಮಾ ಆಗಿದೆಯಾ ಇಲವೇ ಎನ್ನುವುದನ್ನು ಪರಿಶೀಲಿಸಿಕೊಳ್ಳಬಹುದು.

Crop Compensation Money Update
Image Credit; Live Mint

Join Nadunudi News WhatsApp Group