Compensation Credit: ಈ ದಿನದಂದು ರೈತರ ಖಾತೆಗೆ ಜಮಾ ಆಗಲಿದೆ 2000 ರೂ, ಬ್ಯಾಂಕ್ ಖಾತೆ ಚೆಕ್ ಮಾಡಿಕೊಳ್ಳಿ.

ಈ ದಿನಾಂಕದಂದು ರೈತರ ಖಾತೆಗೆ 2000 ಹಣ ಜಮಾ ಆಗಲಿದೆ.

Crop compensation Money For Farmers: ಈ ಬಾರಿ ರಾಜ್ಯದಲ್ಲಿ ಮಳೆಯ ಕೊರತೆ ಉಂಟಾಗಿರುವುದು ಎಲ್ಲರಿಗು ತಿಳಿದಿರುವ ವಿಚಾರ. ಮಳೆಯ ಅಭಾವದಿಂದ ರಾಜ್ಯದಲ್ಲಿ ಹೆಚ್ಚಿನ ನಷ್ಟವನ್ನು ರೈತರು ಅನುಭವಿಸುವಂತಾಗಿದೆ. ರೈತರು ಬೆಳೆ ಹಾನಿಯಿಂದಾಗಿ ಲಕ್ಷಾಂತರ ನಷ್ಟವನ್ನು ಅನುಭವಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರೈತರಿಗೆ ಬರ ಪರಿಹಾರ ನೀಡಲು ಯೋಜನೆ ಹೂಡಿದೆ. ರೈತರಿಗೆ ಬೆಳೆ ಪರಿಹಾರ ಬಿಡುಗಡೆ ಮಾಡುವ ಬಗ್ಗೆ ಸಚಿವಾ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಲಾಗಿದ್ದು, ಇದೀಗ ರೈತರ ಬೆಳೆ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗುವ ಬಗ್ಗೆ ಸಚಿವ Krishna Byre Gowda ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

Crop compensation For Farmers
Image Credit: Deccanherald

ರಾಜ್ಯದ ರೈತರಿಗೆ ಬೆಳೆ ಪರಿಹಾರ ನೀಡಲು ಸರ್ಕಾರದ ಸಿದ್ಧತೆ
ರಾಜ್ಯ ಸರ್ಕಾರ ಬೆಳೆಯ ಪರಿಹಾರಕ್ಕೆ ಮೊದಲ ಕಂತಿನ ಹಣವನ್ನು ಬಿಡುಗಡೆ ಮಾಡಿದೆ ಎಂದು ಸಿದ್ದರಾಮಯ್ಯ ಅವರು ಈ ಹಿಂದೆ ಮಾಹಿತಿ ನೀಡಿದ್ದಾರೆ. ಮೊದಲೇ ಕಂತಿನಲ್ಲಿ ರೂ. 2,000 ವರೆಗೆ ಬೆಳೆ ಪರಿಹಾರ ಬಿಡುಗಡೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈ ಬಗ್ಗೆ ರಾಜ್ಯದ ಕೃಷ್ಣಬೈರೇಗೌಡ ಅವರು ಅಧಿಕೃತ ಘೋಷಣೆ ಹೊರಡಿಸಿದ್ದಾರೆ.

ಮೊದಲ ಕಂತಿನಲ್ಲಿ ಅರ್ಹ ರೈತರಿಗೆ DBT ಮೂಲಕ ತಲಾ 2,000 ರೂ. ಬೆಳೆ ಪರಿಹಾರ ನೀಡಲು ನಿರ್ಧರಿಸಿದ್ದೇವೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಸದ್ಯ ರಾಜ್ಯದ ರೈತರು ಮೊದಲ ಕಂತಿನ ಬೆಳೆ ಪರಿಹಾರವನ್ನು ಈ ದಿನಾಂಕದಂದು ಪಡೆಯಬಹುದು.

Drought Relief Fund
Image Credit: NDTV

ಈ ದಿನದಂದು ರೈತರ ಖಾತೆಗೆ ಜಮಾ ಆಗಲಿದೆ 2000 ರೂ
ಸದ್ಯ ಬರಗಾಲದಿಂದ ಬೇಸತ್ತಿರುವ ರಾಜ್ಯದ ರೈತರಿಗೆ ರಾಜ್ಯ ಸರ್ಕಾರದಿಂದ ಗುಡ್ ನ್ಯೂಸ್ ಲಭಿಸಿದೆ. ರಾಜ್ಯ ಸರ್ಕಾರ ರೈತರ ಖಾತೆಗೆ ಬೆಳೆ ಪರಿಹಾರ ಹಣ ಜಮಾ ಆಗುವ ಆಬಗ್ಗೆ ಮಾಹಿತಿ ನೀಡಿದೆ. ರೈತರು ಬೆಳೆ ಪರಿಹಾರದ ಮೊತ್ತಕ್ಕಾಗಿ ಕಾಯುತ್ತಿದ್ದಾರೆ. ರಾಜ್ಯದ ರೈತರಿಗೆ ಈ ವಾರವೇ ನಗದು ಹಣವನ್ನು ನೇರ ವರ್ಗಾವಣೆಯ ಮೂಲಕ ಪಾವತಿಸಲಾಗುತ್ತದೆ ಎಂದು ಕಂದಾಯ ಸಚಿವರಾದ ಕೃಷ್ಣಬೈರೇಗೌಡ ಅವರು ಮಾಹಿತಿ ನೀಡಿದ್ದಾರೆ. ರಾಜ್ಯದ ರೈತರು ಈ ವಾರದಲ್ಲಿಯೇ ಬರ ಪರಿಹಾರದ ಮೊತ್ತವನ್ನು ಪಡೆಯಬಹುದು. ಹಣ ಜಮಾ ಆಗಿರುವ ಬಗ್ಗೆ ಖಾತೆಯನ್ನು ಪರಿಶೀಲಿಕೊಳ್ಳಬಹುದು.

Join Nadunudi News WhatsApp Group

Join Nadunudi News WhatsApp Group